No menu items!
11.1 C
Munich
Wednesday, April 29, 2026

ಅವತ್ತು ತರ್ಲೆ ನನ್ಮಗ..! ಇವತ್ತು ತರ್ಲೆ ನನ್ಮಕ್ಳು…! ಎಲ್ಲಾ ಕಡೆ `ತರ್ಲೆ' ಗಳ ಹವಾ ಶುರು ಆಗೈತೆ ಶಿವಾ..!

Must read

ಲಕಡಿ ಪಕಡಿ ಜುಮ್ಮ…! ಯಾವನ್ ಮರೀತಾನೆ ಸ್ವಾಮಿ ಆ ಸಿನಿಮಾನ..! ಅದು ಜಗ್ಗೇಶ್ ಲೈಫಿಗೆ ಟರ್ನಿಂಗ್ ಪಾಯಿಂಟ್, ಉಪೇಂದ್ರ ಪಾಲಿಗೆ ಲೈಫ್ ಚೇಂಜರ್..! ಅದರ ಹೆಸರು ತರ್ಲೆ ನನ್ಮಗ..! ಆ ಸಿನಿಮಾ ಹವಾ ಇವತ್ತಿಗೂ ಬೀಸ್ತಾ ಇದೆ..! ಡಬಲ್ ಮೀನಿಂಗ್ ಸಿನಿಮಾಗಳು ನೂರಾರು ಬಂದಿರಬಹುದು ಆದ್ರೆ ಅಂಥದ್ದೊಂದು ಸಿನಿಮಾ ಮತ್ತೆ ಬರಲೇ ಇಲ್ಲ..! ಇವತ್ತಿಗೂ ತರ್ಲೆ ನನ್ಮಗ ಸಿನಿಮಾ ನೋಡ್ದೋರ್ ಉಲ್ಡಾಡ್ಕೊಂಡ್ ನಗ್ತಾರೆ ಅಂದ್ರೆ ಅದು ಸುಳ್ಳಲ್ಲ..! ಅದೆಲ್ಲಾ ಓಕೆ, ಈಗ ತರ್ಲೆ ನನ್ಮಗ ಸಿನಿಮಾದ ಬಗ್ಗೆ ಪೀಠಿಕೆ ಯಾಕೆ ಅಂತ ನೀವು ಕೇಳ್ಬೋದು..! ಕಾರಣ ಇದೆ ಸ್ವಾಮಿ. ಅವತ್ತು ತರ್ಲೆ ನನ್ಮಗ ಸೃಷ್ಟಿ ಮಾಡಿದ ಹವಾ ಈಗ 2015ರಲ್ಲಿ ಮತ್ತೆ ಬೀಸ್ತಾ ಇದೆ.. ಅವತ್ತು ಬರೀ ಮಗ, ಇವತ್ತು ಮಕ್ಕಳು..! ಅರ್ಥ ಆಗ್ಲಿಲ್ವಾ..? ಸ್ವಾಮಿ `ತರ್ಲೆ ನನ್ಮಕ್ಳು’ ಸಿನಿಮಾ ರಿಲೀಸಿಗೆ ರೆಡಿ ಆಗಿದೆ.. ಹೊಡೀರೋ ಸೀಟಿ..!
ಅವತ್ತಿನ ತರ್ಲೆ ನನ್ಮಗನ ಅಪ್ಪ ಉಪೇಂದ್ರ..! ಇವತ್ತಿನ ತರ್ಲೆ ನನ್ಮಕ್ಳ ಅಪ್ಪ ರಾಕೇಶ್..! ಟ್ರೇಲರ್ ನೋಡೀನೇ ಜನ ಇದು ಸಿಕ್ಕಾಪಟ್ಟೆ ತರ್ಲೆ ಸಿನಿಮಾ ಅಂತ ಫಿಕ್ಸ್ ಆಗಿದ್ದಾರೆ.. `ತರ್ಲೆ ನನ್ಮಕ್ಳು’ ಗ್ಯಾಂಗಿಗೆ ನಾಗಶೇಖರ್ ಲೀಡರ್, ಆದ್ರೆ ಅವತ್ತು ತರ್ಲೆ ನನ್ ಮಗ ಅಂತ ಬೀಗಿದ ಜಗ್ಗೇಶ್ ಅವರ ಮಗ ಯತಿರಾಜ್ ಇಲ್ಲಿ ಮಕ್ಕಳ ಗ್ಯಾಂಗಲ್ಲಿದ್ದಾರೆ..! ನಾಗಶೇಖರ್, ಯತಿರಾಜ್ ಕಾಂಬಿನೇಶನ್ನು ಯರ್ರಾಬಿರ್ರಿ ಧೂಳೆಬ್ಬಿಸೋದು ಗ್ಯಾರಂಟಿ ಅಂತ ಗಾಂಧೀನಗರ ಮಾತಾಡ್ಕೊಂತಿದೆ..! ಕಾಲೇಜ್ ಹುಡುಗ ಹುಡುಗೀರಿಗಂತೂ `ತರ್ಲೆ ನನ್ ಮಕ್ಕಳು’ ಫುಲ್ ಮೀಲ್ಸ್..! ಪಡ್ಡೆ ಹುಡುಗರಂತೂ ಶುಭಾಪೂಂಜಾನಾ ಪೋಸ್ಟರ್, ಟ್ರೇಲರಲ್ಲೇ ನೋಡಿ ಸುಸ್ತಾಗಿದಾರೆ. ಇನ್ನು ಸಿನಿಮಾದಲ್ಲಿ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಟೋಟಲಿ ತರ್ಲೆ ನನ್ಮಕ್ಕಳನ್ನು ನೋಡೋ ಹುಡುಗರಿಗೆ ಇದು `ಶುಭ’ ಕಾಲ..! ಮತ್ತೊಂದು ಕಡೆ ಶುಭಾ ಪೂಂಜಾಗೇ ಟಕ್ಕರ್ ಕೊಡೋ ತರ ತರ್ಲೆ ಗ್ಯಾಂಗಲ್ಲಿ ಕಿಕ್ ಕೊಡ್ತಾ ಇರೋದು ಅಂಜನಾ ದೇಶಪಾಂಡೆ..! ಯಾವ ಅಂಜಿಕೆ ಇಲ್ಲದೇ ಚಚ್ಚಿ ಬಿಸಾಕಿದ್ದಾರೆ ಈ ಮೇಡಂ..! ಒಟ್ಟಾರೆ ಹೇಳಬೆಕು ಅಂದ್ರೆ ಅವತ್ತು ನೋಡಿದ `ತರ್ಲೆ’ ಹಾಗೂ ಈಗ ಬರ್ತಿರೋ `ತರ್ಲೆ’ ಒಂಥರಾ ಹಂಗೇ ಇರುತ್ತೆ..! ಆದ್ರೆ ಇಲ್ಲಿ ಐಟಂ, ಟೇಸ್ಟು, ಡೆಲಿವರಿ ಎಲ್ಲಾ ಸಖತ್ ಡಿಫರೆಂಟು..! ಸವೀತಾ ಇದ್ರೆ ಸವೀತಾನೇ ಇರಬೇಕು..!
ಇನ್ನು ರಾಕೇಶ್ ಬಗ್ಗೆ ಹೇಳಿಲ್ಲ ಅಂದ್ರೆ ಹೆಂಗೆ..? ಯುವ ನಿರ್ದೇಶಕ ತರ್ಲೆ ನನ್ ಮಕ್ಳಿಗೆ ಫಾದರ್..! ಸ್ಟೋರಿ, ಡೈಲಾಗೂ ಅವರದೇ..! ಸಿನಿಮಾ ತುಂಬ ಸೀಟಿ ಹೊಡೆಯೋ ಬೆರಳುಗಳನ್ನು ಬಾಯೊಳಗೆ ಫಿಕ್ಸ್ ಮಾಡಿಸೋ ಹಾಗೆ ಡೈಲಾಗ್ ಬರೆದಿದ್ದಾರೆ ರಾಕೇಶ್..! ಅವತ್ತು ತರ್ಲೆ ನನ್ಮಗ ಬರೆದಿದ್ದ ಉಪೇಂದ್ರ ಹೇಳಿದಂತೆ ಡೈಲಾಗೇ ಡೈ ಹೊಡೆದು ಲಾಗ ಹಾಕೋ ಡೈಲಾಗೆಲ್ಲಾ `ತರ್ಲೆ ನನ್ಮಕ್ಳು’ ಸಿನಿಮಾದಲ್ಲಿದೆ..! ಇನ್ನು ಈ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ…? ಮ್ಯೂಸಿಕ್..! ಅಬ್ಬಾ ಅಬ್ಬಾ… ಯೂಟ್ಯೂಬ್ ತುಂಬ ತರ್ಲೆ ಹವಾ ಜೋರಾಗೇ ಇದೆ..! ಮ್ಯೂಸಿಕ್ ಯಾರಪ್ಪಾ ಮಾಡಿರೋದು ಅಂತ ಹುಳ ಬಿಟ್ಕಂಡಿರೋರಿಗೆ, ಸುರೇಶ್ ಸೂರ್ಯವನ್ಶಿ ಅಂತ ಹೊಸ ಹುಡುಗ ಅಂದ್ರೆ ಯಾರೂ ನಂಬಲಿಕ್ಕಿಲ್ಲ..! ಮೊದಲು ಡಿಜೆ ಆಗಿದ್ದ ಈ ಸೂರ್ಯವನ್ಶಿ ಈಗ ಫುಲ್ ಟೈಮ್ ಮ್ಯೂಸಿಕ್ ಡೈರೆಕ್ಟರ್..! ಒಂದೊಂದು ಹಾಡೂ ಐತ್ ಲಗಾ..ಸೂಪರ್..! ಯಮ್ಮಿಯಮ್ಮಿ ಹಾಡಂತೂ ಈಗಾಗ್ಲೇ ಲಕ್ಷಗಟ್ಟಲೇ ಹಿಟ್ಸ್ ಪಡೆದಿದೆ..! ಟೋಟಲಿ ಯುವಕರ ಟೀಮ್, ಸಿನಿಮಾ ಆಸಮ್ ಅಂತಿದೆ ಸಿನಿಮಾ ತಂಡ..! ನಿರ್ಮಾಪಕ ಸಚ್ಚಿದಾನಂದ ಮತ್ತು ಎ.ಎಸ್.ಸತೀಶ್ ಕುಮಾರ್ ತರ್ಲೆ ನನ್ಮಕ್ಳ ಬಗ್ಗೆ ಸಖತ್ ಭರವಸೆ ಇಟ್ಕೊಂಡಿದ್ದಾರೆ..! ಮುಂದಿನ ವರ್ಷದ ಫಸ್ಟ್ ಸಿನಿಮಾನೇ ಈ `ತರ್ಲೆ ನನ್ಮಕ್ಳು’. ಥಿಯೇಟರ್ ನಲ್ಲಿ ತರ್ಲೆ ಕಿಚ್ಚು ಶುರುವಾಗೋದು ಗ್ಯಾರಂಟಿ, ನೋಡಿಲ್ಲಾ ಅಂದ್ರೆ ನೀವು ಸಿಕ್ಕಾಪಟ್ಟೆ ತರ್ಲೆ ಮಿಸ್ ಮಾಡ್ಕೊಳೋದು ಗ್ಯಾರಂಟಿ..! ಲಕಡಿ ಪಕಡಿ ಜುಮ್ಮ..!

Trailer :

Song :

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಶ್ರೀಲಂಕಾದಲ್ಲಿ ಭಾರತದ ಧ್ವಜ ಹಾರಿಸಿದ ಕನ್ನಡಿಗ ರಘು..!

ಸಿನಿಮಾಕಥೆಯಂತಿದ್ದರೂ ಇದು ಸಿನಿಮಾ ಸ್ಟೋರಿಯಲ್ಲ..! ಇದು ಇಂಡಿಯಾ, ಸ್ವೀಡನ್ ಲವ್ ಸ್ಟೋರಿ..!

ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!

ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!

ಬಿಇಡ್ ಗೆ ಸೇರಿದ್ದು 12,800 ವಿದ್ಯಾರ್ಥಿಗಳು, ಪಾಸ್ ಆದವರು 20,000..! ಇದು ಡಾ. ಬಿ.ಆರ್ ಅಂಬೇಡ್ಕರ್ ಯೂನಿವರ್ಸಿಟಿಯ ಕರ್ಮಕಾಂಡ..!

ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!

ಸಲ್ಮಾನ್ ಖಾನ್ ನಿರಪರಾಧಿ..! ಹಾಗಾದರೆ ನಿಜವಾದ ಆಪರಾಧಿ ಯಾರು..?

ಇವರಿಗೆ 25 ವರ್ಷಗಳ ನಂತರ ಅಮ್ಮ ಸಿಕ್ಕಳು..! ಗೂಗಲ್ ಅರ್ಥ್ ಸಹಾಯದಿಂದ ತಾಯಿಯನ್ನು ಹುಡುಕಿದ ಮಗ..!

ಕೈ ಇಲ್ಲದ ಈ ಕ್ರಿಕೆಟಿರ್ ಗೂಗ್ಲೀ ಎಸೆಯುತ್ತಾನೆ..! ಸಿಕ್ಸರ್ ಸಿಡಿಸಿ ಮನೋರಂಜನೆ ಒದಗಿಸುತ್ತಾನೆ..!

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article