ಮುಂದಿನ ದಿನಗಳಲ್ಲಿ ಒಂದು ಸಣ್ಣ ಸಂಸ್ಥೆಯಲ್ಲಿ 10 ಮಂದಿ ಉದ್ಯೊಗಿಗಳಿದ್ದರೂ ಅವರಿಗೆ ಭವಿಷ್ಯ ನಿಧಿ (ಪಿಎಫ್) ನೀಡಬೇಕು ಎಂಬುದರ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು ಈ ಕುರಿತು ಸೊಮವಾರ ಲೋಕಸಭೆಯಲ್ಲಿ ತಿಳಿಸಿದೆ. ಇದರ ಉದ್ದೇಶ ಸಣ್ಣ ಸಣ್ಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂಧಿಗಳಿಗೆ ಭವಿಷ್ಯ ನಿಧಿ ಒದಗಿಸಿಕೊಡುವುದು ಕೇಂದ್ರದ ಆಲೋಚನೆಯಾಗಿದೆ.
ಸಧ್ಯಕ್ಕೆ ಪ್ರಸ್ತುತದಲ್ಲಿ ಒಂದು ಸಂಸ್ಥೆಯಲ್ಲಿ 20 ಉದ್ಯೋಗಿಗಳು ಅಥವಾ ಅದಕ್ಕಿಂತ ಅಧಿಕ ಮಂದಿ ಕಾರ್ಯ ನಿರ್ವಹಿಸುವ ಸಂಸ್ಥೆಗಳಿಗೆ ಈ ಸೌಲಭ್ಯ ಒದಗಿಸಲಾಗುತ್ತಿದೆ. ಅಸಂಘಟಿತ ವಲಯದ ಮತ್ತಷ್ಟು ಕಾರ್ಮಿಕರನ್ನು ಭವಿಷ್ಯ ನಿಧಿಯ ವ್ಯಾಪ್ತಿಗೆ ಬರಲು ಸರಕಾರ ಪ್ರಯತ್ನಿಸುತ್ತಿದ್ದು, ಇಲ್ಲಿನ ಕಾರ್ಮಿಕರಿಗೆ ತಮ್ಮ ನಿವೃತ್ತಿಯ ಬಳಿಕ ಆರ್ಥಿಕ ನೆರವಾಗಲಿ ಎಂಬುದು ಇದರ ಆಶಯವಾಗಿದೆ. ಎಂದು ಹೇಳಿದ್ದಾರೆ.
ಇನ್ನು ಎಲ್ಲಾ ತಂಬಾಕು ಉತ್ಪನ್ನದ ಪ್ಯಾಕ್‍ಗಳ ಮೇಲೆ ತಂಬಾಕು ಆರೋಗ್ಯಕ್ಕೆ ಹಾನಿಕಾರಕ ಎಂಬ ಚಿತ್ರವನ್ನು ಶೇ85ರಷ್ಟು ದೊಡ್ಡದಾಗಿ ಬಿಂಬಿಸಬೇಕು ಎಂದು ಹೇಳಿರುವ ಕೇಂದ್ರ ಸರ್ಕಾರ ಇದರಿಂದ ಬೀಡಿ ಕಾರ್ಮಿಕರಿಗೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ, ಬೀಡಿ ಕಾಮಿಕರಿಗೆ ವೃತ್ತಿಪರ ಕೌಶಲ್ಯ ನೀಡುವ ಕುರಿತು ಕಾರ್ಮಿಕ ಸಚಿವಾಲಯ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
ಬೀಡಿ ಕಾರ್ಮಿಕರು ಸಮೂಹ ವಿಮೆ ವ್ಯಾಪ್ತಿಯಲ್ಲಿ ಬರುವುದರಿಂದ, ಈ ಯೋಜನೆಯ ನಿಯಮದ ಪ್ರಕಾರ ಸಹಜ ಸಾವಿಗೆ 10 ಸಾವಿರ ರೂ. ಮತ್ತು ಆಕಸ್ಮಿಕವಾಗಿ ಸತ್ತರೆ 25 ಸಾವಿರ ರೂ. ಆರ್ಥಿಕ ನೆರವು ನೀಡಲಾಗುವುದು ಎಂದರು. ಅಲ್ಲದೇ ಮೃತ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೆ 1500ರೂ ಒದಗಿಸಲಾಗುತ್ತದೆ. ವಿಧವೆ ಅಥವಾ ವಿಧುರರಿಗೆ ಸಾಮಾಜಿಕ ಭದ್ರತೆಯ ಯೋಜನೆಯಡಿಯಲ್ಲಿ ಅವರಿಬ್ಬರ ಪುತ್ರಿಯರ ವಿವಾಹದ ಸಮಯದಲ್ಲಿ ರೂ 5 ಸಾವಿರ ನೆರವು ನೀಡಲಾಗುವುದು ಎಂದರು.
POPULAR STORIES :
ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!
ನೇತಾಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ
ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!
ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ..!!
ಮಹಿಳೆಯರೆ… ಸ್ಮೋಕ್ ಮಾಡ್ತಾ ಇದೀರಾ…! ಹುಷಾರ್…!
ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!