ಕಂಪ್ಯೂಟರ್ ನಲ್ಲಿ ನಿರಂತರವಾಗಿ ಕೆಲಸ ಮಾಡುವುದರಿಂದಲೂ,ಕ್ರಮಬದ್ದವಲ್ಲದ ಆಹಾರ ಶೈಲಿಯಿಂದಲೂ,ಪರಿಸರದ ಮಾಲಿನ್ಯಗಳು ಹಾಗೂ ಸಿಗರೇಟ್,ಬೀಡಿ ಸೇದುವುದರಿಂದಲೂ ನಿಮ್ಮ ಕಣ್ಣಿನ ದೃಷ್ಟಿಯ ಮೇಲೆ ತೀವ್ರ ಪರಿಣಾಮವುಂಟಾಗುತ್ತದೆ.ನಿಮ್ಮ ಕಣ್ಣುಗಳನ್ನು ಸುರಕ್ಷಿತವಾಗಿಡಲು ವಿಶಿಷ್ಟವಾದ ಆಹಾರಪದಾರ್ಥಗಳು ಅಂದರೆ ಹೇರಳವಾದ ವಿಟಾಮಿನ್ A ಇರುವಂತಹವುಗಳನ್ನು ನೀವು ನಿತ್ಯ ನಿಮ್ಮ ಜೀವನದಲ್ಲಿ ಸೇವಿಸಬೇಕಾಗುತ್ತದೆ.ಕೆಲವೊಂದು ಆಹಾರಗಳು ಯಾವ ರೀತಿಯಾಗಿರುತ್ತವೆ ಅಂದ್ರೆ ಅವುಗಳಲ್ಲಿ ಕೆರೋಟಿನೈಡ್ ಇರುತ್ತವೆ,ಈ ಕೆರೋಟಿನೈಡ್ ನಿಮ್ಮ ದೇಹದೊಳಗೆ ಹೋಗಿ ವಿಟಾಮಿನ್ A ಆಗಿ ಬದಲಾಗುತ್ತದೆ.ಡಯಟೀಷಿಯನ್ ಡಾ! ಅಮಿತಾ ಸಿಂಗ್ ಪ್ರಕಾರ,ಇಂತಹ ಹತ್ತು ಆಹಾರ ಪದಾರ್ಥಗಳಲ್ಲಿ ವಿಟಾಮಿನ್ A ಮತ್ತು ಅಧಿಕ ಪ್ರಮಾಣದಲ್ಲಿ ಕೆರೋಟಿನೈಡ್ ಇರುತ್ತವೆ.ಇವನ್ನು ನಮ್ಮ ರೆಗ್ಯುಲರ್ ಡಯಟ್ನಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಬಹುದು.
1.ಪಪ್ಪಾಯಿ
ಪಪ್ಪಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆರೋಟಿನೈಡ್ ಲಭ್ಯವಿರುತ್ತದೆ,ಇದು ನಮ್ಮ ಕಣ್ಣ ದೃಷ್ಟಿಯನ್ನು ಹೆಚ್ಚಿಸುತ್ತದೆ.
2.ಹಸಿರು ತರಕಾರಿ
ಪಾಲಕ್,ಕೊತ್ತಂಬರಿ ಸೊಪ್ಪು,ಕ್ಯಾಬೇಜ್ ಮತ್ತು ಮೆಂತೆ ಸೊಪ್ಪಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆರೋಟಿನೈಡ್ ಲಭ್ಯ.
3.ಕ್ಯಾರೆಟ್
ಸಾಧಾರಣವಾಗಿ ಈ ತರಕಾರಿ ಕಣ್ಣಿಗೆ ತುಂಬಾ ಮುಖ್ಯ ಎಂಬುದು ಹಲವರಿಗೆ ತಿಳಿದಿರುವುದು.ಇದ್ರಲ್ಲೂ ಕೆರೋಟಿನೈಡ್ ಬೇಕಾದಷ್ಟಿದೆ.
4.ಮಾವಿನ ಹಣ್ಣು.
ಇದು ವಿಟಾಮಿನ್ A ಯ ಒಂದು ಉತ್ತಮವಾದ ಸೋರ್ಸ್.ಇದರ ಸೇವನೆಯಿಂದ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಬಹುದು.
5.ಮೊಸರು
ಇದರಲ್ಲೂ ವಿಟಾಮಿನ್ A ಹೇರಳವಾಗಿ ದೊರೆಯುತ್ತದೆ.
6.ಚೀನಿ ಕಾಯಿ
ಇದು ಹಳದಿ ಬಣ್ಣದ್ದಾಗಿದ್ದು,ಇದ್ರಲ್ಲಿ ಹೆಚ್ಛಿನ ಪ್ರಮಾಣದಲ್ಲಿ ಕೆರೋಟಿನೈಡ್ ಇರುವುದು.
7.ನುಗ್ಗೆ ಸೊಪ್ಪು
ಇದೂ ವಿಟಾಮಿನ್ A ಭಂಡಾರವಾಗಿದೆ.ಇದನ್ನು ಸೇವಿಸುವುದರಿಂದಲೂ ನಿಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದು.
8.ಗೆಣಸು
ಇದರಲ್ಲಿ ಕೆರೋಟಿನೈಡ ಸಾಕಷ್ಟು ಪ್ರಮಾಣದಲ್ಲಿದ್ದು ಕಣ್ಣ ಆರೋಗ್ಯಕ್ಕೆ ಒಂದು ಉತ್ತಮ ಪೋಷಣೆ.
9.ಮೊಟ್ಟೆ
ಇದು ಪ್ರೊಟೀನ್ ಹಾಗೂ ವಿಟಾಮಿನ್ ನ ಒಂದು ಉತ್ತಮ ಭಂಡಾರ.ಇದನ್ನು ನಿರಂತರ ಸೇವಿಸಿದಲ್ಲಿ ಯಾವ ದೃಷ್ಟಿ ದೋಶವೂ ನಿಮ್ಮನ್ನು ಬಾಧಿಸದು.
10.ಹಾಲು
ಇದರ ಬಗ್ಗೆ ಹೇಳಬೇಕಾದ ಅಗತ್ಯವಿಲ್ಲ.ಸಣ್ಣ ಪುಟಾಣಿಗಳಿಂದ ಆರಂಭಿಸಿದಲ್ಲಿ ಹಿರಿಯರ ತನಕವೂ ಇದನ್ನು ಸೇವಿಸುವವರೇ ಎಲ್ಲಾ.. ಪ್ರೋಟೀನ್ ವಿಟಾಮಿನ್ಸ್ ಗಳ ಖಜಾನೆ ಇದು.ಇದನ್ನು ನಿತ್ಯ ಸೇವಿಸಿದಲ್ಲಿ ನಿಮಗೆ ಕಣ್ಣಿನ ಸಮಸ್ಯೆ ಮಾತ್ರವಲ್ಲ ಯಾವ ತೊಂದರೆಯೂ ಬರಲಾರದು.
- ಸ್ವರ್ಣಲತ ಭಟ್
POPULAR STORIES :
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!