ಫೇಸ್ ಬುಕ್ ಬಳಕೆದಾರರೇ ನೀವು ನಿಮ್ಮ ಫೇಸ್ ಬುಕ್ ಫ್ರೆಂಡ್ಸ್ ಗೆ ಕಳಿಸುವ ಸಂದೇಶ ಕಳ್ಳತನವಾಗುತ್ತಿದೆ ಹುಷಾರ್..!
ಹ್ಯಾಕರ್ ಗಳು ಸುಮಾರು 120 ಮಿಲಿಯನ್ ಫೇಸ್ ಬುಕ್ ಖಾತೆಗಳ ಖಾಸಗಿ ಮೆಸೇಜ್ ಗಳನ್ನು ಮಾರಾಟ ಮಾಡಿದ್ದಾರೆ ಎನ್ನುವ ಶಾಕಿಂಗ್ ನ್ಯೂಸ್ ಅನ್ನು ಬಿಬಿಸಿ ಪ್ರಕಟಿಸಿದೆ.
ಉಕ್ರೇನ್, ರಷ್ಯಾ, ಅಮೆರಿಕಾ ಮತ್ತು ಬ್ರಿಟನ್ ನಲ್ಲಿ ಎಫ್ ಬಿ ಖಾಸಗಿ ಮೆಸೇಜ್ ಗಳನ್ನು ಹ್ಯಾಕರ್ ಗಳು 10 ಸೆಂಟ್ ಗೆ ಮಾರಾಟ ಮಾಡಿದ್ದಾರೆ ಅಂತ ತಿಳಿದುಬಂದಿದೆ.
ಸೆಪ್ಟೆಂಬರ್ ನಲ್ಲಿ ಮೆಸೇಜ್ ಗಳು ಹ್ಯಾಕ್ ಆಗಿರೋದು ಬಹಿರಂಗವಾಗಿದ್ದು, ಫೇಸ್ ಬುಕ್ ಮಾತ್ರ ಇದನ್ನು ನಿರಾಕರಿಸಿದೆ.
ಆದರೇ ದಿನಂಪ್ರತಿ ಕೇಳಿಬರುತ್ತಿರುವ ಇಂಥಾ ಸುದ್ದಿಗಳು ಸೋಶಿಯಲ್ ಮೀಡಿಯಾ ನಮ್ಮ ಖಾಸಗಿತನಕ್ಕೆ ಸಹ್ಯವಲ್ಲ ಅನ್ನೋದನ್ನು ಸಾಬೀತು ಪಡಿಸುತ್ತಿವೆ.