ಇದ್ದಕ್ಕಿದ್ದಂತೆ ಪುಟ್ಟ ಬಾಲಕ ಗಿರೀಶನಿಗೆ ತಲೆಸಿಡಿತ. ಕೂಡಲೇ ಜೈಪುರದ ಸಿರ್ಸಾದಲ್ಲಿರುವ ಆಸ್ಪತ್ರೆಗೆ ತೋರಿಸಲಾಯಿತು. ವೈದ್ಯರು ಅವನ ಎರಡೂ ಕಿಡ್ನಿ ವೈಫಲ್ಯವಾಗಿದೆ ಎಂದರು. ಕಿಡ್ನಿ ಕಸಿ ಮಾಡಲು ಹದಿಮೂರು ಲಕ್ಷ ಖರ್ಚಾಗುತ್ತೆ ಅಂದರು. ಮೂರು ಹೊತ್ತು ಊಟಕ್ಕೂ ಕಷ್ಟಪಡುವ ಕುಟುಂಬಕ್ಕೆ ಹದಿಮೂರು ಲಕ್ಷ ಕನಸಿನ ಮಾತಾಗಿತ್ತು. ಆದರೆ ಮಾಜಿ ಮಂತ್ರಿ ಗೋಪಾಲ್ ಕಂದಾ, ಆ ಕಂದನ ಚಿಕಿತ್ಸೆಗೆ ಸ್ಪಂಧಿಸಿದರು. ಅವನ ತಾಯಿಯೇ ತನ್ನದೊಂದು ಕಿಡ್ನಿ ಕೊಟ್ಟಳು. ಒಟ್ಟು ಇಪ್ಪತ್ತೊಂದು ಲಕ್ಷ ಖರ್ಚು ಮಾಡಿದರೂ ಗಿರೀಶ್ ಸುಧಾರಿಸಲಿಲ್ಲ. ಆತನ ಸಾವಿನ ದಿನಾಂಕ ನಿಗಧಿಯಾಗಿತ್ತು. ಹೀಗಿರುವಾಗ ಅದೊಂದು ದಿನ, `ನಾನು ಪೊಲೀಸ್ ಕಮೀಷನರ್ ಆಗುತ್ತೇನೆ, ಕಳ್ಳರನ್ನು ಶೂಟ್ ಮಾಡುತ್ತೇನೆ ಅಂದ. ಅವನ ಕಡೆಯ ಆಸೆಯನ್ನು ವಿತ್ ಯೂನಿಫಾರ್ಮ್ ಪೂರೈಸಿದ್ದು ಜೈಪುರದ ಪೊಲೀಸ್ ಕಮೀಷನರ್. ಈ ಮೂಲಕ ಇತಿಹಾಸ ಸೃಷ್ಟಿಸಿತು.
ಮರೆತ ಮಾನವೀಯತೆ:
ಈ ನಡುವೆ, ಕಳೆದ ಕೆಲವು ದಿನಗಳಿಂದ ಗಿರೀಶ್‌ನ ದೇಹಸ್ಥಿತಿ ಬಿಗಡಾಯಿಸಲು ಆರಂಭವಾಗಿತ್ತು. ಆಸ್ಪತ್ರೆಯಲ್ಲಿ ನಡೆಸುತ್ತಿದ್ದ ಡಯಾಲಿಸಿಸ್ ಕಿಟ್‌ಗೆ ಹಣ ಹೊಂದಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಯಿತು. ಮೇ 2ರಂದು ರಾತ್ರಿ ಹಣ ಕೊಡದೆ ಡಯಾಲಿಸಿಸ್ ಮಾಡಲಾಗದು ಎಂದು ಆಸ್ಪತ್ರೆ ಕೈಚೆಲ್ಲಿದಾಗ ಅನಿವಾರ್ಯವಾಗಿ ಆಂಬ್ಯುಲೆನ್ಸ್‌ನಲ್ಲಿ ಗಿರೀಶ್‌ನನ್ನು ಸಿರ್ಸಾದ ಮನೆಗೆ ಒಯ್ಯಲಾಯಿತು. ದಾರಿ ಮಧ್ಯೆ ಪಯಣ ಅಂತ್ಯವಾಯಿತು. ಕಡೆಗೂ ಗೆದ್ದಿದ್ದು ವಿಧಿ. ಏಕ್ ದಿನ್ ಕಾ ಕಮೀಷನರ್ ಇನ್ನಿಲ್ಲ. #RIP
POPULAR STORIES :
ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ’ ಅದ್ಯಾಕೆ ಮುಹೂರ್ತವಿಟ್ಟ..!?
ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!
ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!
ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ..!! ನೀರಿಗೆ ಮಾತ್ರವಲ್ಲ, ಪೆಟ್ರೋಲ್ಗೂ ಬರಗಾಲ..!
ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )