ಪ್ರೀತಿ ಎಲ್ಲಿ? ಹೇಗೆ? ಹುಟ್ಟುತ್ತೆ ಎಂದು ಹೇಳೋಕೆ ಆಗಲ್ಲ. ಈಗಂತೂ ಸೋಶಿಯಲ್ ಮೀಡಿಯಾ ಜಮಾನ ….ಫೇಸ್ ಬುಕ್ ನಲ್ಲೇ ಲವ್ ಆಗಿ ಬಿಡುತ್ತೆ…!
ಹೀಗೆ ಪಾಪಿ ಮಗನೊಬ್ಬನ ಫೇಸ್ ಬುಕ್ ಲವ್ ನಿಂದಾಗಿ ಅಪ್ಪ-ಅಮ್ಮ ಕೊಲೆಯಾಗಿದ್ದಾರೆ..!
ದಕ್ಷಿಣ ದೆಹಲಿಯ ಅಬ್ದುಲ್ ರೆಹಮಾನ್ ಎಂಬಾತ ಫೇಸ್ ಬುಕ್ ನಲ್ಲಿ ಒಬ್ಬಳು ಹುಡುಗಿಯನ್ನು ನೋಡಿ ಆಕೆಯನ್ನು ಪ್ರೀತಿಸಲು ಶುರುಮಾಡಿದ್ದ. ಆದರೆ ಆಕೆಯನ್ನು ಮದುವೆಯಾಗಲು ಅವನ ತಂದೆ, ತಾಯಿ ಒಪ್ಪಿರಲಿಲ್ಲವಂತೆ. ಇದರಿಂದ ಕುಪಿತಗೊಂಡ ಪಾಪಿ ಅಪ್ಪ ಅಮ್ಮನನ್ನೇ ಕೊಲ್ಲಿಸಿದ್ದಾನೆ. ಮಾಡಿದ ಕ್ಷಮಿಸಲಾರದ ತಪ್ಪಿಗೆ ಈಗ ಕಂಬಿ ಎಣಿಸ್ತಿದ್ದಾನೆ.
ಕೊಲೆಗೆ 2.5 ಲಕ್ಷ ರೂ ನೀಡಿ ಸುಪಾರಿ ಕೊಟ್ಟಿದ್ದ. ಕೊಲೆಗಡುಕರು ಸಿಕ್ಕಿಬಿದ್ದಿದ್ದು, ಅಬ್ದುಲ್ ನ ಬಣ್ಣ ಬಯಲಾಗಿದೆ.