ಯಾರನ್ನೂ ಹೆತ್ತಿಲ್ಲ ಆದರೂ 30+ ಮಕ್ಕಳ ಮಹಾತಾಯಿ!

1
92
ಅಮ್ಮಾ.. ಅನ್ನೋ ಪದವೇ ಎಷ್ಟು ಚೆಂದ! ಹೊತ್ತು- ಹೆತ್ತು, ಸಾಕಿ ಸಲಹುವ ಅಮ್ಮಾ ಎಷ್ಟು ಗ್ರೇಟ್ ಅಲ್ವಾ! ಅಮ್ಮಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ? ಎಲ್ರಿಗೂ ಅಮ್ಮಾ ಅಂದ್ರೆ ಇಷ್ಟಾನೆ! ತನ್ನ ಹೊಟ್ಟೆಗೆ ತಣ್ಣೀರು ಬಟ್ಟೆ ಇಟ್ಕೊಂಡು ಹಸಿವು ತಡೆದುಕೊಂಂಡು, ಮಗುವಿಗೆ ಬಿಸಿ ಬಿಸಿ, ರುಚಿ ರುಚಿ ತಿಂಡಿ ಮಾಡಿಕೊಡೋ ಅಮ್ಮಂದಿರೂ ಅದೆಷ್ಟೋ ಜನ! ಮಕ್ಕಳು ಬೈದರೂ, ಹೊಡೆದರೂ, ಸಹಿಸಿಕೊಳ್ತಾಳೆ ಅಮ್ಮಾ! ಕೆಲವರಿದ್ದಾರೆ ಸ್ವಾಮಿ, ಅವ್ರು ಹೆತ್ತಮ್ಮನನ್ನು ನಾಯಿಗೂ ಕಡೆಯಾಗಿ ನೋಡಿಕೊಳ್ತಾರೆ! ಅವ್ರಿಗೆ ಅಮ್ಮಾ ಎಂಥಾ ದೊಡ್ಡ ಆಸ್ತಿ ಅನ್ನೋದೆ ಗೊತ್ತಿಲ್ಲ!
ಇನ್ನು ಎಲ್ಲಾ ಅಮ್ಮಂದಿರು ಒಳ್ಳೆಯವರೇ? ಹ್ಞೂಂ ಅಂಥ ಹೇಳ್ತೀವಿ! ಆದ್ರೆ ಹಾಗಿಲ್ಲ! ಕೆಲವು ಹೆಂಗಸ್ರು “ಅಮ್ಮಾ” ಎಂಬ ಹೆಸರಿಗೆ ಕಳಂಕ! ಹೇ, ಏನ್ ಏನೋ ಬಾಯಿಗೆ ಬಂದಹಾಗೆ ಬೊಗಳಬೇಡ ತಮ್ಮಾ, ಅಂತಿದ್ದರೀರಾ? ಅಣ್ಣಾ, ಕೇಳಿ ನಿಮಗೂ ಗೊತ್ತು ಎಷ್ಟೋ ಜನ ಹೆಂಗಸ್ರು ಮಕ್ಕಳನ್ನು ಸಾಕಲು ಆಗದ ಕಾರಣಕ್ಕೋ, ಗಂಡನಿಲ್ಲದೆ ಮಗುವಿನ ತಾಯಿಯಾದ ಕರ್ಮಕ್ಕೋ, ತೊಟ್ಟಿಯಲ್ಲಿ, ಚರಂಡಿಯಲ್ಲಿ ಮಗುವನ್ನು ಬಿಸಾಡಿ ಹೋಗುತ್ತಾರೆ! ಇವರು “ಅಮ್ಮಾ” ಅಂಥ ಕರೆಸಿಕೊಳ್ಳೋಕೆ ಯೋಗ್ಯರೇ! ಇವರು ನಮ್ಮ ಅಮ್ಮಂದಿರಂತೆ ದೇವರೇ! ಅಲ್ಲ, ಕಾರಣ, ಏನೇ ಇರಲಿ ಹಸುಗೂಸನ್ನು ಚರಂಡಿಯಲ್ಲೋ, ರಸ್ತೆಯಲ್ಲೋ, ದೇವಾಲಯದ ಕಟ್ಟೆಯಲ್ಲೋ, ರೈಲ್ವೆ ಸ್ಟೇಷನ್ನಲ್ಲೋ, ಬಸ್ ಸ್ಟಾಂಡ್ನಲ್ಲೋ ಎಸೆದು ಹೋಗುವ ಹೆಂಗಸ್ರು ತಾಯಿ, ಅಮ್ಮಾ, ಅವ್ವ ಪದಗಳಿಗೆ ಅಪಮಾನ ಅಲ್ವಾ! ಹೌದು, ಇಂಥವ್ರು ಮನುಷ್ಯರೇ ಅಲ್ಲ! ಅನ್ನೋ ಯೋಚ್ನೆ ನನ್ನಲ್ಲಿ ಬಂದಂತೆ, ನಿಮ್ಮಲ್ಲೂ ಈಗ ಬಂದಿದೆ!
ಹಿಂಗೆ, ತನ್ನ ಕೂಸನ್ನೇ ಬೀದಿಯಲ್ಲಿ ಬಿಡುವ ತಾಯಂದಿರನ್ನು ನೀವೂ ನೋಡಿದ್ದೀರ! ಇಲ್ಲ ಕೇಳಿದ್ದೀರ! ಆದ್ರೆ ತೊಟ್ಟಿಯಲ್ಲಿ ಸಿಕ್ಕ ಮಕ್ಕಳನ್ನೆಲ್ಲಾ ಸ್ವಂತ ಮಕ್ಕಳಂತೆ ಸಾಕಿದ, ಸಾಕುವ ತಾಯಿಯನ್ನು ನೋಡಿದ್ದೀರ? ಅಂಥ ಮಹಾತಾಯಿಯ ಬಗ್ಗೆ ಒಂದ್ ಸ್ಮಾಲ್ ಸ್ಟೋರಿ ಇಲ್ಲಿದೆ ಓದಿ! ಶೇರ್ ಮಾಡಿ, ಅಮ್ಮಾ.. ಯು ಆರ್ ಗ್ರೇಟ್ ಅನ್ನಿ!
 ಆ “ಮಹಾತಾಯಿ” ಲೌ ಜಿಯಾಯಿಂಗ್! ಪೂರ್ವ ಚೀನಾದ ಝೇಜಿಯಾನ್ ಪ್ರಾಂತ್ಯದ ಕ್ಸಿನ್ ಹುವಾದ ಗ್ರೇಟ್ ಸಿಟಿಜನ್! 30ಕ್ಕೂ ಹೆಚ್ಚು ಜನ ಅನಾಥಮಕ್ಕಳಿಗೆ “ಅಮ್ಮಾ” ಆದವಳು! ತೊಟ್ಟಿಯಲ್ಲಿ ಬಿದ್ದಿದ್ದ ಮಕ್ಕಳಿಗೆ ಬದುಕು ಕಟ್ಟಿಕೊಟ್ಟವಳು! ಇಷ್ಟೆಲ್ಲಾ ಮಕ್ಕಳಿಗೆ ಅಮ್ಮನ ಪ್ರೀತಿ ನೀಡಿ ಸಾಕಿದ ತಾಯಿ ಅಗರ್ಭ ಶ್ರೀಮಂತಳೇನೂ ಅಲ್ಲ! ಇವಳು ಮಾಡೋ ಕೆಲಸ ತ್ಯಾಜ್ಯ ಸಂಗ್ರಹ!
ಹೌದು ಸಾರ್, ಚೀನಾದ ಲೌ ಜಿಯಾಯಿಂಗ್ ತ್ಯಾಜ್ಯ ಸಂಗ್ರಹ ಮಾಡಿ, ಅದರ ಮರುಸಂಸ್ಕರಣೆ ಮಾಡುವಳು! ಹೀಗೆ ತ್ಯಾಜ ಸಂಗ್ರಹ ಮಾಡುವಾಗ, ಚರಂಡಿಯಲ್ಲಿ, ಕಸದ ತೊಟ್ಟಿಯಲ್ಲಿ ಸಿಕ್ಕಿದ ಹಸುಗೂಸುಗಳಿಗೆ ಮರುಜನ್ಮ ನೀಡಿದ್ದಾಳೆ! ಇಲ್ಲಿ ತನಕ ಇಂಥಹ 30 ಮಕ್ಕಳಿಗೆ ತಾಯಿ ಆಗಿದ್ದಾಳೆ!
ಈಗ ಈಕೆಗೆ 88 ವರ್ಷ! ಪಾಪ, ಕಿಡ್ನಿ ವೈಪಲ್ಯದಿಂದ ಹಾಸಿಗೆ ಹಿಡಿದಿದ್ದಾಳೆ! ಇವ್ಳು, ಸುಮಾರು ನಾಲ್ಕು ದಶಕ, ಅಂದ್ರೆ ನಲವತ್ತು ವರ್ಷದಿಂದ ಹೆತ್ತಮ್ಮನಿಗೆ ಬೇಡವಾದ 30 ಮಕ್ಕಳಿಗೆ “ಅಮ್ಮಾ” ಆಗಿರುವ ಗ್ರೇಟ್ ಮದರ್! ಈಗ ನಾಲ್ಕು ಮಕ್ಕಳನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದಾಳೆ! ಉಳಿದ ಮಕ್ಕಳನ್ನು ಸ್ನೇಹಿತರಿಗೆ ದತ್ತು ನೀಡಿದ್ದಾಳೆ! ಅದರಲ್ಲಿ ಕೆಲವು ಮಕ್ಕಳು ತಮ್ಮ ತಮ್ಮ ಸಂಸಾರವನ್ನೀಗ ನಡೆಸುತ್ತಿದ್ದಾರಂತೆ!
ಅಂದಹಾಗೆ, ಈ ತಾಯಿ ಅನಾಥ ಮಕ್ಕಳನ್ನು ಸಾಕುವ ಕೆಲಸ ಶುರುಮಾಡಿದ್ದು ಯಾವಾಗ ಗೊತ್ತಾ? ಅದು, 1972ನೇ ಇಸವಿ ಆಗ ತ್ಯಾಜ ಸಂಗ್ರಹ ಮಾಡುತ್ತಿದ್ದಾಗ, ಕಸದ ತೊಟ್ಟಿಯಲ್ಲಿ ಒಂದು ಹೆಣ್ಣುಮಗು ಸಿಗುತ್ತೆ! ಆಗ ಅದನ್ನು ಮನೆಗೆ ಕರೆತರುತ್ತಾಳೆ! ಆದ್ರೆ ಅದು ದುರಾದೃಷ್ಟವಶಾತ್ ಸಾವನ್ನಪ್ಪುತ್ತದೆ! ಆಮೇಲೆ ತಿಪ್ಪೆಯಲ್ಲಿ ಸಿಕ್ಕ ಅದೆಷ್ಟೋ ಮಕ್ಕಳಿಗೆ ಆಶ್ರಯದಾತಳಾದಳು! ಒಂದು ವೇಳೆ ಈ ಮಹಾತಾಯಿಯ ಕೈಗೆ ಸಿಗದೇ ಇದ್ದಿದ್ದರೆ ಆ ಮಕ್ಕಳೆಲ್ಲಾ ಕಣ್ ತೆರೆಯುವ ಹೆಣವಾಗುತ್ತಿದ್ದವು! ಇವಳೆಂಥಾ ಕರುಣಾಮಹಿ ಗುರೂ! ಇವಳ ಗಂಡ ಲಿ ಜಿನ್ ಕೂಡ ಅನಾಥಮಕ್ಕಳ ರಕ್ಷಣೆಗಾಗಿ ಹೆಂಡತಿಯೊಡನೆ ಕೈ ಜೋಡಿಸಿದ್ದರು! ಆದ್ರೆ 17 ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ! ಗಂಡ ತೀರಿಕೊಂಡ ಬಳಿಕವೂ ಅದೆಷ್ಟೋ ಮಕ್ಕಳಿಗೆ ಆಸರೆಯಾದಳು ಲೌ ಜಿಯಾಯಿಂಗ್!
ಈಕೆಯ ಅತ್ಯಂತ ಚಿಕ್ಕ ಮಗು ಜಂಗ್ ಕ್ಲಿನ್! ಇವನಿಗೆ ಈಗ ಏಳು ವರ್ಷ! ಜಿಯಾಯಿಂಗ್ 87ನೇ ವಯಸ್ಸಿನಲ್ಲಿರುವಾಗ ತೊಟ್ಟಿಯಲ್ಲಿ ಸಿಕ್ಕಿದ ಮಗುವೇ ಈ ಜಂಗ್ ಕ್ಲಿನ್! ಇವತ್ತಿಗೂ ಈ ಆಸರೆ ನೀಡಿದ ತಾಯಿಯೊಡನೆಯೇ ಇದ್ದಾನೆ! ಪಾಪ, ಈ ಏಳು ವರ್ಷದ ಕಂದನಿಗೆ ಕೈ ತುತ್ತು ಹಾಕಿ, ಲಾಲಿ ಹಾಡಿ ಮಲಗಿಸಲು 88ರ ಜಿಯಾಯಿಂಗ್ಗೆ ಸಾಧ್ಯವಾಗುತ್ತಿಲ್ಲ! ಅವಳೀಗ ಹೃದಯದ ಸಮಸ್ಯೆ ಮತ್ತು ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದಾಳೆ! ನನಗೆ ವಯಸ್ಸಾಗಿದೆ ಅಂದಮಾತ್ರಕ್ಕೆ ಈ ಮಗುವನ್ನು ತಿಪ್ಪೆಯಲ್ಲೇ ಬಿಟ್ಟರೆ ಇದು ಸಾಯುತ್ತದೆ ಎಂದು ಈ ತಾಯಿಯ ಆತಂಕ! ಅದಕ್ಕಾಗಿಯೆ 80 ದಾಟಿದ ಮೇಲೂ ತಿಪ್ಪೆಯಲ್ಲಿ ಬಿದ್ದಿದ್ದ ಮಗುವನ್ನ ಸಾಕುತ್ತಿದ್ದಾಳಲ್ಲ! ಇವಳು ದೇವರಿಗಿಂತಲೂ ದೊಡ್ಡವಳಲ್ಲವೇ? ಬೀದಿ ಮಕ್ಕಳು, ಮನೆ ಬಳಿ ಭಿಕ್ಷೆ ಬೇಡುತ್ತಾ ಬಂದರೆ ಛೀ.. ಆಚೆ ಹೋಗು ಅಸಹ್ಯ ಪಡ್ತೀವಿ! ಆದ್ರೆ ಅದ್ಯಾರಿಗೋ ಹುಟ್ಟಿದ ಮಗು ಯಾವ ತಪ್ಪು ಮಾಡಿರುತ್ತೆ ಹೇಳಿ! ಪಾಪ, ಅಲ್ವಾ! ಇಂಥ ಮಕ್ಕಳಿಗೆ ಆಸರೆ ಆದ ಈ “ಅಮ್ಮಾ” ಗ್ರೇಟ್ ಅಲ್ವಾ! ಇವಳು ನಿಜಕ್ಕೂ ದೇವರ ಸ್ವರೂಪಿ! ಆದಷ್ಟು ಬೇಗ ಈಕೆ ಗುಣಮುಖಳಾಗಲಿ! ಇವಳು ಬದುಕಿ ಬಾಳಿದರೆ ಅನಾಥಮಕ್ಕಳು ತಾಯಿ ಇಲ್ಲದ ತಬ್ಬಲಿಗಳಾಗುವುದಿಲ್ಲ! ಅದೇನೇ ಇರಲಿ  ಲೌ ಜಿಯಾಯಿಂಗ್ ಸಾರ್ಥಕ ಬದುಕು ಸವೆಸಿದ್ದಾಳೆ!
ಈ ಸ್ಟೋರಿ ಓದಿದ್ಮೇಲೆ, ಒಂದಾದರೂ ಅನಾಥ ಮಗುವಿನ ಬದುಕು ರೂಪಿಸಬೇಕೆನಿಸುತಿದೆ! ನಿಮಗೂ ಹಾಗೇ ಅನಿಸುತಿದೆ ಅಂತಾನೂ ನನಗೆ ಗೊತ್ತು! ಈ ತಾಯಿಯನ್ನು ನೋಡಿಯಾದರೂ ಯಾರೂ ಮಕ್ಕಳನ್ನು ತೊಟ್ಟಿಗೆ ಹಾಕಬೇಡಿ ! ನಿಮ್ಮ ತಪ್ಪಿಗೆ ಆ ಮಗು ಏಕೆ ತಿಪ್ಪೆ ಹೆಣವಾಗಬೇಕು! ನಾವುಗಳೂ ಅಷ್ಟೆ ಅಂಥ ಮಕ್ಕಳಿಗೆ ಒಂದು ತುತ್ತಾದರೂ ನೀಡೋಣ! ಹುಟ್ಟು ಒಂದು ದಿನ ಸಾವು ಬಂದೇ ಬರುತ್ತದೆ ಒಂದಲ್ಲಾ ಒಂದು ದಿನ! ಅಷ್ಟರೊಳಗೆ ಒಂದು ಜೀವಕ್ಕಾದರೂ ಆಸರೆ ಆಗೋಣ!
 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಪಾಲಕ್ಕಾಡ್‌ನಲ್ಲಿ ಮದಗಜದ ರಂಪಾಟ..! ವಿಡಿಯೋ ವೈರಲ್

ಈ ಫೋನ್‌ ಬುಕಿಂಗ್ ಮಾಡಿದರೆ 10 ವರುಷಗಳ ಬಳಿಕ ಡ್ರೋನ್ ಮೂಲಕ ಫೋನ್ ಡೆಲಿವರಿ ಅಂತೆ.!

ಮಂಗಳನಲ್ಲಿಗೆ ಮೂರೇ ದಿನಕ್ಕೆ ಹೋಗ್ಬಹುದು

ಬೆಂಗಳೂರಲ್ಲಿ ಕನ್ನಡ ಮಾತನಾಡೋರು 34% ಮಾತ್ರ..! ಕನ್ನಡ ಮಾಯವಾಗ್ತಿದೆ…ರಾಜಧಾನಿಯಲ್ಲಿ ಕನ್ನಡ ನಶಿಸಿ ಹೋಗ್ತಿದೆ..!

ತಣ್ಣಗಿದ್ದ ಬೆಂಗಳೂರು ಯಾಕೆ ಹೀಗೆ ಉರೀತಿದೆ..?! ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ..!

1 COMMENT

LEAVE A REPLY

Please enter your comment!
Please enter your name here