ಮಯನ್ಮಾರ್ ನಲ್ಲಿ ಸುಮಾರು 25 ಅಡಿ ಎತ್ತರದಲ್ಲಿ ಒಂದು ಕಲ್ಲಿದೆ. ಆಶ್ಚರ್ಯವೆಂದರೆ ಗುರುತ್ವಾಕರ್ಷಣ ಬಲಕ್ಕೆ ಸೆಡ್ಡು ಹೊಡೆದು ಆಧಾರವಿಲ್ಲದೆ ನಿಂತಿದೆ.
ಇದು ಬರ್ಮಾದ ಬೌದ್ಧರ ಪವಿತ್ರ ಸ್ಥಳವಾಗಿದೆ. ಚಿನ್ನದಂತೆ ಕಾಣುವ ಈ ಕಲ್ಲಿಗೆ ಗೋಲ್ಡನ್ ರಾಕ್ ಅಂತ ಕರೆಯುತ್ತಾರೆ. ವರ್ಷಕ್ಕೆ ಮೂರು ಬಾರಿ ಇಲ್ಲಿಗೆ ಹೋದರೆ ಆಸ್ತಿ, ಹಣ , ಸಂಪತ್ತು ಬರಲಿದೆ ಎಂಬ ನಂಬಿಕೆ ಇದೆ.
ಕಲ್ಲನ್ನು ನೀವು ಮೊದಲ ಬಾರಿ ನೋಡುವಾಗ ಈ ಕಲ್ಲು ಯಾವಾಗ ಬೇಕಾದರೂ ಬಿದ್ದು ಬಿಡಬಹುದು ಎಂದು ನಿಮಗೆ ಅನಿಸಬಹುದು. ಆದರೆ ಇದು ಯಾವುದೋ ಕಾಲದಿಂದ ಅದೇ ಸ್ಥಾನದಲ್ಲಿ ಗಟ್ಟಿಯಾಗಿ ನಿಂತಿದೆ.