ದಿನ ಕಳೀತಾನೆ ಇರುತ್ತೆ..! ಆದ್ರೆ ಜೀವನದಲ್ಲಿ ಯಾವುದೇ ಬದಲಾವಣೆ ಇಲ್ಲ..! ಬರೀ ಕೆಲ್ಸ ಕೆಲ್ಸ ಕೆಲ್ಸ..! ಸ್ವಲ್ಪ ರೆಸ್ಟ್ ಮಾಡ್ಲೇಬೇಕಲ್ವಾ..? ಕೆಲ್ಸ ಇದ್ದಿದ್ದೇ ಕಣ್ರೀ..ಇರೋದ್ ಒಂದ್ ಲೈಫನ್ನ ಜಾಲಿಯಾಗಿ ಕಳೀದೇ ಇದ್ರೆ ಹೆಂಗೆ..? ಆಗಾಗ ಹೊರಗಡೆ ಪ್ರವಾಸ ಮಾಡ್ತಿರ್ಬೇಕು..! ಟ್ರಿಪ್ ಹೋಗ್ಬಂದ್ಮೇ¯ ತುಂಬಾ ಆ್ಯಕ್ಟಿವ್ ಆಗಿ, ಲವಲವಿಕೆಯಿಂದ ಕೆಲ್ಸದಲ್ಲಿ ನಮ್ಮನ್ ನಾವು ತೊಡಗಿಸ್ಕೊಳ್ಬಹುದು..!
ಹ್ಞೂಂ..ನಂಗೊತ್ತು ನೀವೂ ಕೂಡ ಪ್ರವಾಸ ಪ್ರಿಯರು ಅಂತ..! ಆಗಾಗ ಟೂರ್ ಹೋಗ್ತಾ ಇರ್ತೀರಲ್ವಾ..? ನಿಮ್ಮ ಮುಂದಿನ ಪ್ರವಾಸ ಎಲ್ಲಿಗೆ..? ಓಹೋ, ಇನ್ನೂ ಪ್ಲಾನ್ ಮಾಡಿಲ್ವಾ..? ಸರಿ, ಹಾಗಾದ್ರೆ ನಾನೊಂದು ಒಳ್ಳೆಯ ಸ್ಥಳವನ್ನು ನಿಮ್ಗೆ ಪರಿಚಯಿಸ್ತೀನಿ..ಸಾಧ್ಯವಾದ್ರೆ ನಿಮ್ಮ ಮುಂದಿನ ಪ್ರವಾಸ ಈ ಸುಂದರ ತಾಣದತ್ತ ಸಾಗಲಿ..!
ಕೊಡಗಿನ ವಿರಾಜಪೇಟೆಯಲ್ಲಿರೋ ‘ಎವರ್‍ಗ್ರೀನ್ ಕೌಂಟಿ’ (Evergreen County) ರೆಸಾರ್ಟ್‍ಗೆ ಒಂದ್ ಸಲ ಹೋಗಿ..ಅಲ್ಲಿದ್ದು ಬಂದ ಮೇಲೆ ನೀವೇ ನಿಮ್ಮವರಿಗೆ ಅಲ್ಲಿಗೆ ಹೋಗಿ ಬರಲು ಹೇಳ್ತೀರ..! ಅಷ್ಟೊಂದು ಸಖತ್ ಆಗಿದೆ ಈ ರೆಸಾರ್ಟ್.
ಪ್ರವಾಸ್ ಹೋಗೋದು ದಿನನಿತ್ಯದ ಜೀವನ ಶೈಲಿಯಿಂದ ಸ್ವಲ್ಪ ದೂರ ಉಳಿದು ಆರಾಮಾಗಿ ಕಾಲಕಳೆಯೋಕೆ.. ಮನಸ್ಸಿಗೆ ನೆಮ್ಮದಿ ಬೇಕು.. ಸುಂದರ ಪಕೃತಿ ಮಡಿಲಿನಲ್ಲಿ, ಮರಗಿಡಗಳ ನಡುವಿನಲ್ಲಿ ಸಿಗೋ ಮಜಾ ಬೇರೆಲ್ಲೂ ಸಿಗೋಕೆ ಸಾಧ್ಯವೇ ಇಲ್ಲ. ಬರುವ ಪ್ರವಾಸಿಗರಿಗೆ ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಖುಷಿ, ನೆಮ್ಮದಿ ನೀಡೋಕೆ ಅಂತಾನೇ ನಿರ್ಮಾಣವಾಗಿದೆ ಎವರ್‍ಗ್ರೀನ್ ಕೌಂಟಿ..!
2009ರಲ್ಲಿ ಎವರ್‍ಗ್ರೀನ್ ಕೌಂಟಿ ಆರಂಭವಾಯ್ತು.. ಇದರ ಮಾಲೀಕ ಭಜನ್ ಬೋಪಣ್ಣ. ಇವರು ಸಿಂಗಾಪುರ್, ನಮ್ಮ ಬೆಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ವಿವಿಧ ಕಂಪನಿಗಳಲ್ಲಿ ದುಡಿದವರು. ಕೈ ತುಂಬಾ ಸಂಬಳ ಬರ್ತಿದ್ರು ನೆಮ್ಮದಿ ಇರ್ಲಿಲ್ಲ..! ಸ್ವಚ್ಛಂದದ ಪರಿಸರದ ನಡುವೆ ಸಿಗೋ ನೆಮ್ಮದಿ ಎಷ್ಟು ದುಡ್ಡು ಕೊಟ್ರು ನಗರದಲ್ಲಿ ಸಿಗಲ್ಲ ಅಂತ ತನ್ನೂರು ಕೊಡಗಿನತ್ತ ಪಯಣ ಬೆಳೆಸಿದ್ರು. ಆಗ ಅವರ ಕಲ್ಪನೆಗೆ ಬಂದಿದ್ದೆ ಈ ಎವರ್‍ಗ್ರೀನ್ ಕೌಂಟಿ..! ಪ್ರವಾಸ ಪ್ರಿಯರು, ಟ್ರೆಕ್ಕಿಂಗ್ ಪ್ರಿಯರು, ನವಜೋಡಿಗಳು ಎಲ್ಲಾ ವಯೋಮಿತಿಯವರಿಗೂ ಖುಷಿ ನೀಡುವಂತಹ ರೆಸಾರ್ಟ್ ಆರಂಭಿಸೋಕೆ ನಿರ್ಧರಿಸಿದ ಭಜನ್ ತಡಮಾಡದೇ ಎವರ್‍ಗ್ರೀನ್ ಕೌಂಟಿಯನ್ನು ಆರಂಭಿಸಿಯೇ ಬಿಟ್ಟರು..!
ಬಿದಿರು, ಮರದ ಕುಟೀರಗಳು ಇಲ್ಲಿನ ಪ್ರಮುಖ ಆಕರ್ಷಣೆ.. ಹಳ್ಳಿಯ ವಾತಾವರಣ.. ಹಳ್ಳಿ ಸಂಸ್ಕøತಿಯ ಕುಟೀರ, ಗುಡಿಸಲುಗಳೊಡನೆ ಐಷಾರಾಮಿ ವ್ಯವಸ್ಥೆ ಇಲ್ಲಿದೆ.
ಕಾಫಿ, ಸಿಲ್ವರ್‍ಓಕ್, ಪೆಪ್ಪರ್ ಪ್ಲಾಂಟೇಷನ್, ಹಣ್ಣಿನ ತೋಟ, ತರಕಾರಿ ತೋಟ, ಪೆಟ್ ಝೂ ಕೂಡ ಕೌಂಟಿಯ ಸೌಂದರ್ಯವನ್ನು ಹೆಚ್ಚಿಸಿವೆ. ಸಾಹಸ ಕ್ರೀಡಾ ಪ್ರಿಯರಿಗೂ ಸಖತ್ ಇಷ್ಟವಾಗೋ ಪ್ಲೇಸ್ ಇದು. ರಾಫ್ಟ್ ಬಿಲ್ಡಿಂಗ್, ವೈಲ್ಡರ್ನೆಸ್ ಕ್ಯಾಂಪಿಂಗ್, ಗನ್ ಫೈರಿಂಗ್ ಅವಕಾಶ ಕೂಡ ಇಲ್ಲಿದೆ.
ಅಷ್ಟೇಅಲ್ಲ ಎವರ್‍ಗ್ರೀನ್ ಕೌಂಟಿ ಟೀಂನವ್ರು ರಾತ್ರಿ ತೋಟವನ್ನು ಸುತ್ತಾಡಿಸೋದು, ಸಾಹಸ ಚಟುವಟಿಕೆಗಳನ್ನು ನಡೆಸೋದು, ಮನರಂಜನೆ ಕಾರ್ಯಕ್ರಮಗಳನ್ನು ನಡೆಸೋದು, ಕ್ಯಾಂಪಿಂಗ್ ಹೀಗೆ ಅನೇಕ ಚಟುವಟಿಕೆಗಳನ್ನು ಕೂಡ ಮಾಡಿಸ್ತಾರೆ..!
ಇನ್ನು ಆಹಾರದ ವಿಷಯಕ್ಕೆ ಬಂದ್ರೆ ಕೊಡುಗು ಸಂಸ್ಕøತಿಯ ವೈವಿದ್ಯಮಯ ತಿನಿಸುಗಳ ಜೊತೆಗೆ ಉತ್ತರ ಭಾರತ ಸೇರಿದಂತೆ ದೇಶದ ವಿವಿಧ ಕಡೆಗಳ ತಿನಿಸುಗಳು ಇಲ್ಲಿ ಸಿಗುತ್ತವೆ. ಮನೆ ಮಂದಿಯಲ್ಲಿ ಉಪಚಾರ ಮಾಡ್ತಾರೆ. ಇಲ್ಲಿನ ಹಣ್ಣಿನ ತೋಟಗಳನ್ನು ಸುತ್ತಾಡಿ ನಿಮಗಿಷ್ಟ ಬಂದ ಹಣ್ಣುಗಳನ್ನು ಕಿತ್ತು ತಿನ್ನಬಹುದು. ಕಟ್ಟಿಗೆ ಒಲೆಯಲ್ಲಿ ಕಾಯಿಸಿದ ಬಿಸಿ ನೀರಿನ ಸ್ನಾನ ಕೂಡ ಮಾಡ್ಬಹುದು..!
ಒಟ್ಟಾರೆಯಾಗಿ ನಿಮಗೆ ಯಾವುದೇ ಕೊರತೆ ಆಗದಂತೆ ಇಲ್ಲಿ ಆತಿಥ್ಯ ನೀಡ್ತಾರೆ. ಒಮ್ಮೆ ಹೋಗಿ ಬಂದ್ರೆ ಖಂಡಿತಾ ಮತ್ತೆ ಮತ್ತೆ ಹೋಗ ಬಯಸ್ತೀರ ಎವರ್‍ಗ್ರೀನ್‍ಕೌಂಟಿಗೆ…
ಸುಮ್ನೆ ನಾನು ಏನೇನೋ ಹೇಳಿದ್ದೀನಿ ಅಂತ ಅನ್ಕೋ ಬೇಡಿ.. ಹೋಗಿ ಬನ್ನಿ..ಆಮೇಲೆ ಅಭಿಪ್ರಾಯ ತಿಳಿಸಿ…
ವಿಳಾಸ : ನಂಗಲ ಹಳ್ಳಿ (ನಂಗಲ ವಿಲೇಜ್), ಬಿಟ್ಟಂಗಲ ಅಂಚೆ, ವಿರಾಜಪೇಟೆ, ಕೊಡಗು, ಕರ್ನಾಟಕ 571218
+91-8067541891 www.evergreencounty.com
- ಶಶಿಧರ್ ಎಸ್ ದೋಣಿಹಕ್ಲು