ಘೋಷಿತ ಆದಾಯದಲ್ಲಿ ಚಿನ್ನಾಭರಣೆ ತೆಗೆದುಕೊಂಡರೆ ಅದಕ್ಕೆ ಆದಾಯ ತೆರಿಗೆ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಪಡಿಸಿದೆ.
ಜನರ ಬಳಿ ಇರುವ ಚಿನ್ನಕ್ಕೆ ಯಾವುದೇ ರೀತಿಯ ತೆರಿಗೆ ಇಲ್ಲ ಎಂದು ಹೇಳಿದ್ದ ಕೇಂದ್ರ ಸರ್ಕಾರ ಇದೀಗ ಘೋಷಿತ ಆದಾಯದಲ್ಲಿ ಕೊಂಡ ಚಿನ್ನ, ಪಿತ್ರಾರ್ಜಿತ ಚಿನ್ನಾಭರಣ ಹೊರತು ಪಡಿಸಿ ಹೆಚ್ಚಿಗೆ ಚಿನ್ನಾಭರಣ ಹೊಂದಿರುವವರಿಗೆ ತೆರಿಗೆ ಹಾಕುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ವಿವಾಹಿತ ಮಹಿಳೆಯರು 500 ಗ್ರಾಂ, ಅವಿವಾಹಿತ ಮಹಿಳೆಯರು 250 ಗ್ರಾಂ ಹಾಗೂ ಪುರುಷರು 100 ಗ್ರಾಂ ಚಿನ್ನವನ್ನು ಮಾತ್ರ ಇಟ್ಟುಕೊಳ್ಳುವ ಅವಕಾಶ ನೀಡಿದೆ.
ಸಣ್ಣ ಉಳಿತಾಯದಿಂದ ಖರೀದಿಸಿದ ಚಿನ್ನಕ್ಕೆ ತೆರಿಗೆ ಇಲ್ಲ. ಚಿನ್ನ ಖರೀದಿಯ ಆದಾಯದ ಮೂಲ ನಿಗೂಢವಾಗಿದ್ದಲ್ಲಿ ಭಾರೀ ದಂಡ, ತೆರಿಗೆ ಸಾಧ್ಯತೆ. ಬ್ಯಾಂಕ್ ಲಾಕರ್ ಗಳ ಮೇಲೂ ಕೇಂದ್ರ ಸರ್ಕಾರದ ಕಣ್ಣು. ಕೃಷಿ ಆದಾಯದಿಂದ ಚಿನ್ನ ಖರೀದಿಗೆ ತೆರಿಗೆ ಇಲ್ಲ.
ಸೂಕ್ತ ದಾಖಲೆ ಜೊತೆ ಎಷ್ಟೇ ಚಿನ್ನ ಇದ್ದರೂ ತೊಂದರೆ ಇಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಕಪ್ಪುಹಣ ಬದಲಾಯಿಸಿಕೊಳ್ಳಲು ಚಿನ್ನಾಭರಣ ಖರೀದಿಸುತ್ತಿದ್ದಾರೆಂಬ ವರದಿ ಹಿನ್ನೆಲೆ ಇದಕ್ಕೆ ಸೂಕ್ತ ಕಡಿವಾಣ ಹಾಕಲು ಇದೀಗ ಎಲ್ಲರೂ ನಿರ್ದಿಷ್ಟ ಪ್ರಮಾಣದಲ್ಲಿ ಚಿನ್ನಾಭರಣವನ್ನು ಇಟ್ಟುಕೊಳ್ಳಬಹುದಾಗಿದೆ.
Like us on Facebook The New India Times
POPULAR STORIES :
ಜಿಯೋ ಸಿಮ್ ಗ್ರಾಹಕರಿಗೆ ಬಂಪರ್ ಆಫರ್.!
ಬಾಂಗ್ಲಾ ಕ್ರಿಕೆಟಿಗರು ಮಾಡಿದ ತಪ್ಪಿಗೆ ಸಿಕ್ತು ದೊಡ್ಡ ಶಿಕ್ಷೆ..!
ಒಬಿಸಿ ಪಟ್ಟಿಗೆ 15 ಹೊಸ ಜಾತಿ ಸೇರ್ಪಡೆ..!
ಇನ್ಮುಂದೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ : ಸುಪ್ರೀಕೋರ್ಟ್‍ನ ಮಹತ್ವದ ಆದೇಶ..!