ರಾಜ್ ಕುಮಾರ್ ಬೇಕಾಬಿಟ್ಟಿ ಸಿನಿಮಾಗಳಲ್ಲಿ ನಟಿಸಲಿಲ್ಲ. ಆಯ್ದುಕೊಳ್ಳುತ್ತಿದ್ದ ಕಥೆಯಲ್ಲಿನ ಮೌಲ್ಯವನ್ನು ಗ್ರಹಿಸುತ್ತಿದ್ದರು. ತಾನು ನಟಿಸುವ ಚಿತ್ರ ಚರಿತ್ರೆ ಆಗದಿದ್ದರೂ, ಒಂದೊಳ್ಳೇ ಸಂದೇಶ ಸಾರುವಂತಿರಬೇಕು ಎಂದು ಬಯಸಿದರು. ಅವರು ಅವರ ಸಿನಿಮಾಗಳಿಂದ ಪ್ರಭಾವಿತರಾಗಿ ವಿಶಿಷ್ಟ ವ್ಯಕ್ತಿಯಾಗಿ ರೂಪುಗೊಳ್ಳಲಿಲ್ಲ. ಅವರ ವ್ಯಕ್ತಿತ್ವ ರಕ್ತಗತವಾಗಿತ್ತು. ರಾಜ್ ಕುಮಾರ್ ಸಭ್ಯರಂತೆ ನಟಿಸಲಿಲ್ಲ. ಅವರ ವ್ಯಕ್ತಿತ್ವದಲ್ಲೇ ಸಭ್ಯತೆಯಿತ್ತು. ಒಮ್ಮೆ ರಾಜ್ ಕುಮಾರ್ ಅವರಿಗೆ `ಕರ್ನಾಟಕ ರತ್ನ’ ಬಿರುದು ಕೊಡುವುದರ ಬಗ್ಗೆ ಪ್ರಸ್ತಾಪವಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ರಾಜ್ಕುಮಾರ್, `ಮೊದಲು ಆ ಬಿರುದನ್ನು ಕುವೆಂಪು ಅವರಿಗೆ ಕೊಡಿ, ಆಮೇಲೆ ಬೇಕಾದ್ರೆ ನನಗೆ ಕೊಡಿ’ ಎಂದಿದ್ದರು.
ಅದು `ಚಲಿಸುವ ಮೋಡಗಳು’ ಚಿತ್ರದ ಚಿತ್ರೀಕರಣದ ಸಂದರ್ಭ. ಚಿ. ಉದಯ್ ಶಂಕರ್ ಅವರು ಬರೆದ `ಜೇನಿನ ಹೊಳೆಯೋ’ ಹಾಡಿನ ಚಿತ್ರೀಕರಣವಾಗಬೇಕಿತ್ತು. ಆ ಚಿತ್ರದ ನಿದರ್ೇಶಕ ಸಿಂಗೀತಂ ಶ್ರೀನಿವಾಸ್ ಹಾಗೂ ನಿರ್ಮಾಪಕ ಸಾ. ರಾ ಗೋವಿಂದು ಅವರಿಗೆ ದೊಡ್ಡ ಗಾಜಿನಲ್ಲಿ ಕರ್ನಾಟಕದ ಮ್ಯಾಪ್ ಬರೆದು ಅದರ ಒಳಗಿಂದ ರಾಜ್ಕುಮಾರ್ ನಡೆದು ಬರುವ ದೃಶ್ಯವನ್ನು ಶೂಟ್ ಮಾಡುವ ಇರಾದೆಯಿತ್ತು. ಆದರೆ ಇದಕ್ಕೆ ರಾಜ್ ಕುಮಾರ್ ಒಪ್ಪುತ್ತಾರಾ..? ಎಂಬ ಅನುಮಾನವೂ ಇತ್ತು. ಸಾ. ರಾ ಗೋವಿಂದು ದೈರ್ಯ ಮಾಡಿ ಈ ವಿಚಾರವನ್ನು ರಾಜ್ ಕುಮಾರ್ ಅವರ ಮುಂದೆ ಹೇಳಿಬಿಟ್ಟರಂತೆ. ಅದಕ್ಕೆ ರಾಜ್ ಕುಮಾರ್, `ಕುವೆಂಪು ಅವರಂಥ ಮಹಾನ್ ಕವಿಗಳಿದ್ದಾರೆ, ನಮ್ಮ ನಾಡಿನ ಕೀರ್ತಿಗೆ ಕಾರಣರಾದ ರಾಜ-ಮಹಾರಾಜರಿದ್ದಾರೆ, ಮಹಾನ್ ವ್ಯಕ್ತಿಗಳು ನಮ್ಮ ನಾಡಿನ ಭೂಪಟಕ್ಕೆ ಅರ್ಹರು, ನಾನಲ್ಲ’ ಎಂದರಂತೆ.
POPULAR STORIES :
ಸಂಸ್ಕಾರವಿಲ್ಲದ ಶಿಕ್ಷಣದಿಂದ ಸಮಾಜೋದ್ಧಾರ ಸಾಧ್ಯವೇ..?
`ಅಣ್ಣಾ, ಒಂದು ಸಾರಿ ಹುಟ್ಟಿ ಬಾ.. ಪ್ಲೀಜ್..!!!’ `ನಾನು ಸತ್ತ ಮೇಲೆ ಸುಟ್ಟು, ಬೆಳೆ ಬೆಳೆಯೋ ಜಾಗ ಹಾಳು ಮಾಡಬೇಡಿ..?
ಭಾರತದ ಮೇಲೆ ಪಾಕಿಸ್ತಾನವನ್ನು ಛೂ ಬಿಟ್ಟಿರೋದು ಚೀನಾ..!!? ಚೀನಾ, ಭಾರತ, ಜಪಾನ್- ಇವರಲ್ಲಿ ಯಾರು ಬಲಿಷ್ಠರು..!?
ಕಥೆಗಾರ `ಪ್ಲೀನಿ’ ಸೃಷ್ಟಿಸಿದ ದೆವ್ವಗಳ ಜಗತ್ತು..!! `ಭೂತವಿಲ್ಲ… ಪಿಶಾಚಿಯಿಲ್ಲ..!!’
ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?
ನೀವು ಸಾಹಸಪ್ರಿಯರಾ..? ಧಮ್ ಇದ್ರೇ ಟ್ರೈ ಮಾಡಿ..!?
9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!