ಆ ದಿನ ಡಾ| ಸತ್ಯ ಹಾಸ್ಪೆಟಲ್ ಗೆ ಬಂದಿರಲ್ಲ! ಬೆಳಿಗ್ಗೆ ಸುಮಾರು 11ಗಂಟೆಯ ಹೊತ್ತಿಗೆ ಹಾಸ್ಪೆಟಲ್ ನಿಂದ ಫೋನ್ ಬರುತ್ತೆ! “ಸಾರ್, ತುಂಬಾ ಅರ್ಜೆಂಟ್, ಒಂದು ಸರ್ಜರಿ ಆಗ್ಬೇಕಿದೆ! ನೀವು ಬರದೇ ಇದ್ರೆ ಆ ಹುಡುಗ ಸತ್ತೇ ಹೋಗ್ತಾನೆ”! ಎಂದು ತನ್ನ ಸಹ ಸಿಬ್ಬಂಧಿ ಹೇಳಿದ್ದೇ ತಡ, ಸತ್ಯ ತಡಮಾಡದೆ ಹಾಸ್ಪೆಟಲ್ ಗೆ ಸತ್ಯ ಬರ್ತಾರೆ! ಹಾಸ್ಪೆಟಲ್ ಹಾಲ್ ಲ್ಲಿಯೇ ಡಾಕ್ಟರ್ ಗೆ ಕಾಯ್ತಾ ಇದ್ದ ಪೇಷೆಂಟ್ ತಂದೆ, ಜಗನ್ನಾಥ್ “ಏನ್ರೀ… ಇಷ್ಟೊತ್ತು ತಂಗೊಂಡ್ರಿ, ಬರಲಿಕ್ಕೆ. ಆ್ಞಂ, ನನ್ನ ಮಗನ ಜೀವಕ್ಕೆ ಅಪಾಯವಿದೆ ಅಂತ ನಿಮ್ಗೆ ಗೊತ್ತಿಲ್ವಾ? ನಿಮಗೆ ಪ್ರಜ್ಞೆ ಇಲ್ವಾ? ಇರ್ ರೆಸ್ಪಾನ್ಸಿಬಲ್ ಫೆಲೋ”! ಅಂಥ ಸಿಕ್ಕಾಪಟ್ಟೆ ರೇಗಾಡಿ ಬಿಡ್ತಾರೆ. ಅವರ ಮಗನಿಗೆ ಆದಷ್ಟು ಬೇಗ ಮೇಜರ್ ಸರ್ಜರಿ ಆಗ್ಲೇಬೇಕಿರುತ್ತೆ! ಆದ್ರೂ, ಡಾಕ್ಟರ್ ಉದ್ದೇಶಪೂರ್ವಕವಾಗಿಯೇ ಲೇಟ್ ಆಗಿ ಬಂದಿದ್ದಾರೆ, ನನ್ ಮಗಾ ಸತ್ರೆ ಇವ್ರಿಗೇನೂ ನಷ್ಟ ಇಲ್ಲ! ದುಡ್ಡೇ ಮುಖ್ಯ ಇವ್ರಿಗೆ! ಅಂಥ ಅನ್ಕೊಂಡ ಜಗನ್ನಾಥ್, ಡಾ| ಸತ್ಯಗೆ ಬಾಯಿಗೆ ಬಂದಹಾಗೆ ಮಾತಾಡಿದ್ರು!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಬೇರೆ ಡಾಕ್ಟರ್ ಆಗಿದ್ರೆ, ಜಗನ್ನಾಥ್ ಹತ್ರ ಆ ಪಾಟಿ ಬೈಸಿಕೊಂಡು, ಸುಮ್ನೆ ಇರ್ತಾ ಇರ್ಲಿಲ್ಲ! ಯಾರ್ರೀ, ಸುಖಾ ಸುಮ್ನೆ ಪರಿಸ್ಥಿತಿ ಅರ್ಥ ಮಾಡ್ಕೊಳ್ಳದೆ ಬೈದ್ರೆ ತೆಪ್ಪಗೆ ಇರ್ತಾರೆ ಹೇಳಿ? ಯಾರೂ ಇರಲ್ಲ! ನಿಮ್ಗೆ ಯಾರಾದ್ರೂ ಸುಮ್ ಸುಮ್ನೆ ಬೈದ್ರೆ ಸುಮ್ನೆ ಇರ್ತೀರೇನ್ರೀ? ಆದ್ರೆ ಡಾ| ಸತ್ಯ ಜಗನ್ನಾಥ್ ಮಾತಿಗೆ ಬೇಜಾರಾಗಲ್ಲ! ಮಗ ಸಾವಿನ ಹಾಸಿಗೆಯಲ್ಲಿ ಮಲಗಿರೋದ್ರಿಂದ ಜಗನ್ನಾಥ್ ಈ ರೀತಿ ನನ್ಗೆ ರೇಗ್ತಾ ಇದ್ದರೆ ಅಂತ ಸುಮ್ನಾಗ್ತಾರೆ! ತುಂಬಾ, ಕೂಲ್ ಆಗಿ, “ಸರ್, ಐ ಆ್ಯಂ ಸಾರಿ, ನಾನ್ ಹಾಸ್ಪೆಟಲ್ನಲ್ಲಿ ಇರ್ಲಿಲ್ಲ, ನಿಮ್ ಮಗನಿಗೆ ಅರ್ಜೆಂಟ್ ಆಗಿ ಆಪರೇಷನ್ ಆಗ್ಬೇಕಿದೆ ಎಂದು ಕಾಲ್ ಬಂದ ಕೂಡ್ಲೆ ಹಾಸ್ಪೆಟಲ್ ಗೆ ಬಂದ್ದಿದ್ದೀನಿ, ದೇವ್ರಿದ್ದಾನೆ! ನಿಮ್ಮ ಮಗನಿಗೆ ಏನೂ ಆಗಲ್ಲ! ನಾನು ನನ್ನ ಕೈಲಾದ ಪ್ರಯತ್ನ ಮಾಡ್ತೀನಿ ಅಂಥ ತುಂಬಾ ಭಾವುಕರಾಗಿಯೇ ಹೇಳ್ತಾರೆ!
“ಅಲ್ಲಾ ಸ್ವಾಮಿ. ಲೇಟ್ ಆಗಿ ಬಂದಿದ್ದಲ್ಲದೇ, ಕೂಲ್ ಆಗಿ, ಏನೂ ಆಗ್ದೇ ಇರೋರ್ ಥರ ಮಾತಡ್ತಾ ಇದ್ದೀರಲ್ರೀ! ನಿಮ್ಗೆ ಏನ್ ಆಗ್ಬೇಕು, ಹೇಳಿ! ಏನೂ ಆಗಲ್ಲ ಅಂತೀರಾ? ಅವ್ನಿಗೆ ಹೆಚ್ಚು ಕಡಿಮೆ ಆದ್ರೆ, ನಾನೂ ನನ್ ಹೆಂಡ್ತೀ ಬದ್ಕೊಕ್ಕೇ ಆಗಲ್ಲ! ಅರ್ಥ ಆಯ್ತಾ? ನೀವೆಲ್ಲಾ ಬರೀ ದುಡ್ಡಿಗಾಗಿನೇ ಕೆಲ್ಸ ಮಾಡೋರು! ಅಂಥ ಮತ್ತೆ ಮತ್ತೆ ಸಿಟ್ಟಿಂದ ಬಾಯಿಗೆ ಬಂದಹಾಗೆ ಮಾತಾಡ್ತಾರೆ ಜಗನ್ನಾಥ್! ಇವ್ರತ್ರ ಮಾತಾಡ್ತಾ ಇದ್ರೆ, ಇವ್ರ ಮಗ, ಉಳಿಯಲ್ಲ ಅಂಥ ಅನ್ಕೊಂಡು, ಜಗನ್ನಾಥ್ ಗೊಂದು ಸ್ಮೈಲ್ ಕೊಟ್ಟು, ಆಪರೇಷನ್ ಥಿಯೇಟರಿಗೆ ಹೋಗ್ತಾರೆ ಡಾ| ಸತ್ಯ!
ಅಂತೂ ಇಂತೂ ಹರಸಾಹಸ ಪಟ್ಟು, ಜಗನ್ನಾಥ್ ರ ಮಗನನ್ನು ಉಳಿಸ್ತಾರೆ! ಸತತ ಆರುಗಂಟೆಗಳ ಕಾಲ, ಶಸ್ತ್ರ ಚಿಕಿತ್ಸೆ ಮಾಡಿದ ಸತ್ಯ, ಜಗನ್ನಾಥ್ ರ ಮಗನಿಗೆ ಪುನರ್ಜನ್ಮ ನೀಡುವಲ್ಲಿ ಯಶಸ್ವಿ ಆಗ್ತಾರೆ! ಸರ್ಜರಿ ಮುಗಿಯವಷ್ಟರಲ್ಲಿ, ಸಂಜೆ ಆರುಗಂಟೆ ಆಗುತ್ತೆ! ಆಪರೇಷನ್ ಥಿಯೇಟರ್ ನಿಂದ ಹೊರ ಬಂದ ಸತ್ಯ! ಹೊರಗಡೆ ಕಾಯುತ್ತಿದ್ದ, ಜಗನ್ನಾಥ್ ರನ್ನು ನೋಡಿ, ಒಂದೇ ಒಂದು ಸ್ಮೈಲ್ ಮಾಡಿ, ಮಾತನಾಡದೇ ಮನೆ ಕಡೆ ಹೋಗ್ತಾರೆ!
ಅವರ ಹಿಂದೆಯೇ ಬಂದ ನರ್ಸ್, ಜಗನ್ನಾಥ್ ನಿಮ್ಮ ಮಗನ ಪ್ರಾಣಕ್ಕೆ ಯಾವುದೇ ತೊಂದ್ರೆ ಇಲ್ಲ! ನೀವಿನ್ನು ನಿಶ್ಚಿಂತೆಯಿಂದ ಇರಿ! ಡಾ| ಸತ್ಯ ನಿಮ್ಮ ಮಗನ ಪ್ರಾಣ ಉಳಿಸಿದ್ರು! ಅಂತ ಹೇಳ್ತಾರೆ. ” ವ್ಹಾವ್, ರೀಯಲಿ!… ಥ್ಯಾಂಕ್ಸ್ ಮೇಡಂ… ತುಂಬಾ ತುಂಬಾ ಥ್ಯಾಂಕ್ಸ್, ಥ್ಯಾಂಕ್ಸ್ ಅ ಲಾಟ್! ಆದ್ರೂ, ನಿಮ್ಮ ಡಾ| ಸತ್ಯಗೆ ಭಾರಿ ಧಿಮಾಕು ಕಣ್ರೀ, ತುಂಬಾ ಅಹಂಕಾರಿ ಮನುಷ್ಯ! ನೂರು ಮಾತಾಡಿದ್ರು ನಗ್ತಾನೇ ಹೋಗ್ತಾರೆ! ಈಗ ನೋಡಿ, ನನ್ನತ್ರ ಬಂದು, ಹೇಳಿ ಹೋಗಬಹುದಿತ್ತಾಲ್ಲಾ? ಸುಮ್ನೆ ನಗ್ತಾ ಹೋದ್ರು! ಎಂದು ಮಗನನ್ನು ಬದುಕಿಸಿದ್ರಲ್ಲಾ ಅನ್ನೋ ಸ್ಮರಣೆ ಇಲ್ಲದೆ ಬೈತಾನೇ ಇರ್ತಾರೆ!
ಆಗ ನರ್ಸ ಹೇಳೋ ಮಾತು ಎಂಥಹಾ ಕಲ್ಲು ಹೃದಯಕ್ಕೂ ಕೂಡ ಅಳುತರುತ್ತೆ!
“ಮಿಸ್ಟರ್ ಜಗನ್ನಾಥ್, ಬಾಯಿಗೆ ಬಂದ ಹಾಗೆ ಮಾತಾಡಬೇಡಿ, ಡಾ| ಸತ್ಯ, ನಿಮ್ ಜೊತೆ ಮಾತಾಡ್ತಾ ಇದ್ದಿದ್ರೆ, ಆಗ ಮಾತಿಗೆ ಮಾತು ಬೆಳೆಸುತ್ತಾ ಇದ್ದಿದ್ರೆ ನಿಮ್ ಮಗಾ ಉಳಿತಾ ಇರಲಿಲ್ಲ! ಅಷ್ಟೇ ಅಲ್ಲಾ, ಅವ್ರು ಇವತ್ತು ಮಾತಡೋದಿರಲಿ, ಆಸ್ಪತ್ರೆಗೆ ಬರುವ ಸ್ಥಿತಿಯಲ್ಲೇ ಇರ್ಲಿಲ್ಲ! ನಿನ್ನೆ ರಾತ್ರಿ, ರಸ್ತೆ ಅಪಘಾತದಲ್ಲಿ ಅವ್ರ ಮಗ ಸತ್ತಿದ್ದಾನೆ! ಮನೆಯಲ್ಲಿ ಮಗನ ಹೆಣ ಇಟ್ಕೊಂಡು, ನಿಮ್ಮ ಮಗನನ್ನು ಉಳಿಸೋಕೆ ಬಂದಿದ್ರು! ಗೋತ್ತೇನ್ರೀ? ಎಂದು ನರ್ಸ್ ಹೇಳ್ತಾರೆ.
ಆಗ, ಅಯ್ಯೋ ದೇವ್ರೇ, ತಪ್ಪು ಮಾಡಿಬಿಟ್ಟೆ, ನನ್ನ ಮಗನ ಜೀವವನ್ನು ಉಳಿಸಿದ ಆ ಪುಣ್ಯಾತ್ಮನಿಗೆ ಬಾಯಿಗೆ ನೀಚಪಾಚ ಹೇಳ್ದೆ! ಎಂದು ಆಗ ಜಗನ್ನಾಥ್ ತುಂಬಾನೆ ಪಶ್ಚಾತಾಪ ಪಡ್ತಾರೆ! ಆದ್ರೆ ಏನು ಪ್ರಯೋಜನ ಹೇಳಿ? ಮಾತು ಆಡಿದರೆ ಹೋಯಿತು, ಮುತ್ತು ಹೊಡೆದರೆ ಹೋಯಿತು. ನಮಗೆ ಸಮಸ್ಯೆ ಇದೆ ಎಂದು, ಬೇರೆಯವರ ಪರಿಸ್ಥಿತಿಯನ್ನೂ ಅರ್ಥಮಾಡಿಕೊಳ್ಳದೆ, ಬೇಕಾಬಿಟ್ಟಿ ಮಾತಾಡೋದು ತಪ್ಪು!
ಈ ಸ್ಟೋರಿ, ಓದಿದ್ ಮೇಲಾದ್ರೂ.. ನಾವೆಲ್ಲಾ, ಸನ್ನಿವೇಶವನ್ನು ಅರ್ಥಮಾಡಿಕೊಂಡು ಮಾತನಾಡೋಣ! ಕೋಪಕ್ಕಿಂತ ದೊಡ್ಡ ಶತ್ರು ಬೇರೆ ಇಲ್ಲ! ತಪ್ಪು ಮಾತಾಡಿ, ನಂತರ ಪಶ್ಚಾತಾಪ ಪಡಲಿಕ್ಕಿಂತ ಮೊದಲೇ ಯೋಚಿಸಿ ಮಾತನಾಡಿ! ನಮಗಿಂತಲೂ ನೋವು ಅನುಭವಿಸುತ್ತರುವವರು ನಮ್ಮೊಡನೆಯೇ ಇದ್ದಾರೆ! ಸೆನ್ಸ್ ಇಲ್ಲದೆ ಮಾತಾಡೋದನ್ನ ಇಲ್ಲಿಗೆ ಬಿಟ್ಟು ಬಿಡೋಣ! ನೆನಪಿರಲಿ.
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಉದ್ಯಮಿಗಳಿಗೆ ಲಕ್ಷಗಟ್ಟಲೆ ಸಾಲ ಕೊಡೋ ಕೋಟ್ಯಾಧಿಪತಿ ಭಿಕ್ಷುಕ..!
ಬೆಂಗಳೂರಿನಲ್ಲಿ ಇನ್ಮುಂದೆ ಓಲಾ ಬೈಕ್ ಟ್ಯಾಕ್ಸಿ..! ಪ್ರತಿ ಕಿ.ಮೀ.ಗೆ 2ರೂ ಮಾತ್ರ.. !
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!