ಇಲ್ಲಿದ್ದಾನೆ ನೋಡಿ ಬಂಗಾರದ ಬಾಬಾ..! ಸದಾ ಈತನ ಮೈಮೇಲಿರುತ್ತದೆ 3 ಕೋಟಿಯ ಬಂಗಾರ..!

Date:

ಬಾಬಾಗಳು ಎಂದರೆ ಕಾವಿ ಬಟ್ಟೆ ಧರಿಸಿ, ಮೈಯೆಲ್ಲಾ ವಿಭೂತಿ ಹಚ್ಚಿಕೊಂಡಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಅವರು ಯಾವುದೇ ಕಾರಣಕ್ಕೂ ಆಭರಣಗಳನ್ನು ಧರಿಸುವುದಿಲ್ಲ. ರುದ್ರಾಕ್ಷಿಯೇ ಅವರ ಆಭರಣ ಎಂಬುದು ಸರ್ವವಿಧಿತ. ಆದರೆ ಇಲ್ಲೊಬ್ಬರು ಬಾಬಾ ಇದ್ದಾರೆ ಅವರು ಹೆಸರು ಗಳಿಸಿರುವುದು ಅವರು ಧರಿಸುವ ಆಭರಣಗಳಿಂದ..! ಅಷ್ಟಕ್ಕೂ ಅವರು ಬರೋಬ್ಬರಿ 3 ಕೋಟಿ ಮೊತ್ತದ ಆಭರಣಗಳನ್ನು ಒಂದೇ ಬಾರಿಗೆ ಧರಿಸುತ್ತಾರಂತೆ..!
ಈ ಬಾರಿಯ ಅರ್ಧ ಕುಂಭ ಮೇಳದ ವಿಶೇಷ ಆಕರ್ಷಣೆ ಗೋಲ್ಡನ್ ಬಾಬಾ. ಮೈಮೇಲೆ ಕೆ.ಜಿಗಟ್ಟಲೆ ಆಭರಣ ಹಾಕಿಕೊಂಡಿದ್ದ ಬಾಬಾ ತಮ್ಮ ಅನುಯಾಯಿಗಳೊಂದಿಗೆ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಆ ಸಮಯದಲ್ಲಿ ಗೋಲ್ಡನ್ ಬಾಬಾ ಮೈ ಮೇಲೆ ಬರೋಬ್ಬರಿ 15.5 ಕೆ.ಜಿ. ಚಿನ್ನ ಇತ್ತು. ಅದರ ಅಂದಾಜು ಮೌಲ್ಯ ಸುಮಾರು 3 ಕೋಟಿ. ವಿಶೇಷವೆಂದರೆ ಅವರು ದಿನವೂ ಇಷ್ಟು ಭಾರದ ಚಿನ್ನ ಹೊತ್ತು ನಡೆದಾಡುತ್ತಾರೆ. ಆದ್ದರಿಂದಲೇ ಅವರಿಗೆ ಗೋಲ್ಡನ್ ಬಾಬಾ ಎಂಬ ಹೆಸರು ಬಂದಿದೆ.
ಮಿರಮಿರನೆ ಹೊಳೆಯುವ ಚಿನ್ನದ ಸರಗಳು, ಎಲ್ಲಾ ಬೆರಳುಗಳಿಗೂ ಉಂಗುರಗಳ, ಕೈಬಂದಿಯನ್ನು ಹಾಕಿ ಕಳೆದ ಶುಕ್ರವಾರ ಅರ್ಧ ಕುಂಭ ಮೇಳದ ಸ್ನಾನ ಘಟಕ್ಕೆ ಇಳಿದಿದ್ದ ಬಾಬಾರನ್ನು ನೋಡಲೆಂದು ಹತ್ತಾರು ಜನರು ಸ್ನಾನ ಘಟ್ಟದ ಬಳಿ ಜಮಾಯಿಸಿದ್ದರು. ವಿಶೇಷವೆಂದರೆ ಗೋಲ್ಡನ್ ಬಾಬಾ ಧರಿಸಿದ್ದ 27 ಲಕ್ಷ ಮೌಲ್ಯದ ವಜ್ರದ ಕೈ ಗಡಿಯಾರ ಸಹ ಎಲ್ಲರ ಗಮನ ಸೆಳೆಯಿತು.

ff
ನಾಗಾ ಸಾಧುಗಳು, ಜುನಾ ಅಕಾಡಾದ ಬಾಬಾಗಳು ಹೆಚ್ಚಾಗಿ ಕಾಣಿಸಿಕೊಳ್ಳದ ಅರ್ಧಕುಂಭದಲ್ಲಿ ಗೋಲ್ಡನ್ ಬಾಬಾರಂತಹ ವಿಭಿನ್ನ ವ್ಯಕ್ತಿತ್ವದ ಸಾಧುಗಳು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಬಾಬಾ ಅವರ ನಿಜನಾಮ ಸುಧೀರ್ ಕುಮಾರ್ ಮಕ್ಕಡ್, ಸನ್ಯಾಸ ಸ್ವೀಕರಿಸುವ ಮೊದಲು ದಿಲ್ಲಿಯಲ್ಲಿ ಜವಳಿ ಉದ್ಯಮ ನಡೆಸುತ್ತಿದ್ದರು. `ಉದ್ಯಮಿಯಾಗಿ ನಾನು ತಪ್ಪುಗಳನ್ನು ಮಾಡಿರುತ್ತೇನೆ. ಅದಕ್ಕಾಗಿ ಈ ಪುಣ್ಯ ಸ್ನಾನ. ಇನ್ನು ಉಳಿದ ಜೀವನವನ್ನು ಇತರರಿಗೆ ಸಹಾಯ ಮಾಡುತ್ತಾ ಬದುಕುತ್ತೇನೆ’ ಎಂದು ಅವರು ಹೇಳಿದ್ದಾರೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ಇವರು ದಿನನಿತ್ಯ 100 ಮಂದಿಗೆ ಅನ್ನ ನೀಡುವ ಮಹಾದಾನಿ..! ಹಸಿದವರ ಹಸಿವನ್ನು ನೀಗಿಸೋ ಅನ್ನದಾತ ಅಜರ್..!

ಈ ಕನ್ನಡತಿ ಆಟೋ ಓಡಿಸುತ್ತಲೇ ಐಎಎಸ್ ಗೆ ತಯಾರಿ ನಡೆಸುತ್ತಿದ್ದಾರೆ..!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...