ಗಣಪತಿಯ ಪ್ರತೀಕ, ಉತ್ತಮ ಔಷಧ ಗರಿಕೆ

Date:

ಸಕಲ ವಿಘ್ನಗಳನ್ನು ನಿವಾರಿಸಿ ಇಷ್ಟಾರ್ಥಗಳನ್ನು ಕರುಣಿಸುವ ಪ್ರಥಮ ವಂದಿತನಾದ ಗಣಪನಿಗೆ ಬಹಳ ಪ್ರಿಯವಾದದ್ದು, ಗರಿಕೆ. ಗರಿಕೆಯನ್ನು ಗಣಪತಿಯ ಪ್ರತೀಕವಾಗಿ ಪೂಜಿಸಲ್ಪಡುತ್ತದೆ ಹಾಗೂ ಹಿಂದು ಸಾಂಪ್ರದಾಯಿಕ ಆಚರಣೆಗಳಲ್ಲಿ ಹೂಮ ಹವನಗಳಲ್ಲಿ ಗರಿಕೆಗೆ ಅಗ್ರ ಸ್ಥಾನ.
ಗರಿಕೆ ಹುಲ್ಲಿಗೂ ಗಣಪತಿಯ ಪೂಜೆಗೂ ಬಹಳ ಸಂಬದವಿದ್ದು, ಪುರಾಣಗಳಲ್ಲಿ ಇದರ ಉಲ್ಲೇಖವಿದೆ. ಒಂದು ಕಥೆಯ ಪ್ರಕಾರ ಅಗ್ನಿಯನ್ನು ಸೃಷ್ಟಿಸಬಲ್ಲ ಅಸುರನಾದ ಅನಲಾಸುರನು ಜಗತ್ತಿಗೆ ಉಪಟಳವನ್ನು ‹ನೀಡಲಾರಂಬಿಸುತ್ತಾನೆ. ಆಗ ಗಣಪತಿಯು ಲೋಕಕಲ್ಯಾಣಕ್ಕಾಗಿ ಅಸುರನನ್ನು ನುಂಗುತ್ತಾನೆ. ಅಗ್ನಿಯಗುಣವನ್ನು ಹೊಂದಿದ್ದ ಅಸುರನ ಸೇವನೆಯಿಂದಾಗಿ ಗಜಾನನಿಗೆ ಹೊಟ್ಟೆಯಲ್ಲಿ ವಿಪರೀತ ಉರಿ ಉಂಟಾಗಿ ಬಹಳವಾಗಿ ಬಳಲಿಹೋಗುತ್ತಾನೆ. ಆಗ ಮಹರ್ಷಿ ಕಾಶ್ಯಪರು ದೂರ್ವ (ಗರಿಕೆ) ಹುಲ್ಲನ್ನೂ ಸೇವಿಸಲು ನೀಡುತ್ತಾರೆ, ಕ್ಷಣ ಮಾತ್ರದಲ್ಲಿ ದೇಹಲ್ಲಿನ ವಿಪರೀತ ಉಷ್ಣವು ಕೊನೆಗೊಂಡು ಸೌಮ್ಯಗುಣವನ್ನು ಹೊಂದುತ್ತಾನೆ. ಅಂದಿನಿಂದ ಗಣಪತಿಯ ಆರಾಧನೆಯಲ್ಲಿ ಗರಿಕೆಗೆ ವಿಶಿಷ್ಟಸ್ಥಾನವಿದ್ದು ಗಣಪತಿಯ ಪ್ರತೀಕವಾಗಿದೆ. ಇದು ಕಥೆಯೇ ಆದರೂ ಅಧಿಕವಾದ ಉಶ್ಣಾಂತವಾವನ್ನು ತ್ವರಿತವಾಗಿ ನಿವಾರಿಸುವ ಗುಣವನ್ನು ಗರಿಕೆ ಹೊಂದಿದೆ ಎಂಬುದನ್ನು ನಿರೂಪಿಸುತ್ತದೆ.
ಹೀಗೆ ಆಚರಣೆಗಳಲ್ಲಿ ಮಹತ್ವ ಪಡೆದಿರುವ ಗರಿಕೆಯು, ಬಹಳಷ್ಟು ಔಷಧೀಯಗುಣಗಳನ್ನು ಹೊಂದಿದ್ದು, ಹಲವಾರು ರೋಗಗಳ ಚಿಕಿತ್ಸೆಗೆ ಉಪಯೋಗಕಾರಿಯಾಗಿದೆ. ತನ್ನ ಬಲಿಷ್ಟ ಬೇರುಗಳಿಂದ ಹಾಸುಹೊಕ್ಕಾಗಿ ಸುಲಭವಾಗಿ ಬೆಳೆಯುವ ಗರಿಕೆಯು ಸರ್ವಕಾಲದಲ್ಲೂ ಸಿಗುತ್ತದೆ.
ಆಯುರ್ವೇದ ಶಾಸ್ತ್ರದ ಪ್ರಕಾರ ಗರಿಕೆ ಅಥವಾ ದೂರ್ವ ಕಷಾಯ ಹಾಗು ಮಧುರ ರಸ ಹೊಂದಿದ್ದು, ಲಘು ಮತ್ತು ಶೀತ ಗುಣದಿಂದಾಗಿ ಕಫ ಹಾಗು ಪಿತ್ತದೋಷವನ್ನು ಪ್ರಮುಖವಾಗಿ ನಿವಾರಿಸಿ, ದೇಹದ ಉಷ್ಣಾಂಶವನ್ನು ಶಮನಗೊಳಿಸುತ್ತದೆ. ಗರಿಕೆ ಹುಲ್ಲಿನಿಂದ ತಯಾರಿಸಿದ ಔಷಧಿಯನ್ನು ಬಾಹ್ಯ ಹಾಗೂ ಆಂತರಿಕವಾಗಿ ಉಪಯೋಗಿಸಬಹುದು. ಹೊಟ್ಟೆಯವಿಕಾರಗಳಿಗೆ, ಮಲಬದ್ದತೆ, ರಕ್ತಹೀನತೆ, ಮೂತ್ರವಿಕಾರಗಳಿಗೆ, ಪೈಲ್ಸ್, ಬಿಳಿಸೆರಗು, ಪಿಸಿಓಡಿ, ಉರಿಮೂತ್ರ, ಮೈಉರಿ, ಅತಿಯಾದ ಬಾಯಾರಿಕೆ ಮುಂತಾದ ರೋಗಗಳಿಗೆ ಗರಿಕೆ ರಾಮಬಾಣ.

ಉಪಯೋಗಗಳು
1. ಗರಿಕೆಯಲ್ಲಿ ಹೇರಳವಾಗಿ ಕ್ಯಾಲ್ಶಿಯಂ, ಪ್ರೋಟೀನ್, ಪೊಟಾಶಿಯಂ ಅಂಶವಿದ್ದು, ಇದರ ಸೇವನೆಯಿಂದ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದು.
2. ಗರಿಕೆಯಲ್ಲಿ ರಕ್ತದಲ್ಲಿನ ಸಕ್ಕರೆಯಂಶವನ್ನು ಕಡಿಮೆಗೊಳಿಸುವ ಅಂಶವಿರುವುದು ಹಲವು ಸಂಶೋಧನೆಯಿಂದ ದೃಢಪಟ್ಟಿದ್ದು, ಡಯಾಬಿಟಿಸ್ ಅನ್ನು ನಿಯಂತ್ರಿಸುವುದರೊಂದಿಗೆ ಸಕ್ಕರೆ ಖಾಯಿಲೆಯಿಂದಾಗುವ ಆಡ್ಡಪರಿಣಾಮಗಳನ್ನು ತಡೆಗಟ್ಟಬಹುದು.
3. ಗರಿಕೆಯಲ್ಲಿ ಸಿಡಿಪಿಎಫ್ ಎಂಬ ಅಂಶವಿದ್ದು, ದೇಹದಲ್ಲಿನ ವ್ಯಾಧಿನಿರೋದಕ ಶಕ್ತಿಯನ್ನು ಹೆಚ್ಚಿಸಲು ಈ ಅಂಶ ಸಹಕಾರಿಯಾಗುತ್ತದೆ. ಅಲ್ಲದೆ, ಹಲವಾರು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು.
4. ರಕ್ತಪ್ರವೃತ್ತಿಯನ್ನು ನಿಯಂತ್ರಿಸುವ ಗುಣದಿಂದಾಗಿ ಮೂಗಿನಲ್ಲಿನ ರಕ್ತಸ್ರಾವ, ಸ್ತ್ರೀಯಲ್ಲಿನ ಅತಿ ರಜಸ್ತ್ರಾವ, ಬಾಯಲ್ಲಿ ಆಗುವ ರಕ್ತಸ್ರಾವಕ್ಕೆ ರಾಮಬಾಣ
5. ಉತ್ತಮ ಪೋಷಕಾಂಶ ಹಾಗೂ ಫ್ಲೇವನಾಯಿಡ್‍ಗಳಿಂದಾಗಿ ಬಾಯಿವಾಸನೆ ಹಾಗು ಬಾಯಿಹುಣ್ಣಿಗೆ ದಿವ್ಯೌಷಧಿ.
6. ಗರಿಕೆಯ ಕ್ರಮಬದ್ದ ಸೇವನೆಯಿಂದ ಮಾನಸಿಕ ಒತ್ತಡವನ್ನು ನಿಯಂತ್ರಿಸುವುದರೊಂದಿಗೆ ನರದೌರ್ಬಲ್ಯತೆಯನ್ನು ಗುಣಪಡಿಸಿ, ಮನಸ್ಸು ಹಾಗೂ ದೇಹಕ್ಕೆ ನವಚೈತನ್ಯವನ್ನು ನೀಡುತ್ತದೆ.
7. ನಿತ್ಯ ಗರಿಕೆಯ ಸೇವನೆಯಿಂದಾಗಿ ರಕ್ತಕಣಗಳ ಗುಣವರ್ದನೆಯೊಂದಿಗೆ, ಕೊಬ್ಬಿನಾಂಶವನ್ನು ಕಡಿಮೆಗೊಳಿಸಿ, ಹೃದಯದ ಸ್ವಾಸ್ಥ್ಯವನ್ನು ವೃದ್ದಿಸಿಕೊಳ್ಳಬಹುದು.
8. ಗರಿಕೆ ರಸದ ಸೇವನೆಯು ಎದೆಹಾಲಿನ ಗುಣ ಹಾಗೂ ಪ್ರಮಾಣವನ್ನು ವೃದ್ದಿಸುತ್ತದೆ.

ಹಲವು ರೋಗಗಳಲ್ಲಿ ಪ್ರಯೋಗ
1. 2 ಚಮಚ ಗರಿಕೆಯ ರಸ ಹಾಗು 1 ಕಪ್ ಹಾಲನ್ನು ಸೇರಿಸಿ 10 ನಿಮಿಷ ಕುದಿಸಿ ತಣ್ಣಗಾದ ನಂತರ ಸೇವಿಸುವುದರಿಂದ ಪೈಲ್ಸ್ ನಲ್ಲಾಗುವ ರಕ್ತಪ್ರವೃತ್ತಿ ಹಾಗು ಉರಿಯನ್ನು ನಿವಾರಿಸಬಹುದು
2. ಸ್ತ್ರೀಯರಲ್ಲಾಗುವ ಅತೀರಕ್ತಸ್ರಾವದಲ್ಲಿ 5ಚಮಚ ಗರಿಕೆಯರಸವನ್ನು ಜೇನುತುಪ್ಪದೊಂದಿಗೆ ದಿನದಲ್ಲಿ 3-4 ಬಾರಿ ಸೇವಿಸಿ
3. ಪಿಸಿಓಡಿ ಹಾಗೂ ಮೂತ್ರವಿಕಾರಗಳಲ್ಲಿ, ಗರಿಕೆಯ ರಸವನ್ನು ಮೊಸರಿನೊಂದಿಗೆ ಸೇವಿಸುವುದರಿಂದ ಮೂತ್ರ ಉರಿ, ಮುಟ್ಟಿನ ತೊಂದರೆ ನಿವಾರಣೆಯಾಗುತ್ತದೆ.
4. ಮೂಗಿನಲ್ಲಿನ ರಕ್ತಸ್ರಾವಕ್ಕೆ 2 ಚಮಚ ಗರಿಕೆಯ ರಸವನ್ನು ಮೂಗಿಗೆ ಹಾಕುವುದರಿಂದ ರಕ್ತಸ್ರಾವ ನಿಲ್ಲುತ್ತದೆ.
5. ಗರಿಕೆಹುಲ್ಲನ್ನು ಅರಿದು ತೆರೆದ ಗಾಯಗಳಿಗೆ ಲೇಪಿಸುವುದರಿಂದ ಗಾಯಗಳು ಬಹುಬೇಗ ಗುಣವಾಗುತ್ತದೆ.
6. 4ಭಾಗ ಗರಿಕೆ ರಸ, 2 ಭಾಗ ವೀಳ್ಯೆಲೆಯರಸ ಹಾಗೂ 1 ಭಾಗ ಕಾಳುಮೆಣಸಿನಿಂದ ಕಷಾಯವನ್ನು ತಯಾರಿಸಿ ನಿತ್ಯ ಸೇವಿಸುವುದರಿಂದ ರಕ್ತ ಶುದ್ದಿಯಾಗುತ್ತದೆ.
7. 3ಚಮಚ ಗರಿಕೆಯರಸ, 4-5 ಕಾಳುಮೆಣಸು, ಒಂದು ಚಿಟಿಕೆ ಜೀರಿಗೆಯಿಂದ ಕಷಾಯವನ್ನು ತಯಾರಿಸಿ ಎಳನೀರು ಅಥವಾ ಮಜ್ಜಿಗೆಯೊಂದಿಗೆ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಬೊಜ್ಜುರೋಗ ನಿವಾರಿಸಿಕೊಳ್ಳಬಹುದು.
8. 1 ಚಮಚ ಗರಿಕೆಯ ರಸವನ್ನು ಮಕ್ಕಳಿಗೆ ಕುಡಿಸುವುದರಿಂದ ಉತ್ತಮ ಪೋಷಕಾಂಶ ದೊರಕುತ್ತದೆ, ಮತ್ತು ಶೀತ, ನೆಗಡಿ ಮುಂತಾದ ರೋಗಗಳನ್ನು ತಡೆಗಟ್ಟಬಹುದು. ಹಾಗೂ ಹಲ್ಲಿನ ಬೆಳವಣಿಗೆ ಬಹಳ ಸಹಾಯಕಾರಿ.
9. ಗರಿಕೆಯಹುಲ್ಲನ್ನು ಅರಿಶಿಣ ಹಾಗೂ ಬೇವಿನಸೊಪ್ಪಿನೊಂದಿಗೆ ಅರೆದು ಹಚ್ಚಿಕೊಳ್ಳುವುದರಿಂದ ಚರ್ಮರೋಗಗಳಾದ ತುರಿಕೆ, ಕಜ್ಜಿ, ಸೋರಿಯಾಸಿಸ್ ಗುಣವಾಗುತ್ತದೆ.

  • ಡಾ. ಮಹೇಶ್ ಶರ್ಮಾ. ಎಂ
  • ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ. ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು 9964022654

POPULAR  STORIES :

ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?

ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!

ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.

18 ವರ್ಷ ತುಂಬುದ್ರೆ 37 ಸಾವಿರ ಆಫರ್…!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...