ಫಸ್ಟ್ ನ್ಯೂಸ್ ತೆರೆ ಮೇಲೆ ಕಾಣಿಸಿಕೊಳ್ಳೋ ನಿರೂಪಕರಿರವರು…!

0
570

ಕನ್ನಡದ ನಂಬರ್ 1 ಸುದ್ದಿವಾಹಿನಿ ಟಿವಿ9ನಿಂದ ಹೊರಬಂದ ಎಸ್.ರವಿಕುಮಾರ್ ಮತ್ತು ಮಾರುತಿ ಅವರ ಸಾರಥ್ಯದಲ್ಲಿ ಫಸ್ಟ್ ನ್ಯೂಸ್ ಎಂಬ ಹೊಸ ಸುದ್ದಿವಾಹಿನಿ ಕನ್ನಡಿಗರ ಮನೆ-ಮನ ತಲುಪಲು ಸಜ್ಜಾಗುತ್ತಿದೆ. ಪ್ರಮುಖ ಸುದ್ದಿವಾಹಿನಿಗಳ ಉದ್ಯೋಗಿಗಳು ಫಸ್ಟ್ ನ್ಯೂಸ್ ತಂಡ ಸೇರಿಕೊಳ್ಳುತ್ತಿದ್ದಾರೆ. ರವಿಕುಮಾರ್ ಸಿಇಒ ಹಾಗೂ ಮಾರುತಿ ಎಡಿಟರ್ ಇನ್ ಚೀಫ್ ಆಗಿರೋ ಫಸ್ಟ್ ನ್ಯೂಸ್ ಬಗ್ಗೆ ನಿರೀಕ್ಷೆ‌ ಹೆಚ್ಚುತ್ತಿದೆ.

ದಿ ನ್ಯೂ ಇಂಡಿಯನ್ ಟೈಮ್ಸ್ ಗೆ ಸದ್ಯ ಲಭ್ಯವಾಗಿರೋ ಮಾಹಿತಿಯಂತೆ ಹೆಸರಾಂತ ಪತ್ರಕರ್ತರು ಫಸ್ಟ್ ನ್ಯೂಸ್ ಗೆ ಈಗಾಗಲೇ ಸೇರಿದ್ದಾರೆ.
ಫಸ್ಟ್ ನ್ಯೂಸ್ ತೆರೆ ಅಲಂಕರಿಸೋ ನಿರೂಪಕರ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಯಾವೆಲ್ಲಾ ನಿರೂಪಕರು ಫಸ್ಟ್ ನ್ಯೂಸ್ ನ ಪರದೆ ಮೇಲೆ ಬರಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ನಿಖಿಲ್: ನಿಖಿಲ್ ಜೋಶಿ ಅವರ ಕುಟುಂಬ ಮೂಲತಃ ಉತ್ತರ ಕರ್ನಾಟಕ. ಆದರೆ, ಇವರು‌ ಹುಟ್ಟಿದ್ದು ಬೆಳೆದಿದ್ದೆಲ್ಲಾ ಬೆಂಗಳೂರಲ್ಲಿ.‌ರೇಡಿಯೋ ದ ಮೂಲಕ ವೃತ್ತಿ‌ ಜೀವನ ಆರಂಭಿಸಿದ್ರು. ಬಳಿಕ ಟಿವಿ9ನ ಸೋದರ ಸಂಸ್ಥೆ‌ ನ್ಯೂಸ್ 9 ನ ಮೂಲಕ ಸುದ್ದಿ ಮಾಧ್ಯಮದ ಜರ್ನಿ‌ ಆರಂಭವಾಯ್ತು. ಪ್ರಾರಂಭದ ವರ್ಷಗಳಲ್ಲಿ ಅಪರಾಧ ಮತ್ತು ಮೆಟ್ರೋ ವಿಭಾಗಗಳಲ್ಲಿ ಕಾರ್ಯ ನಿವರ್ಹಿಸಿದ್ರು.‌ಬಳಿಕ‌ ನಿರೂಪಕರಾಗಿ ತೆರೆಮೇಲೆ ಮಿಂಚಿದ್ರು.
ನ್ಯೂಸ್ 9 ಬಳಿಕ ಟೈಮ್ಸ್ ನೌ ರಾಷ್ಟ್ರೀಯ ಸುದ್ದಿವಾಹಿನಿಗೆ‌ ಬೆಂಗಳೂರು ಪ್ರತಿನಿಧಿಯಾಗಿ ಕಾರ್ಯ ನಿವರ್ಹಿಸಿದರು. ಈಗ ಫಸ್ಟ್ ನ್ಯೂಸ್ ನಲ್ಲಿ ಪ್ರಮುಖ ಹುದ್ದೆಯೊಂದನ್ನು ಅಲಂಕರಿಸಿದ್ದಾರೆ.

ಸೋಮಣ್ಣ ಮಾಚಿಮಾಡ : ಸೋಮಣ್ಣ ಮಾಚಿಮಾಡ ದೃಶ್ಯ ಮಾಧ್ಯಮ ಲೋಕದ ಚಿರಪರಿಚಿತ ಹೆಸರು. ಮೈಸೂರು ಮಿತ್ರ ಪತ್ರಿಕೆ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ ಸೋಮಣ್ಣ ಅವರು ಟಿವಿ9 ವರದಿಗಾರರಾಗಿ, ಮೆಟ್ರೋ ಬ್ಯೂರೋ ಮುಖ್ಯಸ್ಥರಾಗಿ ಸೇವೆಸಲ್ಲಿಸಿದ್ದರು. ಬಳಿಕ ಸಮಯ ಈ ಟಿವಿ (ಈಗಿನ ನ್ಯೂಸ್ 18 ಕನ್ನಡ) ಯಲ್ಲಿ ಸುದ್ದಿ ನಿರೂಪಕರಾಗಿದ್ದರು. ಈ-ಟಿವಿಗೆ ರಾಜೀನಾಮೆ ನೀಡಿದ ಬಳಿಕ ಸೂಪರ್ ಸಂಡೆ ವಿತ್ ಸೋಮಣ್ಣ ಎಂಬ ಟ್ರಾವೆಲ್ ಶೋ ಮೂಲಕ ಯೂಟ್ಯೂಬ್ ನಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದರು.ಈಗ ಫಸ್ಟ್ ನ್ಯೂಸ್ ತಂಡ ಕೂಡಿಕೊಂಡಿರೋ ಇವರು ನಿರೂಪಕರಾಗಿ ಸಿಟಿ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ವಿನಾಯಕ ಗಂಗೊಳ್ಳಿ: ಇವರು ಕೂಡ ಈಟಿವಿಯ ಪ್ರಾಡಕ್ಟ್.. ಟಿವಿ9 ಸೇರಿದ ಬಳಿಕ ಇವರ ಗ್ರಾಫ್ ಬಹು ಎತ್ತರಕ್ಕೆ ಬೆಳೆಯಿತು. ಅದಕ್ಕೆ ಕಾರಣ ಅವರ ಶ್ರಮವಲ್ಲದೇ ಬೇರೆ ಏನೂ ಅಲ್ಲ. ಟಿವಿ9 ಚಕ್ರವ್ಯೂಹ ಕಾರ್ಯಕ್ರಮಕ್ಕೆ ಹೊಸ ಆಯಾಮವನ್ನ ಕೊಟ್ಟವರು. ಟಿವಿ9 ಪೊಲಿಟಿಕಲ್ ಬ್ಯೂರೋ ಹೆಡ್ ಆಗಿ ವಿನಾಯಕ್ ಈಗ ಫಸ್ಟ್ ನ್ಯೂಸ್ ನಲ್ಲಿ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥರು.

ಸ್ಮಿತಾ ರಂಗನಾಥ್: ಶಿವಮೊಗ್ಗದವರಾದ ಸ್ಮಿತಾ ಸುವರ್ಣ ವಾಹಿನಿಯ ಮೂಲಕ ವೃತ್ತಿ ಬದುಕು ಆರಂಭಿಸಿದವರು. ಸುವರ್ಣ ಆಂಕರ್ ಆಗಿದ್ದ ಸ್ಮಿತಾ, ಟಿವಿ9 ಸಂಸ್ಥೆಯ ಪ್ರಮುಖ ಆ್ಯಂಕರ್ ಆಗಿದ್ದರು. ಈಗ ಫಸ್ಟ್ ನ ಪ್ರಮುಖ ನಿರೂಪಕರುಗಳಲ್ಲೊಬ್ಬರು.


ಜಾನ್ಹವಿ ಕಾರ್ತಿಕ್: ಉದಯ ಟಿವಿ ಮೂಲಕ ವೃತ್ತಿ ಆರಂಭಿಸಿದ ಜಾನ್ಹವಿ, ಟಿವಿ9ನಲ್ಲಿ ಕೆಲ ಕಾಲ ಆ್ಯಂಕರ್ ಆಗಿದ್ದರು. ಬಳಿಕ ಬಿಟಿವಿ ನ್ಯೂಸ್ ಪ್ರಮುಖ ಆ್ಯಂಕರ್ ಆಗಿ ಅನೇಕ ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಅಲ್ಲಿಂದ ಈಟಿವಿ ಸೇರಿದ್ದ ಜಾನ್ಹವಿ ಕಾರ್ತಿಕ್ ಈಗ ಫಸ್ಟ್ ನ್ಯೂಸ್ ನಲ್ಲಿ ಪ್ರಮುಖ ಆ್ಯಂಕರ್ ಆಗಿದ್ದಾರೆ.

ಇನ್ನುಳಿದಂತೆ ‌ಟೈಗರ್ ರಮೇಶ್ ಬಾಬು ಚೀಫ್ ಪ್ರಡ್ಯೂಸರ್, ಸಿದ್ದೇಶ್ ಕ್ರಿಯೇಟಿವ್ ಡೆರೆಕ್ಟರ್ , ಜೆಫ್ರಿ ಅಯ್ಯಪ್ಪ ಔಟ್ ಪುಟ್ ಹೆಡ್ ಆಗಿ, ಸತೀಶ್ ಕುಮಾರ್ ಎಂ ಪ್ರೋಗ್ರಾಂ ಅಸೋಸಿಯೇಟ್ ಎಡಿಟರ್ ಆಗಿಆಗಿ, ವಿಷ್ಣು ಪ್ರಸಾದ್ ಕ್ರೈಂ ಬ್ಯೂರೋ ಹೆಡ್ ಆಗಿ, ಪ್ರವೀಣ್ ಏಕಾಂತ್ ಸಿನಿಮಾ ಬ್ಯೂರೋ ಮುಖ್ಯಸ್ಥರಾಗಿ , ಗಂಗಾಧರ್ ಸ್ಪೋರ್ಟ್ಸ್ ವಿಭಾಗದ ಚೀಫ್ ಆಗಿ, ಶ್ರೀನಿವಾಸ್ ಕುಲಕರ್ಣಿ, ಶ್ರೀನಿವಾಸ್ ಕ್ಯಾಮರಾ ವಿಭಾಗದ ಮುಖ್ಯಸ್ಥ ರಾಗಿ ಫಸ್ಟ್ ನ್ಯೂಸ್ ನಲ್ಲಿ ಪ್ರಮುಖ ಹೊಣೆ ಹೊತ್ತಿದ್ದಾರೆ.


ನಾಗೇಂದ್ರ ಬಾಬು ಸ್ಪೆಷಲ್ ಕರೆಸ್ಪಾಂಡೆಂಟ,   ಕಟೆಂಟ್ ಟೀಂ ನಲ್ಲಿ ವಿದ್ಯಾಶ್ರೀ, ನವೀನ್, ಗಣೇಶ್ ನಾವಡಾ, ರಾಘವೇಂದ್ರ ಗುಡಿ ಮತ್ತಿತರರಿದ್ದಾರೆ. ಪ್ರೋಗ್ರಾಮ್ ವಿಭಾಗದಲ್ಲಿ ಅನಂತ್ ಸಾಯಿ, ಜನಾರ್ದನ್, ಅಜಯ್ ಇನ್ಪುಟ್ನಲ್ಲಿ ಮೋಹನ್, ಪ್ರೊಡಕ್ಷನ್ನಲ್ಲಿ ಅಂಕಪ್ಪಗೌಡ, ಗ್ರಾಫಿಕ್ ವಿಭಾಗದಲ್ಲಿ ಹರಿಕೃಷ್ಣ, ಕುಮಾರ್ ಮೂಗನಕೊಪ್ಪಲು, ಜಯಂತ್, ಎಡಿಟಿಂಗ್ ವಿಭಾಗದಲ್ಲಿ ಗುರುರಾಜ್, ಪುಷ್ಪರಾಜ್, ದೊರೆಸ್ವಾಮಿ ಸೇರಿದಂತೆ ಹಲವು ಪ್ರತಿಭೆಗಳಿದ್ದಾರೆ.
ಪ್ರತಿಯೊಂದು ವಿಭಾಗದಲ್ಲೂ ಪ್ರತಿಭಾವಂತರ ಸಮಾಗಮವಿದೆ.
ಟಿವಿ9, ನ್ಯೂಸ್ 18 ಕನ್ನಡ ಸುವರ್ಣ, ಪಬ್ಲಿಕ್ ಟಿವಿ ಮೊದಲಾದ ಕಡೆಗಳಿಂದ ಇನ್ನೂ ಅನೇಕರು ಫಸ್ಟ್ ನ್ಯೂಸ್ ಟೀಂ ಸೇರುವವರಿದ್ದಾರೆ.

ಸದ್ಯ ಇನ್ಫ್ಯಾಂಟ್ರಿ ರಸ್ತೆಯಲ್ಲಿರೋ ಎಂಬಸಿ ಸ್ಕ್ವೇರ್ನಲ್ಲಿ ಫಸ್ಟ್ ನ್ಯೂಸ್ ತಯಾರಿ ಜೋರಾಗಿ ನಡೆಯುತ್ತಿದೆ. ಮಿಷನ್ ರೋಡ್ನಲ್ಲಿರೋ ನೂತನ ಕಟ್ಟಡದಲ್ಲಿ ಸ್ಟುಡಿಯೋ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಜನವರಿ ಕೊನೆಯ ವಾರ ಎಲ್ಲಾ ಸಿಬ್ಬಂದಿ ಹೊಸ ಕಚೇರಿಗೆ ಶಿಫ್ಟ್ ಆಗಲಿದ್ದಾರೆ. ಫೆಬ್ರವರಿ‌ ಕೊನೆ ಅಥವಾ ಮಾರ್ಚ್ ಆರಂಭದಲ್ಲಿ ಫಸ್ಟ್ ನ್ಯೂಸ್ ಹೊಸತನದೊಂದಿಗೆ ನಿಮ್ಮ ಮುಂದೆ ಬರಲಿದೆ.

LEAVE A REPLY

Please enter your comment!
Please enter your name here