ಮಕ್ಕಳಿಗಾಗಿ ಕಿಡ್ನಿಯನ್ನೇ ಮಾರಿದ ತಂದೆಯೀತ..! ಆದಾಯ 3,000, ಖರ್ಚು 10,000 ರೂಪಾಯಿ..!

Date:

ಹೆತ್ತವರಿಗೆ ಮಕ್ಕಳು ಹೇಗೇ ಇದ್ದರೂ ಮುದ್ದು ಎನ್ನುವ ಮಾತು ಕೇಳಿದ್ದೇವೆ. ಮಕ್ಕಳು ಹೇಗೇ ಇದ್ದರೂ ಕೂಡಾ ಅವರನ್ನು ಮುದ್ದು ಮಾಡುವ ಹೆತ್ತವರನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕುಟುಂಬ ಇದೆ. ಈ ಕುಟುಂಬ ತಮಗಿಂತಲೂ ಹೆಚ್ಚಾಗಿ ಮಕ್ಕಳನ್ನು ನೋಡಿಕೊಳ್ಳುತ್ತಿದೆ. ಆದಾಯ ಕಡಿಮೆ ಇದ್ದರೂ ಕೂಡಾ ಹೆಚ್ಚಿನ ಹಣ ಖರ್ಚು ಮಾಡಿ ಮಕ್ಕಳ ಆರೋಗ್ಯವನ್ನು ನೋಡಿಕೊಳ್ಳುತ್ತಿದೆ. ಆದರೆ ಈಗ ಮಕ್ಕಳಿಗೆ ಹಣ ಸಾಲುತ್ತಿಲ್ಲ ಎಂಬ ಕಾರಣಕ್ಕಾಗಿ ತಂದೆಯೇ ತನ್ನ ಕಿಡ್ನಿಯನ್ನು ಮಾರಿದ ಘಟನೆ ನಡೆದಿದೆ.
ಯೆಸ್.. ಆ ಕುಟುಂಬದಲ್ಲಿರುವ ಮೂರೂ ಮಕ್ಕಳು ದೈತ್ಯ ದೇಹಿಗಳು. ಅದಕ್ಕೆ ತಕ್ಕಂತೆ ತಿನ್ನುವವರೂ ಕೂಡಾ..

Obese-Children2

5 ವರ್ಷದ ಹುಡುಗ ಬರೋಬ್ಬರಿ 34 ಕೆಜಿ ತೂಗುತ್ತಾನೆ. 3 ವರ್ಷದವನು 48 ಕೆಜಿ ಇದ್ದಾನೆ. ಇನ್ನು 18 ತಿಂಗಳ ಮಗು ಬರೋಬ್ಬರಿ 15 ಕೆಜಿ ಇದೆ. ಇವರಿಗೆ ತಿಂಗಳಿಗೆ ಕನಿಷ್ಟ ಪಕ್ಷ 10,000 ರೂಪಾಯಿ ಖರ್ಚು ಮಾಡಲೇಬೇಕು. ಆದರೆ ಆ ಕುಟುಂಬದ ಆದಾಯ ಕೇವಲ 3,000ದ ಆಸುಪಾಸು..!
ಈ ಮಕ್ಕಳು ಚಿಕ್ಕಂದಿನಿಂದಲೇ ಒಂದು ಸಮಸ್ಯೆಯಿಂದ ಬಳಲುತ್ತಿವೆ. ಇವರು ನಡೆದಾಡಲು ಸಾಧ್ಯವಾಗದಂತಹ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಸದಾ ಕಾಲ ಮನೆಯಲ್ಲಿ ಒಬ್ಬರು ಇರಲೇಬೇಕು. ಅಲ್ಲದೇ ಮಕ್ಕಳಿಗೆ ಮೂರು ಹೊತ್ತು ಸರಿಯಾದ ಸಮಯಕ್ಕೆ ಊಟ ನೀಡಲೇಬೇಕು. ಇನ್ನೊಂದು ಕಡೆ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು. ಅದಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇದೆ.

ಈ ಮಕ್ಕಳ ದಿನದ ಊಟದ ಮೆನು ಹೀಗಿದೆ ನೋಡಿ

ಬೆಳಗ್ಗೆ 6 ಗಂಟೆ

5 ಬಾಳೆ ಹಣ್ಣು
1 ಲೀಟರ್ ಹಾಲು
ಆರು ಚಪಾತಿ, ಒಂದು ಬೌಲ್ ತರಕಾರಿ

ಬೆಳಗ್ಗೆ 10 ಗಂಟೆ

5 ಚಪಾತಿ
ಒಂದು ದೊಡ್ಡ ಬೌಲ್ ಮೊಸರು
1 ಬೌಲ್ ತರಕಾರಿ

ಮಧ್ಯಾಹ್ನ 12:30

1.5 ಕೆಜಿ ಹಿಟ್ಟಿನಿಂದ ಮಾಡಿದ ವಿಶೇಷ ಚಪಾತಿ
2 ಬಾಳೆಹಣ್ಣು
1 ಬೌಲ್ ತರಕಾರಿ

ಮಧ್ಯಾಹ್ನ 3 ಗಂಟೆ

ಬ್ರೆಡ್
1.5 ಕೆಜಿ ಅಕ್ಕಿಯಿಂದ ಮಾಡಿದ ಅನ್ನ

ಸಂಜೆ 5 ಗಂಟೆ

1 ಲೀಟರ್ ಸಾಫ್ಟ್ ಡ್ರಿಂಕ್ (ಕೋಕಾ ಕೋಲಾ, ಪೆಪ್ಸಿ)
ಆರು ಪ್ಯಾಕೇಟ್ ಕ್ರಿಸ್ಪ್ ಮತ್ತು ಬಿಸ್ಕೇಟ್
6 ಬಾಳೆಹಣ್ಣು

ರಾತ್ರಿ 8 ಗಂಟೆ

ಗೋದಿ ಹಿಟ್ಟಿನ 6 ಚಪಾತಿ
1 ಲೀಟರ್ ಹಾಲು
1.5 ಲೀಟರ್ ಮಜ್ಜಿಗೆ
2 ದೊಡ್ಡ ಬೌಲ್ ನಲ್ಲಿ ತರಕಾರಿ

ಆದಾಯ ಕಡಿಮೆ ಇದ್ದು ಬೆಟ್ಟದಷ್ಟು ಖರ್ಚು ಇರುವುದು ಈ ಮಕ್ಕಳ ತಂದೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಒಂದು ಕಿಡ್ನಿಯನ್ನು ನೀಡಿದ್ದೇನೆ ಎನ್ನುತ್ತಾನೆ ಆತ. ಇಷ್ಟೆಲ್ಲಾ ಸಮಸ್ಯೆಯನ್ನು ಹೊದ್ದು ಮಲಗಿರುವ ಈ ಕುಟುಂಬದ ಸಹಾಯಕ್ಕೆ ಯಾರೂ ಬಾರದಿರುವುದು ಶೋಚನೀಯ ಸಂಗತಿ..

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಶ್ರೀಲಂಕಾದಲ್ಲಿ ಭಾರತದ ಧ್ವಜ ಹಾರಿಸಿದ ಕನ್ನಡಿಗ ರಘು..!

ಸಿನಿಮಾಕಥೆಯಂತಿದ್ದರೂ ಇದು ಸಿನಿಮಾ ಸ್ಟೋರಿಯಲ್ಲ..! ಇದು ಇಂಡಿಯಾ, ಸ್ವೀಡನ್ ಲವ್ ಸ್ಟೋರಿ..!

ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!

ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!

ಬಿಇಡ್ ಗೆ ಸೇರಿದ್ದು 12,800 ವಿದ್ಯಾರ್ಥಿಗಳು, ಪಾಸ್ ಆದವರು 20,000..! ಇದು ಡಾ. ಬಿ.ಆರ್ ಅಂಬೇಡ್ಕರ್ ಯೂನಿವರ್ಸಿಟಿಯ ಕರ್ಮಕಾಂಡ..!

ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!

ಸಲ್ಮಾನ್ ಖಾನ್ ನಿರಪರಾಧಿ..! ಹಾಗಾದರೆ ನಿಜವಾದ ಆಪರಾಧಿ ಯಾರು..?

ಇವರಿಗೆ 25 ವರ್ಷಗಳ ನಂತರ ಅಮ್ಮ ಸಿಕ್ಕಳು..! ಗೂಗಲ್ ಅರ್ಥ್ ಸಹಾಯದಿಂದ ತಾಯಿಯನ್ನು ಹುಡುಕಿದ ಮಗ..!

ಕೈ ಇಲ್ಲದ ಈ ಕ್ರಿಕೆಟಿರ್ ಗೂಗ್ಲೀ ಎಸೆಯುತ್ತಾನೆ..! ಸಿಕ್ಸರ್ ಸಿಡಿಸಿ ಮನೋರಂಜನೆ ಒದಗಿಸುತ್ತಾನೆ..!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...