ಅರಿವಿಲ್ಲದೇ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ ಜೋಕೆ..! ಚೀನಾದಿಂದ ಬರುತ್ತಿವೆ ಪ್ಲಾಸ್ಟಿಕ್ ಮೇಡ್ ತಿನಿಸು

1
91

ಚೀನಾದಲ್ಲಿ ನಿರ್ಮಾಣವಾಗುವ ವಸ್ತುಗಳಿಗೆ ಹೆಚ್ಚು ವ್ಯಾಲಿಡಿಟಿ ಇಲ್ಲ ಎಂಬುದು ಜಗತ್ತಿಗೇ ತಿಳಿದಿರುವ ವಿಚಾರ. ಅಲ್ಲದೇ ಯಾವುದಾದರೂ ಡೂಪ್ಲಿಕೇಟ್ ವಸ್ತು ಕಂಡರೆ ಅದು ಚೀನಾದ್ದೇ ಎನ್ನುವಷ್ಟರ ಮಟ್ಟಿಗೆ ಚೀನಾ ವಸ್ತುಗಳು ಕಳಪೆಯಾಗಿರುತ್ತವೆ. ಆದರೆ ಚೀನಿಯರು ತಿನ್ನುವ ಆಹಾರದಲ್ಲೂ ಮೋಸ ಮಾಡುತ್ತಿದ್ದಾರೆ. ಅದರ ಮೂಲಕ ಜನರಿಗೆ ಪ್ಲಾಸ್ಟಿಕ್ ತಿನ್ನಿಸುತ್ತಿದ್ದಾರೆ. ಹೌದು ಚೀನಾದಿಂದ ರಪ್ತಾಗುವ ಹೆಚ್ಚಿನ ವಸ್ತುಗಳನ್ನು ಪ್ಲಾಸ್ಟಿಕ್ನಿಂದ ನಿರ್ಮಾಣ ಮಾಡಿರುತ್ತಾರೆ ಎಂದರೆ ನೀವು ನಂಬಲೇಬೇಕು. ಅಂತಹ ಕೆಲ ಆಹಾರಗಳು ಇಲ್ಲಿವೆ ನೋಡಿ.

1. ಅಕ್ಕಿ

ಚೀನಾದಲ್ಲಿ ಪ್ಲಾಸ್ಟಿಕ್ ನಿಂದ ಅಕ್ಕಿ ಮಾಡುವ ದೊಡ್ಡ ಮಟ್ಟದ ಕಾರ್ಖಾನೆಗಳಿವೆ ಎಂದು ಅಲ್ಲಿನ ವಾಹಿನಿಗಳು ಇತ್ತೀಚೆಗೆ ಪ್ರಸಾರ ಮಾಡಿದ್ದವು. ಈ ವಿಷಯ ಜಗತ್ತಿನಾದ್ಯಂತ ಚರ್ಚೆಯಾಗಿತ್ತು. ವಿಶೇಷವೆಂದರೆ ಈ ಅಕ್ಕಿಯಲ್ಲಿ ಚೀನಾವಲ್ಲದೇ ಭಾರತ, ಪಾಕಿಸ್ತಾನ, ರಷ್ಯಾಗಳಂತ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಈ ಮಾದರಿಯ ಅಕ್ಕಿಯ ದರ ಅತಿ ಕಡಿಮೆಯಾದ್ದರಿಂದ ಬಡವರು ಈ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ ಎಂಬ ಆಘಾತಕಾರಿ ಅಂಶವೂ ಹೊರಬಿದ್ದಿದೆ. ಪ್ಲಾಸ್ಟಿಕ್ ಅಕ್ಕಿ ಸೇವೆನೆಯಿಂದ ಕ್ಯಾನ್ಸರ್ ನಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

2. ಮೊಟ್ಟೆ

ಚೀನಾದಲ್ಲಿ ಪ್ಲಾಸ್ಟಿಕ್ ಮೊಟ್ಟೆ ಮಾಡುವ ಬೃಹತ್ ಉದ್ಯಮವೇ ಬೆಳೆದಿದೆ. ಅಲ್ಜೆನಿಕ್ ಆ್ಯಸಿಡ್, ಪೊಟ್ಯಾಷಿಯಂ ಅಲುಮ್, ಜಿಲೆಟಿನ್, ಕ್ಯಾಲ್ಸಿಯಂ ಕ್ಲೋರೈಡ್, ನೀರು ಮತ್ತು ಕೆಲವು ಅಗತ್ಯ ಬಣ್ಣಗಳನ್ನು ಹಾಕುವ ಮೂಲಕ ಪ್ಲಾಸ್ಟಿಕ್ ಮೊಟ್ಟೆ ಸಿದ್ಧಪಡಿಸಲಾಗುತ್ತದೆ. ಇನ್ನು ಮೊಟ್ಟೆಯ ಹೊರಭಾಗವನ್ನು ಕ್ಯಾಲ್ಸಿಯಂ ಕಾರ್ಬೋನೆಟ್ ನಿಂದ ನಿರ್ಮಿಸಲಾಗುತ್ತದೆ. ಇಂತಹ ಮೊಟ್ಟೆ ಸೇವನೆಯಿಂದ ಬುದ್ದಿಶಕ್ತಿ ನಾಶ ಮತ್ತು ಡಿಮೆಂಟಿಯಾ ಎಂಬ ಖಾಯಿಲೆ ಬರುತ್ತದೆ.

3. ಮಕ್ಕಳ ಆಹಾರ

ಹುಟ್ಟಿದ ಮಕ್ಕಳಿಂದ ಹಿಡಿದು ಬೆಳೆಯುತ್ತಿರುವ ಮಕ್ಕಳವರೆಗೆ ಬೇಕಾಗುವ ಎಲ್ಲಾ ಆಹಾರ ಪದಾರ್ಥಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಚೀನಾ ಮಾರುತ್ತದೆ. ಅಲ್ಲದೇ ಕ್ವಾಲಿಟಿಯೂ ಉತ್ತಮ ಎಂದು ಸರ್ಟಿಫಿಕೆಟ್ ನೀಡುತ್ತದೆ. ಆದರೆ ಅದರ ಅಸಲಿಯತ್ತೇ ಬೇರೆ. ಏಕೆಂದರೆ ಮಕ್ಕಳ ಆಹಾರದಲ್ಲಿಯೂ ಪ್ಲಾಸ್ಟಿಕ್ ಮಿಶ್ರಣ ಮಾಡುತ್ತಾರೆ ಎಂದರೆ ನೀವು ನಂಬಲೇಬೇಕು. 2004ರಲ್ಲೇ 47 ಜನ ಚೀನಿಯರು ಇಂತಹ ಕುಕೃತ್ಯಕ್ಕೆ ಕೈಹಾಕಿದ್ದರು. ಆದರೆ ಅವರನ್ನು ಬಂಧಿಸಲಾಗಿದೆ. ಆದರೂ ಈ ಉದ್ಯಮ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಇಂತಹ ಆಹಾರ ಸೇವನೆಯಿಂದ ಮಕ್ಕಳಿಗೆ ಬುದ್ದಿಶಕ್ತಿ ಕೊರತೆಯಂತಹ ಸಮಸ್ಯೆ ಕಾಡಬಹುದು.

4. ಮೀನು

ಚೀನಾದಲ್ಲಿ ತಿಲಿಪಿಯಾ ಎಂಬ ಮೀನನ್ನು ಬೆಳೆಸಲಾಗುತ್ತದೆ. ಅಚ್ಚರಿ ಎಂದರೆ ಮೀನಿಗೆ ಯಾವುದೇ ಮಾದರಿಯ ಆಹಾರವನ್ನು ನೀಡಿದರೂ ಅದು ಸೇವಿಸುತ್ತದೆ. ಆದ್ದರಿಂದ ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ನಂತಹ ಕೆಟ್ಟ ವಸ್ತುಗಳನ್ನೇ ಆಹಾರವನ್ನಾಗಿ ನೀಡಲಾಗುತ್ತದೆ. ಇದರಿಂದ ತಿಲಿಪಿಯಾ ಮೀನುಗಳ ದೇಹದಲ್ಲಿ ಪ್ಲಾಸ್ಟಿಕ್ ಅಂಶ ಇರುತ್ತದೆ. ಇದನ್ನು ಸೇವಿಸುವವರ ದೇಹಕ್ಕೂ ಇದು ಸೇರುವುದರಿಂದ ಆರೋಗ್ಯದಲ್ಲಿ ಏರುಪೇರುಂಟಾಗುವ ಸಾಧ್ಯತೆ ಇರುತ್ತದೆ.

5. ಚೈನೀಸ್ ಆ್ಯಪಲ್ ಜ್ಯೂಸ್

ನಂಬ್ತೀರೋ ಬಿಡ್ತಿರೋ ಗೊತ್ತಿಲ್ಲ. ಅಮೆರಿಕಾದಲ್ಲಿ ಬಳಕೆಯಾಗುವ ಶೇಕಡಾ 50ರಷ್ಟು ಸೇಬುಹಣ್ಣುಗಳು ಚೀನಾದಿಂದಲೇ ರಫ್ತಾಗುತ್ತವೆ. ಅದರಲ್ಲೂ ಸೇಬಿಗೆ ಬಣ್ಣ ಬರಲು ಮೇಣದಂತಹ ವಸ್ತುವನ್ನು ಬಳಕೆ ಮಾಡುತ್ತಾರೆ. ಅದೇ ಸೇಬನ್ನು ಬಳಸಿಕೊಂಡು ಜ್ಯೂಸ್ ಮಾಡಲಾಗುತ್ತದೆ. ಇದರಿಂದ ದೇಹಕ್ಕೆ ಮೇಣ ನೇರವಾಗಿ ಸೇರುತ್ತದೆ. ಇದರಿಂದ ಕ್ಯಾನ್ಸರ್ ನಂತಹ ಸಮಸ್ಯೆ ಎದುರಾದರೂ ಅಚ್ಚರಿಯಿಲ್ಲ.

6. ಮೆಣಸು

ಚೀನಾದಲ್ಲಿ ಮೆಣಸನ್ನೂ ಡುಪ್ಲಿಕೇಟ್ ಮಾಡುತ್ತಾರೆ ಎಂದರೆ ನೀವು ನಂಬಲೇಬೇಕು. ಯೆಸ್ ಅಚ್ಚ ಕಪ್ಪು ಮಣ್ಣನ್ನು ಮೆಣಸು ಮಾಡಲು ಬಳಸುತ್ತಾರೆ. ಅದಕ್ಕೆ ಕೆಲವು ಕೆಮಿಕಲ್ ಗಳನ್ನು ಸೇರುಸುವ ಮೂಲಕ ಖಾರ ಇರುವಂತೆ ನೋಡಿಕೊಳ್ಳುತ್ತಾರೆ. ಇದು ನಿಜವಾದ ಮೆಣಸನ್ನೂ ನಾಚಿಸುವಂತಿರುತ್ತದೆ ಎಂದರೆ ನೀವು ನಂಬಲೇಬೇಕು. ಇದರಿಂದಾಗಿ ಜನರ ಆರೋಗ್ಯ ಹಾಳಾಗುತ್ತದೆ ಎಂದು ಚೀನಾವೇ ಹೇಳುತ್ತದೆ. ಆದರೆ ಅದನ್ನು ತಡೆಯಲು ಮುಂದಾಗುವುದಿಲ್ಲ.

7. ಚಿಕನ್

ಅಮೆರಿಕಾ ಒಂದು ಸಂಸ್ಥೆಯು ಇತ್ತೀಚೆಗೆ ಒಂದು ಸಮರ್ಥನೆ ನೀಡಿತು. ಅದೇನೆಂದರೆ ಚೀನಾದಿಂದ ಆಮದಾಗುವ ಕೋಳಿಯ ಮಾಂಸ ಡೂಪ್ಲಿಕೇಟ್ ಎಂದು ಅದು ಹೇಳಿತ್ತು. ಅಲ್ಲದೇ ಕೋಳಿಯ ಮಾಂಸ ಎಂದು ನೀಡುವ ಮಾಂಸ ಕೋಳಿಯದಲ್ಲ. ಬದಲಿಗೆ ಬೇರೆಯ ಪ್ರಾಣಿಯದ್ದು ಎಂದು ಅದು ಹೇಳಿತ್ತು. ಅಲ್ಲದೇ ಮೂಳೆಗಳನ್ನು ಪ್ಲಾಸ್ಟಿಕ್ ಮೂಲಕ ನಿರ್ಮಿಸಿ ಜನರನ್ನು ಚೀನಾ ಯಾಮಾರಿಸುತ್ತಿದೆ ಎಂದು ಹೇಳಿತ್ತು. ಇಷ್ಟು ಸಾಕಲ್ಲವೇ ಚೀನಾ ಅಸಲಿಯತ್ತು ತಿಳಿಯಲು.

8. ಸ್ವೀಟ್ ನೂಡಲ್ಸ್

ಇತ್ತೀಚೆಗೆ ಸೀಸ ಮತ್ತು ಗ್ಲುಟಮೇನ್ ಅಂಶ ಇದೆ ಎಂಬ ಕಾರಣಕ್ಕೆ ನೂಡಲ್ಸ್ ನಮ್ಮ ದೇಶದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಅಲ್ಲದೇ ಬ್ಯಾನ್ ಕೂಡಾ ಆಗಿತ್ತು. ಆದರೆ ಚೀನಾದಿಂದ ಆಮದಾಗುವ 5.5 ಟನ್ ನಷ್ಟು ನೂಡಲ್ಸ್ ಫೇಕ್ ಎಂಬ ಅಂಶ ಬಯಲಾಗಿದೆ. ಅಲ್ಲದೇ ನೂಡಲ್ಸ್ ಗೆ ಬಣ್ಣ ಬರುವ ಸಲುವಾಗಿ ನೇರಳೆ ಬಣ್ಣದ ಇಂಕ್ ಬಳಸಲಾಗುತ್ತದೆ ಎಂಬ ಅಂಶವೂ ಬಯಲಾಗಿದೆ.

9. ಚೈನೀಸ್ ಗಾರ್ಲಿಕ್

ಚೀನಾದಿಂದ ರಫ್ತಾಗುವ ಜಿಂಜರ್ ಮತ್ತು ಗಾರ್ಲಿಕ್ ಪೇಸ್ಟ್(ಬೆಳ್ಳುಳ್ಳಿ ಪೇಸ್ಟ್)ನಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕೆಮಿಕಲ್ ಬಳಸುತ್ತಾರೆ ಎಂದು ಗೊತ್ತಾಗಿದೆ. ಈ ಪೇಸ್ಟ್ ನ್ನು ಹೆಚ್ಚು ದಿನ ಕೆಡದಂತೆ ಇಡಲು ಚೀನಿಯರು ಇಂತಹ ಉಪಾಯ ಕಂಡುಹಿಡಿದಿದ್ದಾರೆ. ಆದರೆ ಇದನ್ನು ಬಳಸಿದಾಗ ಕೆಟ್ಟ ರುಚಿ ನೀಡುತ್ತದೆ. ವಿಶೇಷವೆಂದರೆ ಚೀನಾದಲ್ಲಿ ತಯಾರಾಗುವ ಶೇಕಡಾ 31 ರಷ್ಟು ಜಿಂಜರ್ ಮತ್ತು ಗಾರ್ಲಿಕ್ ಪೇಸ್ಟ್ ಅಮೆರಿಕಾದಲ್ಲಿ ಬಳಕೆಯಾಗುತ್ತದೆ.

10. ಬಟಾಣೆ ಕಾಳು

ನಾವು ದಿನನಿತ್ಯ ಆಹಾರದಲ್ಲಿ ಬಲಸುವ ಬಟಾಣೆ ಕಾಳುಗಳನ್ನೂ ಚೀನಾ ನಕಲು ಮಾಡುತ್ತದೆ ಎಂದರೆ ನೀವು ನಂಬಲೇಬೇಕು. ಸೋಯಾ ಬೀನ್ ಮತ್ತು ಅವರೆಕಾಳುಗಳನ್ನು ಚೀನಿಯರು ಬಟಾಟೆ ಕಾಳುಗಳನ್ನು ಗ್ರೀನ್ ಡೈ ಮತ್ತು ಸೋಡಿಯಂ ಮೆಟಾಬಿಸಲ್ಫೇಟ್ (ಇದನ್ನು ಟಾಯ್ಲೆಟ್ ಕ್ಲೀನ್ ಮಾಡುವ ವಸ್ತುಗಳಲ್ಲೂ ಬಳಸುತ್ತಾರೆ) ಎಂಬ ವಸ್ತುಗಳ ಮೂಲಕ ಬಟಾಣೆ ಕಾಳುಗಳ ರೂಪಕ್ಕೆ ತರುತ್ತಾರೆ. ಇದು ಅಸಲಿ ಬಟಾಣೆ ಕಾಳುಗಳಿಗೇ ಸೆಡ್ಡು ಹೊಡೆಯುವಂತಿರುತ್ತದೆ. ಅಲ್ಲದೇ ಅದಕ್ಕೆ ಹಸಿರು ವರ್ಣ ಬರುವಂತೆ ಮಾಡಲೂ ಕೆಮಿಕಲ್ ಬಳಸುತ್ತಾರೆ.

ನಮ್ಮ ದೇಶದಲ್ಲಿ ಚೀನಾದ ವಸ್ತುಗಳು ಬಳಕೆಯಾಗುತ್ತವೆ. ಅದು ಎಷ್ಟರ ಮಟ್ಟಿಗೆ ಎಂದರೆ ಚೀನಿ ವಸ್ತುಗಳಿಲ್ಲದೇ ಜೀವನ ನಡೆಯುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ. ಆದರೆ ಚೀನಿಯರು ತಿಳಿಯದಂತೆ ನಮಗೆ ವಿಷವುಣಿಸುತ್ತಿದ್ದಾರೆ. ಅದರ ಬಗ್ಗೆ ಸ್ವಲ್ಪ ಎಚ್ಚರ ವಹಿಸಬೇಕಾದ ಅಗತ್ಯತೆ ನಮ್ಮ ಮುಂದಿದೆ.

  • ರಾಜಶೇಖರ ಜೆ

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಭಾರತದ ಕಿರಿಯ ಪಿ.ಎಚ್.ಡಿ. ಸ್ಟೂಡೆಂಟ್ `ಸುಷ್ಮಾ ವರ್ಮಾ..’! 15 ವರ್ಷದ ಈ ಬಾಲಕಿಯ ಅಪ್ಪ ದಿನಗೂಲಿ ಕಾರ್ಮಿಕರು ಇವಳು ಪಿ.ಎಚ್.ಡಿ. ಸ್ಟೂಡೆಂಟ್..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ಆಸ್ಟ್ರೇಲಿಯಾದ ಅಡಿಲೇಡ್ ನ ದೊಡ್ಡ ಸಾಫ್ಟ್ ವೇರ್ ಕಂಪನಿಯ ಕೆಲಸ ಬಿಟ್ಟು ಬಂದು ರೈತನಾದ..! ಅಷ್ಟಕ್ಕೂ ಸಾಫ್ಟ್ ವೇರ್ ಕೆಲಸ ಯಾಕೆ ಬಿಟ್ರು ಗೊತ್ತಾ..?

ತನಗಿಂತ ಮೂರು ವರ್ಷ ಚಿಕ್ಕವನಾದ ಹುಡುಗನ್ನು ಪ್ರೀತಿಸಿ ಮದುವೆಯಾದಳು..!

ಎರಡು ಮುಖವುಳ್ಳ ಮಾನವನನ್ನು ಕಂಡಿದ್ದೀರಾ..?

12,000 ಹುಡುಗಿಯರನ್ನು ಲೈಂಗಿಕ ಗುಲಾಮಗಿರಿಯಿಂದ ಕಾಪಾಡಿದ ತಾಯಿ..! ಇವರು ಕಟ್ಟಿದ `ತಾಯಿಮನೆ’ ಸಂತ್ರಸ್ತರ ತವರು ಮನೆ..!

ಅಂದು ಅಮ್ಮ ಇಲ್ಲದಿದ್ದರೆ ಹೇಗಿರುತ್ತಿತ್ತು ಗೊತ್ತಾ..? ಅಪ್ಪ ಎಂಬ ಗುಮ್ಮ ಕೊನೆಗೂ ಹೀರೋ ಆದ

ಹುಚ್ಚ ವೆಂಕಟನ ಈ ಇಂಟರ್ವ್ಯೂ ನೋಡಿದೀರಾ..? ಅಯ್ಯೋ ಸಖತ್ ಮಜಾ ಇದೆ.. ನೋಡಿ…

ನಿಮ್ಮ ಪ್ರಕಾರ ಬಿಗ್ ಬಾಸ್ ಗೆಲ್ಲೋರು ಯಾರು..? ಈಗಲೇ ಕಮೆಂಟ್ ಮಾಡಿ, ಓಟ್ ಮಾಡಿ..!

 ತಾಳಿ ಕಟ್ಟಿದ ಐದೇ ನಿಮಿಷಕ್ಕೆ ತಾಳಿ ಕಿತ್ತು ವಾಪಸ್ ಕೊಟ್ಟ ವಧು..! ಅಷ್ಟಕ್ಕೂ ಅವಳು ಆ ನಿರ್ಧಾರ ಮಾಡಿದ್ದು ಯಾಕೆ ಗೊತ್ತಾ..?

 ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ..

1 COMMENT

LEAVE A REPLY

Please enter your comment!
Please enter your name here