ಈಗಿನ ಕಾಲಘಟ್ಟದಲ್ಲಿ ಯಾರ ಮನೆಯಲ್ಲಿ ಫ್ರಿಡ್ಜ್ ಇಲ್ಲ ಹೇಳಿ. ಬೇಸಿಗೆಗಾಲದಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ಅಥವಾ ಆಹಾರ ಹಾಳುಗೆಡದಂತೆ ನೋಡಿಕೊಳ್ಳಲು ಫ್ರಿಡ್ಜ್ ಬಳಸಿಕೊಳ್ಳವುದು ಸಾಮಾನ್ಯ. ಆದರೆ ಇದರಿಂದ ಸಾವೂ ಸಂಭವಿಸಬಹುದು ಹುಷಾರ್…
ಹೌದು. ಇಂತಹದೊಂದು ದುರ್ಘಟನೆ ನಡೆದದ್ದು ಕೇರಳ ರಾಜ್ಯದ ತಿರುವನಂತಪುರಂನಲ್ಲಿ. ಮನೆಯಲ್ಲಿದ್ದ ಫ್ರಿಡ್ಜ್ ನ ಕಂಪ್ರೆಸರ್ ಸ್ಪೋಟಗೊಂಡು ಅದರಿಂದ ಹೊರಹೊಮ್ಮಿದ ವಿಷಕಾರಿ ಅನಿಲದಿಂದ ಕುಟುಂಬದ ಪತಿ, ಪತ್ನಿ ಹಾಗೂ ಒಂದು ಪುಟ್ಟ ಕಂದಮ್ಮ ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಇಂಜಿನೀಯರಿಂಗ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಿಲ್ ರಾಜ್ ಮತ್ತು ಆತನ ಪತ್ನಿ ಅರುಣಾ ದಂಪತಿ ಹಾಗೂ 4 ವರ್ಷದ ಪುಟ್ಟ ಮಗು ಅಲಿಷಾ ಮೃತಪಟ್ಟಿದ್ದು, ಬೆಳಿಗ್ಗೆ ಹಾಲು ಹಾಕಲು ಬಂದ ಯುವಕ ನೋಡಿದಾಗ ಈ ದುರಂತ ಬೆಳಕಿಗೆ ಬಂದಿದೆ.
ಕುಟುಂಬದವರು ರಾತ್ರಿ ನಿದ್ದೆಯಲ್ಲಿದ್ದಾಗ ಫ್ರಿಡ್ಜ್ ನ ಕಂಪ್ರಸರ್ ಸ್ಪೋಟಗೋಂಡು ಅದರಿಂದ ವಿಷ ಅನಿಲ ಸೋರಿಕೆಯಾಗಿದೆ. ಅದನ್ನು ಸೇವಿಸಿದ ಈ ಮೂವರು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
POPULAR STORIES :
ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!
ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???
ಕಣ್ಣು ಕಾಣದಿದ್ದರೇನು ಗೆಳತಿ ನಾನಿಲ್ಲವೇ ನಿನ್ನ ಕಣ್ಣಾಗಿ…!
ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.
ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ… ನಿಮಗಿಲ್ಲ ಸರ್ಕಾರವನ್ನು ಟೀಕಿಸುವ ಅಧಿಕಾರ.!