ಇನ್ನು ಮುಂದೆ ಉಸಿರಾಡೋ ಗಾಳಿಗು ಕೊಡಬೇಕು ದುಡ್ಡು..!!

Date:

ಇನ್ನು ಮುಂದೆ ಉಸಿರಾಡೋ ಗಾಳಿಗು ಕೊಡಬೇಕು ದುಡ್ಡು..!!

ಇಂದಿನ ಆಧುನಿಕ‌ ಜೀವನ ಶೈಲಿಯಿಂದ ಮನುಷ್ಯನ ಆರೋಗ್ಯದ‌ ಮೇಲೆ ಹೇಗೆಲ್ಲ ಪರಿಣಾಮ ಉಂಟಾಗುತ್ತಿದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.. ಸಿಗುವ ಎಲ್ಲ ಆಹಾರ ಪಾದಾರ್ಥಗಳು ಕೆಮಿಕಲ್ಸ್ ನಿಂದ ಕೂಡಿವೆ.. ಸರಾಸರಿ ಮಾನವನ ಆಯಸ್ಸಿನಲ್ಲಿ ಇಳಿಮುಖವಾಗುತ್ತ ಬರುತ್ತಿದೆ.. ಕುಡಿಯುವ ನೀರು ಕಲುಷಿತವಾಗಿದ್ದು, ಶುದ್ದ ಕುಡಿಯುವ ನೀರು ಎಂಬ ಘಟಕಗಳು ಸ್ಥಾಪನೆಯಾಗಿವೆ.. ಇನ್ನೂ ಮುಂದೆ ವಿದೇಶಗಳಲ್ಲಿ ಡಬ್ಬದಲ್ಲಿ ಸಿಗುವಂತೆ, ಭಾರತದಲ್ಲು ಶುದ್ದ ಗಾಳಿಯನ್ನ ಹಣ ಪಡೆದು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ..

ಹೌದು, ಈಗಾಗ್ಲೇ ಭಾತರದ ಹೃದಯ ಭಾಗ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಶುದ್ದ ಗಾಳಿ ಇಲ್ಲದಂತಾಗಿದೆ.. ಹೀಗಾಗೆ  ಭಾರತದ ಮೂಲದ ಪ್ಯೂರ್ ಹಿಮಾಲಯನ್ ಏರ್ ಸಂಸ್ಥೆ 10 ಲೀಟರ್ ಶುದ್ದ ಗಾಳಿಯ ಬಾಟಲ್ ಗಳನ್ನ ಮಾರಟ ಮಾಡಲು ಮುಂದಾಗಿದೆ.. ಇದಕ್ಕೆ 550 ರೂಗಳನ್ನ ಫಿಕ್ಸ್ ಮಾಡಿ ಮಾರಾಟ ಮಾಡುತ್ತಿದೆ..

ಈಗಾಗ್ಲೇ ಆಸ್ಟ್ರೇಲಿಯಾ ಸೇರಿದಂತೆ ಕೆನಾಡದಲ್ಲಿ ಈ ರೀತಿ ಶುದ್ದ ಗಾಳಿಯನ್ನ ಮಾರಾಟ ಮಾಡಲಾಗುತ್ತಿದ್ದು, 1500 ರೂಗಳವರೆಗೆ ದರವನ್ನ ನಿಗದಿ ಮಾಡಲಾಗಿದೆ.. ಅಂದಹಾಗೆ ಪ್ರತಿಯೊಬ್ಬ ಮನುಷ್ಯನು ದಿನಕ್ಕೆ 8-10 ಲೀಟರ್ ನಷ್ಟು ಗಾಳಿಯನ್ನ ಸೇವಿಸುತ್ತಾನೆ.. ಅಂದಾಜು ಒಂದು ದಿನಕ್ಕೆ ಒಂದು ಬಾಟಲ್ ಬೇಕಾಗುತ್ತದೆ.. ಇನ್ನಾದರು ಎಚ್ಚೆತ್ತುಕೊಂಡು ಪ್ರಕೃತಿಯನ್ನ ಉಳಿಸುವ ಬೆಳೆಸುವ ಕಾರ್ಯ ನಡೆಯಬೇಕಿದೆ.. ಇಲ್ಲವಾದರೆ ಮುಂದಿನ‌ ದಿನಗಳಲ್ಲಿ ಈ ಕಂಪನಿಗಳ ಗಾಳಿಯನ್ನ ಅವಲಂಬಿಸಬೇಕಾದ ಅನಿವಾರ್ಯತೆ ನಿರ್ಮಾಣವಾದರೆ ಅಚ್ಚರಿ ಇಲ್ಲ..

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...