ಸಾಮಾಜಿಕ ಜಾಲತಾಣಗಳಿಂದ ಎಷ್ಟು ಒಳ್ಳೆಯದಿದೆಯೋ…? ಅಷ್ಟೇ ಕೆಟ್ಟದಿದ್ದೆ. ಇವತ್ತು ಈ ತಾಣಗಳು ವಂಚಕರ ಅಸ್ತ್ರವಾಗಿ ಮಾರ್ಪಟ್ಟಿವೆ. ಫೇಸ್‍ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸೋ ಮುನ್ನ ಹುಷಾರಾಗಿರಿ.
ಫೇಸ್ ಬುಕ್ ಗೆಳೆಯನನ್ನು ರಕ್ಷಿಸುವ ಸಲುವಾಗಿ ಬೆಂಗಳೂರು ಮಹಿಳೆಯೊಬ್ಬರು 6.85 ಲಕ್ಷ ರೂ ಕಳೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಬನಶಂಕರಿ ಮೊದಲನೇ ಹಂತದಲ್ಲಿ ವಾಸವಿರೋ ನಂದಿತಾ ಮೋಹನ್ ರಾವ್ ಮೋಸ ಹೋದವರು. ಇವರಿಗೆ ಕೆಲವು ದಿನಗಳ ಹಿಂದೆ ಇಂಗ್ಲೆಂಡಿನ ಮೈಕಲ್ ಡೆನ್ನಿಸ್ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ ಪರಿಚಿತನಾಗಿ ಸ್ನೇಹಿತನಾಗಿದ್ದಾನೆ. ನಂತರ ಇಬ್ಬರ ನಡುವೆ ವಾಟ್ಸಪ್ ನಂಬರ್ ಕೂಡ ವಿನಿಮಯವಾಗಿದೆ. ತಾನೊಬ್ಬ ಅಗರ್ಭ ಶ್ರೀಮಂತ,, ಇಂಗ್ಲೆಂಡ್ ನಲ್ಲಿ ಒಬ್ನೇ ವಾಸವಿದ್ದೀನಿ. ಹಾರ್ಟ್ ಆಪರೇಷನ್ ಗೆ ಇಂಡಿಯಾಕ್ಕೆ ಬರ್ತಿದ್ದೀನಿ ಎಂದು ತಿಳಿಸಿದ್ದ.
ನವೆಂಬರ್ 28ರಂದು ನಂದಿತಾ ಅವರಿಗೆ ಜಾಹ್ನವಿ ಶರ್ಮ ಎಂಬ ಹೆಸರಲ್ಲಿ ಕರೆಮಾಡಿದ ಯುವತಿ ತಾನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಸೀನಿಯರ್ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಡೆನ್ನಿಸ್ 50ಸಾವಿರ ಫೌಂಡ್ ಹಣವನ್ನು ಇಂಡಿಯಾಕ್ಕೆ ತರುತ್ತಿದ್ದು , ಇದು ಅಕ್ರಮ. ಈತತನ್ನು ಬಂಧಿಸಬಾರದಾದ್ರೆ 50 ಸಾವಿರ ರೂ ಹಣವನ್ನು ಖಾತೆಗೆ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾರೆ. ಅದನ್ನು ನಂಬಿದ ನಂದಿತಾ ಆಕೆ ಕೊಟ್ಟ ಅಕೌಂಟ್ ಗೆ 50ಸಾವಿರ ರೂ ಟ್ರಾನ್ಸ್‍ಫರ್ ಮಾಡಿದ್ದಾರೆ. ನಂತರ ಮತ್ತೆ ಕರೆ ಮಾಡಿದ ಜಾಹ್ನವಿ ಪೌಂಡನ್ನು ರೂಪಾಯಿಗೆ ಬದಲಿಸಲು 1,55,000 ರೂ ಪಾವತಿಸುವಂತೆ ಹೇಳಿದ್ದಾಳೆ. ಬಳಿಕ ಅಕ್ರಮ ಹಣ ವರ್ಗಾವಣೆಗೆಂದು 4,80,000 ರೂ ನೀಡುವಂತೆ ಹೇಳಿದ್ದಾಳೆ. ನವೆಂಬರ್ 29ರಂದು ನಂದಿತಾ ಆ ಹಣವನ್ನೂ ಟ್ರಾನ್ಸ್ ಫರ್ ಮಾಡಿದ್ದಾರೆ…!
ಇಷ್ಟೊಂದು ಹಣ ವರ್ಗಾವಣೆ ಬಳಿಕ ಪುನಃ ಅಶ್ವಿನ್ ಕುಮಾರ್ ಎಂಬ ವ್ಯಕ್ತಿ ಕರೆ ಮಾಡಿ ತಾನು ದೆಹಲಿಯ ರಿಸರ್ವ್ ಬ್ಯಾಂಕ್ ಅಧಿಕಾರಿ ತನಗೆ 8,25,000 ರೂ ನೀಡ್ಬೇಕು. ಇಲ್ಲದಿದ್ದರೆ ಡೆನ್ನಿಸ್ ನನ್ನು ಜೈಲಿಗೆ ಕಳುಹಿಸ್ತೀನಿ ಅಂದನಂತೆ.
ಪದೇ ಪದೇ ಕರೆಗಳು ಬರುವುದು ಶುರುವಾದಾಗ ನಂದಿತಾಗೆ ಅನುಮಾನ ಬಂದಿದೆ. ಡೆನ್ನಿಸ್ ಕೂಡ ಫೋನ್ ಗೆ ಸಿಗಲಿಲ್ಲ…! ಆತ ಸೇರಿದಂತೆ ಒಂದು ಜಾಲದ ಬಲೆಗೆ ಬಿದ್ದು ತಾನು ವಂಚನೆಗೆ ಒಳಗಾಗಿರೋದು ಆಕೆಗೆ ಗೊತ್ತಾಗಿದೆ.