ಹೆಮ್ಮೆಪಡಿ, ನಾವು ಭಾರತೀಯರೆಂದು..! ವಿಶ್ವಮಟ್ಟದಲ್ಲಿ ನಾವೀಗ ಸದ್ದು ಮಾಡುತ್ತಿದ್ದೇವೆ..! ಭಾರತ ವಿಶ್ವಗುರು ಆಗುವ ಎಲ್ಲಾ ಲಕ್ಷಣಗಳೂ ತೋರುತ್ತಿದೆ..! ವಿದೇಶಗಳಲ್ಲಿ ನಮ್ಮವರಿಗೆ ಮಣೆ ಹಾಕಲಾಗುತ್ತಿದೆ..! ನಾನಾ ಹುದ್ದೆಗಳಿಗೆ ರತ್ನಗಂಬಳಿ ಸ್ವಾಗತ ಭಾರತೀಯರಿಗೆ ಸಿಗ್ತಾ ಇದೆ..! ಈಗ ಈ ಖುಷಿಗೆ ಇನ್ನೊಂದು ಸೇರ್ಪಡೆಯಾಗಿದೆ..! ನಾವೀಗ ಅಮೆರಿಕಾದಲ್ಲಿ ಸುಪ್ರೀಂ..!
ಅಮೆರಿಕಾದಲ್ಲಿ ಸುಪ್ರೀಂ…?! ಅಂದರೆ ಏನೆಂದು ಅರ್ಥವಾಗಿಲ್ವಾ..?! ಅರ್ಥವಾಗದೇ ಇದ್ರೂ ಖುಷಿ ಆಗ್ತಾ ಇದೆ ಅಲ್ವಾ..?! ಸರಿ, ವಿಷಯಕ್ಕೆ ಬರ್ತೀನಿ..!
ಅಮೆರಿಕಾದ ಸುಪ್ರೀಂಕೋರ್ಟ್ ಗೆ ಭಾರತೀಯ ಮೂಲದ ವ್ಯಕ್ತಿಯನ್ನು ನೇಮ ಮಾಡುವ ಸಾಧ್ಯತೆ ಹೆಚ್ಚಿದೆ..! ಎಲ್ಲರ ಬೆಂಬಲ ಇದಕ್ಕೆ ಸಿಗ್ತಾ ಇದೆ..!
ಅವರು, ಭಾರತೀಯ ಮೂಲದ ಶ್ರೀಕಾಂತ್ ಶ್ರೀನಿವಾಸನ್. ಇವರನ್ನು ಅಮೇರಿಕಾದ ಸುಪ್ರೀಂಗೆ ನೇಮಕಮಾಡುವ ಕುರಿತು ಚಿಂತನೆ ನಡೆದಿದೆ..!
ಕನ್ಸರ್ವೇಟಿವ್ ಪಾರ್ಟಿಯ ಬೆಂಬಲಿಗರಾದ ನ್ಯಾಯಮೂರ್ತಿ ಅಂಟೋನಿನ್ ಸ್ಕಾಲಿಯಾ ಇದ್ದಕ್ಕಿದ್ದಂತೆ ಮರಣವನ್ನಪ್ಪಿದ ಕಾರಣ, ಕೂಡಲೇ ಆ ಸ್ಥಾನಕ್ಕೆ ನ್ಯಾಯದೀಶರನ್ನು ಕೂರಿಸ ಬೇಕಾಗಿರುವುರಿಂದ ಎರಡೂ ಪಕ್ಷಗಳು ಚಕಾರ ಎತ್ತದೆ ಒಪ್ಪಬಲ್ಲ ವ್ಯಕ್ತಿಯನ್ನು ನೇಮಕ ಮಾಡುವ ಕುರಿತು ಅಮೆರಿಕಾ ಅಧ್ಯಕ್ಷರಾದ ಒಬಾಮ ಯೋಚಿಸುತ್ತಿದ್ದು, ಆ ಜಾಗಕ್ಕೇ ಶ್ರೀಕಾಂತ್ ಶ್ರೀನಿವಾಸನ್ ಅವರೇ ಸರಿ ಎಂದು ನಿರ್ಧರಿಸಿದಂತಿದೆ ಎಂಬ ಖಷಿಯ ವಿಚಾರ ತಿಳಿದು ಬಂದಿದೆ..!
ಶ್ರೀನಿವಾಸನ್ ಅವರ ಅಮ್ಮ ಚೆನ್ನೈಯವರು, ಅಪ್ಪ ತಿರುವೆಲ್ ವೇಲಿಯಲ್ಲಿನವರು. 1960ರಲ್ಲಿ ಅಮೇರಿಕಾಕ್ಕೆ ವಲಸೆ ಹೋಗಿದ್ದಾರೆ. ಇನ್ನೂ 48 ವರ್ಷದ ಭಾರತೀಯ ಮೂಲದ ಶ್ರೀನಿವಾಸನ್ ಅವರ ಹೆಸರು ಸುಪ್ರೀಂ ಕೋಟರ್್ಗೆ ನೇಮಕವಾಗಬಹುದಾದ ನ್ಯಾಯಧೀಶರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಮುಖ್ಯ ಕಾರಣ ಶ್ರೀನಿವಾಸನ್ ಚಿಕ್ಕ ವಯಸ್ಸಲ್ಲೇ ಅಮೆರಿಕಾದಲ್ಲಿ ನಿಭಾಯಿಸಿರುವ ದೊಡ್ಡ ದೊಡ್ಡ ಜವಬ್ದಾರಿಗಳು..!
ಸ್ಟಾನ್ ಫೋರ್ಡ್ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆದಿರುವ ಶ್ರೀಕಾಂತ್ ಶ್ರೀನಿವಾಸನ್ ಒಬಾಮರ ಉಪಪ್ರಧಾನ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ ಅನುಭವನ್ನು ಹೊ0ದಿದ್ದಾರೆ..! ಅಮೆರಿಕಾದ ವಿವಾಹ ಭದ್ರತಾ ಕಾಯ್ದೆ ವಿಚಾರದಲ್ಲಿ ಕೆಲಸ ಮಾಡಿದ ಹಿರಿಯ ಅನುಭವ ಇವರದ್ದು..! ಜಾರ್ಜ್ ಡಬ್ಲ್ಯು ಬುಷ್ ಆಡಳಿತಾವಧಿಯಲ್ಲೂ ಕೂಡ ಸಾಲಿಸಿಟರ್ ಜನರಲ್ಗೆ ಸಹಾಯಕನಾಗಿ ಕೆಲಸ ಮಾಡಿದ್ರು ಈ ಶ್ರೀನಿವಾಸನ್..! ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಸಾಂಡ್ರಾ ಡೇ ಓ ಕೊನರ್ಗೆ ಕ್ಲರ್ಕ್ ಆಗಿಯೂ ಕೆಲಸ ಮಾಡಿ ಅನುಭ ಸಂಪಾದಿಸಿಕೊಂಡಿದ್ದಾರೆ..!
2012ರಲ್ಲಿ ಒಕ್ಕೂಟ ರಾಷ್ಟ್ರದ ನ್ಯಾಯದೀಶರನ್ನಾಗಿ ಶ್ರೀನಿವಾಸನ್ ಅವರನ್ನು ನೇಮಕ ಮಾಡುವ ಸಂದರ್ಭದಲ್ಲಿ ಸೆನೆಟ್ನಲ್ಲಿ ಭಾರಿ ಬೆಂಬಲ ವ್ಯಕ್ತವಾಗಿತ್ತು..! 97-0 ಮತ ಅಂದು ಈ ಶ್ರೀನಿವಾಸನ್ ಅವರಿಗೆ ಬಂದಿತ್ತು..! ಆಗ ಇಂದಿನ ಅಧ್ಯಕ್ಷೀಯ ಅಭ್ಯರ್ಥಿಗಳಾದ ಟೆಡ್ ಕ್ರೂಜ್ ಮತ್ತು ಮಾರ್ಕೋ ರುಬಿಯೋ ಸಹ ಶ್ರೀನಿವಾಸನ್ ಅವರಿಗೇ ಬೆಂಬಲ ನೀಡಿದ್ದರು…!
ಶ್ರೀನಿವಾಸನ್ 2013ರಲ್ಲಿ ಕೊಲಂಬಿಯಾ ಸರ್ಕ್ಯೂಟ್ ನ ಜಿಲ್ಲಾ ಮೇಲ್ಮನವಿ ಕೋರ್ಟ್ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಆ ಅಧಿಕಾರ ಪಡೆದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು..!
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ಈ ಶ್ರೀಕಾಂತ್ ಶ್ರೀನಿವಾಸನ್ ಅವರನ್ನು ಅಮೆರಿಕಾದ ಸುಪ್ರೀಂಗೆ ನೇಮಕಮಾಡಲು ಕನ್ಸರ್ವೇಟಿವ್ ಮತ್ತು ರಿಪಬ್ಲಿಕನ್ ಪಾರ್ಟಿಗಳೆರಡೂ ಸಹಮತ ನೀಡುವುದು ಸ್ಪಷ್ಟವಾಗಿದೆ..! ಆದರೆ ಅಂತಿಮ ಆಗುವ ತನಕ ಏನನ್ನೂ ಹೇಳಲಾಗಲ್ಲ..! ಶ್ರೀಕಾಂತ್ ಶ್ರೀನಿವಾಸನ್ ಅಮೆರಿಕಾ ಸುಪ್ರೀಂಗೆ ನೇಮಕಗೊಂಡರೆ ಆ ಸ್ಥಾನ ಅಲಂಕರಿಸಿದ ಮೊದಲ ಭಾರತೀಯರೆಂಬ ಹಿರಿಮೆಗೂ ಪಾತ್ರರಾಗುತ್ತಾರೆ..! ಜೊತೆಗೆ ಭಾರತೀಯನೊಬ್ಬ ಅಮೆರಿಕಾ `ಸುಪ್ರೀಂ’ಗೆ ನೇಮಕಗೊಂಡರೆ ಭಾರತೀಯರಿಗೂ ಹೆಮ್ಮೆಯೇ..
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಅಪ್ಪ ಆಗೋದು ಸುಲಭ..! ಅಮ್ಮ ಆಗೋದಲ್ಲ..!
ಅಶ್ವಿನ್ ಆಡಿದ್ದು ಮೂರೇ ಮೂರು ಪ್ರಥಮದರ್ಜೆ ಪಂದ್ಯ ; ಐಪಿಎಲ್ನಲ್ಲಿ ಹರಾಜಾಗಿದ್ದು 4.5 ಕೋಟಿ ರೂಗಳಿಗೆ..!
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?
ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video
ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!
20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?