ಕಳೆದ ಹತ್ತಿಪ್ಪತ್ತು ದಿನದಿಂದ ಎಲ್ಲೆಲ್ಲೂ 251 ರೂಪಾಯಿ ಮೊಬೈಲಿಂದೇ ಸುದ್ದಿ..! ನಂಗೂ ಇರ್ಲಿ, ನಮ್ ಹುಡ್ಗೀಗೂ ಇರ್ಲಿ, ನಮ್ಮಮ್ಮ ಅಪ್ಪ, ಅಜ್ಜ ಅಜ್ಜಿ, ಚಿಕ್ಕಪ್ಪ ಚಿಕ್ಕಮ್ಮ ಎಲ್ಲರಿಗೂ ಒಂದೊಂದ್ ಇರ್ಲಿ ಅಂತ ಬುಕ್ ಮಾಡಿದ್ದೇ ಮಾಡಿದ್ದು..! ಆದ್ರೆ ಈಗ ಆ ಕಂಪನಿಯವರು ನಮ್ಗಾಗಲ್ಲ ಸ್ವಾಮಿ ಅಂತ ಕೈ ಎತ್ತಿದ್ದಾರೆ..! ಫ್ರೀಡಂ ೨೫೧ ಹೊಗೆ ಹಾಕಿಸ್ಕೊಂಡಿದೆ..! ಎರಡು ಮೂರು ದಿನದಲ್ಲಿ ಕಂಪನಿಗೆ ಅದೆಷ್ಟೋ ಲಕ್ಷ ಬುಕ್ಕಿಂಗ್ ಆಗಿತ್ತಂತೆ. ಬುಕ್ಕಿಂಗ್ ಜಾಸ್ತಿ ಆದಂಗೇ, ಕಂಪನಿಯವರಿಗೆ ಟೆನ್ಷನ್ ಶುರುವಾಗಿದೆ. ಹೆಂಗಪ್ಪಾ ಇಷ್ಟು ಮೊಬೈಲು ತಯಾರಿಸೋದು, ಹೆಂಗೆ ಡೆಲಿವರಿ ಕೊಡೋದು..? ಇದೆಲ್ಲಾ ಸಾಧ್ಯವೇ ಇಲ್ಲ ಅಂತ ಮನಸಲ್ಲೇ ಡಿಸೈಡ್ ಮಾಡಿ ಈಗ ಬುಕ್ ಮಾಡಿರೋ ಕಸ್ಟಮರ್ ಗಳಿಗೆ ಹಣ ಮರುಪಾವತಿ ಮಾಡ್ತಿದಾರಂತೆ..! ಪಾಪ ಬುಕ್ ಮಾಡಿ ಪೇಮೆಂಟ್ ಲಿಂಕ್ ಬಂದವರು ಕೊಟ್ಟ ದುಡ್ಡಿಗೆ ವಾಪಸ್ ಬರೋ ತನಕ ಕಾಯ್ತಾರೆ..! ಆದ್ರೆ ಬುಕ್ ಮಾಡಿ, ಪೇಮೆಂಟ್ ಲಿಂಕಿಗೆ ಕಾಯ್ತಾ ಕೂತಿರೋ ಜನ ದಿನಕ್ಕೆ 10 ಸಲ ಈಮೇಲ್ ಓಪನ್ ಮಾಡ್ಕೊಂಡು ಬಂತಾ ಬಂತಾ ಅಂತ ಕಾಯ್ತಿದಾರಂತೆ..! ಆದ್ರೆ ಅದು ಮತ್ಯಾವತ್ತೂ ಬರೋದಿಲ್ಲ ಅನ್ನೋದು ಕಹಿಸತ್ಯ..!
ಈ ೨೫೧ ರೂಪಾಯಿ ಮೊಬೈಲ್ ಬಂದಾಗ್ಲೆ ಕೆಲವ್ರು ಯೋಚನೆ ಮಾಡಿದ್ರು, ಇದೆಂಗೆ ಇಷ್ಟು ಕಮ್ಮಿ ರೇಟಿಗೆ ಅಂತ..!! ಆದ್ರೂ ಇದ್ರೂ ಇರಬಹುದು ಅಂತ ಸುಮ್ಮನಾದ್ರು. ಮತ್ತೆ ಕೆಲವರು ಇದು ಸರ್ಕಾರದವರೇ ಕೊಡ್ತಿರೋ ಫೋನು ಅನ್ಕೊಂಡು ಬೇಕಾಬಿಟ್ಟಿ ಮಾತಾಡಿದ್ರು..! ವಿಷಯ ಏನೇ ಇರಲಿ ಇಡೀ ಭಾರತ ಒಂದಷ್ಟು ದಿನ ಬಕ್ರಾ ಆಗಿದ್ದಂತೂ ಸುಳ್ಳಲ್ಲ..! ಈಗ ಯಾವ ಫ್ರೀಡಮ್ಮೂ ಇಲ್ಲ, 251 ಸಹ ಇಲ್ಲ..! ಇನ್ನೂ ಆಸೆಯಿಂದ ಕಾಯ್ತಾ ಕೂತ್ಕೋಬೇಡಿ, ಕಂಪನಿಯವರು ಈಗಾಗ್ಲೇ ಅವರ ಉದ್ಯೋಗಿಗಳಿಗೆಲ್ಲ ಮನೆಗೆ ಕಳಿಸಿದ್ದಾಗಿದೆ, ಜೊತೆಗೆ ಮೊದಲ 30000 ಗ್ರಾಹಕರಿಗೆ ಹಣ ವಾಪಸ್ ಕೊಡೋ ಕಲಸದಲ್ಲಿ ಬಿಜಿ ಆಗಿದೆ..! ನಾನು ೫ ಬುಕ್ ಮಾಡ್ದೆ, ನಾನು 10 ಮಾಡ್ದೆ ಅಂತ ಹೆಮ್ಮೆಯಿಂದ ಬೀಗ್ತಾ ಇದ್ದೋರು ಈಗ ಎಷ್ಟು ಬುಕ್ ಮಾಡಿ ಎಷ್ಟು ಬಕ್ರಾ ಆಗಿದೀರಿ ಅಂತ ಲೆಕ್ಕ ಹಾಕಿ..!
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಪಾಲಕ್ಕಾಡ್‌ನಲ್ಲಿ ಮದಗಜದ ರಂಪಾಟ..! ವಿಡಿಯೋ ವೈರಲ್
ಈ ಫೋನ್ ಬುಕಿಂಗ್ ಮಾಡಿದರೆ 10 ವರುಷಗಳ ಬಳಿಕ ಡ್ರೋನ್ ಮೂಲಕ ಫೋನ್ ಡೆಲಿವರಿ ಅಂತೆ.!
ಮಂಗಳನಲ್ಲಿಗೆ ಮೂರೇ ದಿನಕ್ಕೆ ಹೋಗ್ಬಹುದು
ಬೆಂಗಳೂರಲ್ಲಿ ಕನ್ನಡ ಮಾತನಾಡೋರು 34% ಮಾತ್ರ..! ಕನ್ನಡ ಮಾಯವಾಗ್ತಿದೆ…ರಾಜಧಾನಿಯಲ್ಲಿ ಕನ್ನಡ ನಶಿಸಿ ಹೋಗ್ತಿದೆ..!
ತಣ್ಣಗಿದ್ದ ಬೆಂಗಳೂರು ಯಾಕೆ ಹೀಗೆ ಉರೀತಿದೆ..?! ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ..!