ಗೂಗಲ್ ಆರಂಭಿಸಿದೆ ಆನ್ ಲೈನ್ ಐಟಿ ಕೋರ್ಸ್..!

admin
3 Min Read

ಗೂಗಲ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ..! ಈ ದೈತ್ಯ ಸರ್ಚ್ ಇಂಜಿನ್ ಇಲ್ಲದೆ ಮಾಹಿತಿಯ ಹುಡುಕಾಟವೇ ಕಷ್ಟಸಾಧ್ಯವಾಗಿದೆ..! ಸರ್ಚ್ ಇಂಜಿನ್ ಎಂದಾಕ್ಷಣ ತಟ್ಟನೆ ನೆನಪಿಗೆ ಬರುವುದು ಇದೇ ಗೂಗಲ್..! ಇದನ್ನ ಬಿಟ್ಟರೆ ಬೇರೆ ಸರ್ಚ್ ಇಂಜಿನ್ ಗಳು ನೆನಪಾಗುವುದು ಸ್ವಲ್ಪ ತಡವಾಗಿಯೇ..! ಇಂಟರ್ ನೆಟ್ ಬಳಕೆದಾರರ ಮಾಹಿತಿ ಸ್ವರ್ಗವಾಗಿರೋ ಗೂಗಲ್ ಈಗ ಐಟಿ ಕೋರ್ಸ್ ಗಳನ್ನು ಶುರುಮಾಡುತ್ತಿದೆ..! ಈ ಮೂಲಕ ಬೆರಳ ತುದಿಯಲ್ಲೇ ಕಲಿಕೆಯನ್ನು ಸಾಧ್ಯವಾಗಿಸಲು ಹೊರಟಿದೆ..!

Contents
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಹೌದು ಸಾರ್, ಅತ್ಯಂತ ಜನಪ್ರೀಯ ಸರ್ಚ್ ಇಂಜಿನ್ ಗೂಗಲ್ ಇದೇ ಸೆಪ್ಟೆಂಬರ್ ರಂದು “ಯುಡಸಿಟಿ” ಎಂಬ ಆನ್ ಲೈನ್ ಎಜುಕೇಷನ್ ಕಂಪನಿ ಜೊತೆ ಸೇರಿ ಭಾರತದಲ್ಲಿ ಆನ್ ಲೈನ್ “ಐಟಿ” ಕೋರ್ಸ್ ಜಾರಿಗೊಳಿಸಿದೆ..! ಕೋರ್ಸ್ ಅವಧಿ 6ರಿಂದ 9 ತಿಂಗಳುಗಳು..! ಈ ಕೋರ್ಸ್ ಗೆ ತಿಂಗಳಿಗೆ 148 ಅಮೇರಿಕನ್ ಡಾಲರ್( ರೂ. 9800) ವೆಚ್ಚ ತಗಲುತ್ತದೆ..! ಈ ಹಣದಲ್ಲಿ ಪದವಿ ಮುಗಿದ ಮೇಲೆ ಕಂಪನಿ ಶೇಕಡ 50ರಷ್ಟನ್ನು ವಾಪಸ್ಸು ನೀಡುತ್ತದೆ..! ಅಂದಹಾಗೆ ಈ ಕೋರ್ಸ್ ಸಂಪೂರ್ಣವಾಗಿ ಆನ್ ಲೈನ್ ಮೂಲಕವೇ ನಡೆಯುತ್ತದೆ..! ಹಾಗೆಯೇ ಅಮೇರಿಕಾ ಮೂಲದ ಗೂಗಲ್ ಬೋಧಕರು ಪಾಠ ಮಾಡುತ್ತಾರೆ..!
ಭಾರತದಲ್ಲಿ 3.6 ಮಿಲಿಯನ್ ಆ್ಯಪ್ ಡೆವಲಪರ್ಸ್ ಗಳಿಗೆ ಗುಣಾತ್ಮಕ ಶಿಕ್ಷಣವನ್ನು (ಕ್ವಾಲಿಟಿ ಆಫ್ ಎಜುಕೆಷನ್) ನೀಡುವ ಉದ್ದೇಶದಿಂದ ಇದನ್ನು ಶುರುಮಾಡಲಾಗಿದೆ..! ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು “ಯುಡಸಿಟಿ” ಮತ್ತು “ಟಾಟ” ಟ್ರಸ್ಟ್ ಗಳು ಒಟ್ಟಾಗಿ 1000ರೂ ಸ್ಕಾಲರ್ ಶಿಪ್ ಅನ್ನು ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿವೆ..! ಇಷ್ಟು ದಿವಸ ಬೇಕೆಂದ ಮಾಹಿತಿಯನ್ನೆಲ್ಲಾ ನೀಡುತ್ತಾ ಬಂದು ಅತ್ಯಂತ ಜನಪ್ರೀಯವಾಗಿ ಬೆಳೆಯುತ್ತಿರುವ “ಗೂಗಲ್” ಇವತ್ತು ಆನ್ ಲೈನ್ ಎಜುಕೇಷನ್ ಆರಂಭಿಸಿದ್ದು ಶಿಕ್ಷಣ ಕ್ಷೇತ್ರದಲ್ಲಿನ ಹೊಸ ಮೈಲುಗಲ್ಲೆಂದೇ ಹೇಳ ಬಹುದೇನೋ..! ಶಿಕ್ಷಣ ನೀಡಿಕೆಯಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ಗೂಗಲ್ ಯಶಸ್ವಿಯಾಗಲಿ.. ಶಿಕ್ಷಣ ಸುಲಭವಾಗಿ ಕೈಗೆಟಕುವಂತಾಗಲಿ..!

  • ಶಶಿಧರ ಡಿ ಎಸ್

ಇವನು ಮಾರೋದು ನಿಂಬೆಹಣ್ಣು, ಮೆಣಸಿನಕಾಯಿ. ಆದರೆ…?!

ಜಗದಲ್ಲಿ ಎಂತೆಂಥಾ ಕೆಲಸಗಳು ಇವೆ ಗೊತ್ತಾ..?

ಮೂವತ್ತು ವರ್ಷದಿಂದ ಸಂಬಳ ಇಲ್ದೆ ಪಾಠ ಮಾಡ್ತ ಇರೋ ಶಿಕ್ಷಕರು ..!

ಇನ್ಮುಂದೆ ಫೇಸ್ ಬುಕ್ ನಲ್ಲಿ ಡಿಸ್ ಲೈಕ್ ಮಾಡಬಹುದು..!

ಜೀವನಾಧಾರವಾಗಿದ್ದ ಆಡುಗಳನ್ನು ಮಾರಿ ಶೌಚಾಲಯ ಕಟ್ಟಿಸಿ, ಜಾಗೃತಿ ಮೂಡಿಸಿದ ಶತಾಯುಷಿ

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

 

Share This Article
Leave a Comment