ಜನ್ಮದಿನವೇ ಕೋಹ್ಲಿಗೆ ನಾಯಕರಾಗಿ ತವರಲ್ಲಿ ಮೊದಲ ಟೆಸ್ಟ್..! ವಿರಾಟ್ ಕೋಹ್ಲಿಗೆ ಜನ್ಮದಿನದ ಶುಭಾಶಯಗಳು

0
69

ಅವರು ಅತಿ ಚಿಕ್ಕವಯಸ್ಸಿನಲ್ಲೇ ಕ್ರಿಕೆಟ್ ಲೋಕದ ಮಿನುಗುತಾರೆಯಾಗಿ ಕಂಗೊಳಿಸುತ್ತಿರುವ ಆಟಗಾರ..! ಭಾರತ ಕ್ರಿಕೆಟ್ ತಂಡದ ಭರವಸೆಯ ಬ್ಯಾಟ್ಸ್ ಮ್ಯಾನ್..! ಭಾರತ ಕ್ರಿಕೆಟ್ ತಂಡದಲ್ಲಿ ಖಾಯಂ ಸ್ಥಾನಗಿಟ್ಟಿಸಿಕೊಂಡು, ನೋಡುನೋಡುತ್ತಿದ್ದಂತೆ ತಂಡದ ನಾಯಕರೂ ಆದವರು..! ಅವರು ಬೇರೆ ಯಾರೂ ಅಲ್ಲ.. ಭಾರತ ಟೆಸ್ಟ್ ಕ್ರಿಕೆಟಿನ ಯುವನಾಯಕ ವಿರಾಟ್ ಕೋಹ್ಲಿ..! ಕ್ರಿಕೆಟ್ ಆಟದಲ್ಲಿ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸುವುದು ಅಷ್ಟು ಸುಲಭದ ಮಾತಲ್ಲ..! ದೊಡ್ಡ ಮೊತ್ತದ ಗುರಿ ಇರುವಾಗ ಸಹಜವಾಗಿ ಎಂಥಹಾ ಬ್ಯಾಟ್ಸ್ ಮ್ಯಾನ್ ಗಳೂ ಒತ್ತಡಕ್ಕೆ ಸಿಲುಕುತ್ತಾರೆ..! ಆರಂಭದಲ್ಲಿ ಬ್ಯಾಟ್ ಬೀಸಿ ರನ್ ಗಳಿಸುವುದಕ್ಕೂ, ಕಣ್ಣೆದುರು ದೊಡ್ಡ ಮೊತ್ತದ ಸ್ಕೋರ್ ಇರುವಾಗ ಅದನ್ನು ಬೆನ್ನಟ್ಟುವುದಕ್ಕೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಮೊದಲು ಬ್ಯಾಟ್ ಮಾಡಿ ಲೀಲಾಜಾಲವಾಗಿ ರನ್ ಗಳಿಸಬಹುದು..! ಆದರೆ ಎದುರಾಳಿ ತಂಡವೇ ನೀವಿಷ್ಟು ರನ್ ಬಾರಿಸಬೇಕೆಂದು ಟಾರ್ಗೆಟ್ ನೀಡಿದ ಸಂದರ್ಭದಲ್ಲಿ ಬ್ಯಾಟ್ ಬೀಸುವಾಗ ಒತ್ತಡ ಇದ್ದೇ ಇರುತ್ತೆ..! ಓವರ್ಗೆ ಆರಕ್ಕಿಂತಲೂ ಹೆಚ್ಚು ರನ್ ಗಳಿಸಬೇಕಿದ್ದರಂತೂ ಒತ್ತಡ ತುಸು ಜಾಸ್ತಿಯೇ ಇರುತ್ತೆ..! ವಿಶ್ವ ಕ್ರಿಕೆಟ್ ಕಂಡ ಘಟಾನುಘಟಿ ಬ್ಯಾಟ್ಸ್ ಮ್ಯಾನ್ ಗಳೂ ಕೂಡ ಇಂಥಾ ಒತ್ತಡವನ್ನು ಎದುರಿಸಲಾಗದೇ ಸೋಲಪ್ಪಿಕೊಂಡ ಉದಾಹರಣೆ ಕ್ರಿಕೆಟ್ ಇತಿಹಾಸದಲ್ಲಿ ಬಹಳಷ್ಟಿವೆ..!
ವಿಶ್ವ ಕ್ರಿಕೆಟಿನ ದಿಗ್ಗಜರಿಗೂ ಒಪ್ಪುವಂತಹ ಈ ಮಾತು ನಮ್ಮ ವಿರಾಟ್ ಕೋಹ್ಲಿ ವಿಚಾರದಲ್ಲಿ ಒಪ್ಪಲು ಸಾಧ್ಯ ಇಲ್ಲವೇ ಇಲ್ಲ..! ದೊಡ್ಡ ಸವಾಲನ್ನು ಎದೆಗುಂದದೆ ಮೆಟ್ಟಿನಿಂತು ತಂಡವನ್ನು ಗೆಲುವಿನ ದಡ ಸೇರಿಸಬಲ್ಲ ಅದ್ಭುತ ಬ್ಯಾಟ್ಸ್ ಮ್ಯಾನ್ ವಿರಾಟ್ ಕೋಹ್ಲಿ..!
2008ರಲ್ಲಿ ವಿಶ್ವಕಪ್ ಗೆದ್ದ 19ವರ್ಷ ವಯಸ್ಸಿನೊಳಗಿನ ಭಾರತ ಯುವ ಸೈನ್ಯದ ನಾಯಕರಾಗಿದ್ದವರು ಇದೇ ಕೋಹ್ಲಿ. ನಂತರದ ದಿನಗಳಲ್ಲಿ ಅವರು ಬೆಳೆದು ಬಂದಿರುವ ಹಾದಿ ಎಲ್ಲರಿಗೂ ಗೊತ್ತೇ ಇದೆ..!
ವಿರಾಟ್ ಸ್ನೇಹಿತರ ಪಾಲಿಗೆ, ಸಹ ಆಟಗಾರರ ಪಾಲಿಗೆ ಪ್ರೀತಿಯ `ಚಿಕ್ಕು’..! 23ನೇ ವಯಸ್ಸಿನಲ್ಲೇ ಐಸಿಸಿ ವರ್ಷದ ಕ್ರಿಕೆಟಿಗನಾಗಿ (2012) ಹೊರ ಹೊಮ್ಮಿದ್ದರು..! ಚಿಕ್ಕ ವಯಸ್ಸಿನಲ್ಲೇ ಸಾಧನೆಯ ಉತ್ತುಂಗವನ್ನು ಏರಿರುವ ವಿರಾಟ್ ವಿಶ್ವಶ್ರೇಷ್ಠ ಆಟಗಾರರ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ..!
ವಿರಾಟ್ ಕೋಹ್ಲಿ ಇವತ್ತು 27 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ..! ಇಂದೇ ಭಾರತ ಮತ್ತು ದ.ಆಫ್ರಿಕಾ ನಡುವೆ ಮೊಹಲಿಯಲ್ಲಿ ಪ್ರಥಮ ಟೆಸ್ಟ್ ಆರಂಭವಾಗಿದೆ..! ಟೆಸ್ಟ್ ತಂಡದ ಚುಕ್ಕಾಣಿ ಹಿಡಿದ ಬಳಿಕ ವಿರಾಟ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಆಡ್ತಾ ಇದ್ದಾರೆ..! ಭಾರತ ತಂಡಕ್ಕೂ ತವರಲ್ಲಿ ವಿರಾಟ್ ನಾಯಕತ್ವದಲ್ಲಿ ಮೊದಲ ಟೆಸ್ಟ್..! ಇದೊಂದು ಅವಿಸ್ಮರಣೀಯ ಕ್ಷಣವಾಗಿದೆ..! ಭಾರತ ಗೆಲ್ಲಲಿ.. ವಿರಾಟ್ ವಿರಾಜಿಸಲಿ..! ವಿರಾಟ್ ಇನ್ನೂ ಎತ್ತರಕ್ಕೆ ಬೆಳೆಯಲಿ…ವಿರಾಟ್ ನಿಮಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಅವಳು ಸುಶ್ರಾವ್ಯ, ಇವನು ಸುಶಾಂತ್..! ಅವರ ಪ್ರೀತಿ ಕುರುಡಲ್ಲ…! ಅವನು ನೂರು ಸಲ ಐ ಲವ್ ಯೂ ಅಂದ್ರೂ ಅವಳು ಏನೂ ಹೇಳಲಿಲ್ಲ..

ನಿಮಗೆ ಸ್ಟೇಜ್ ಫಿಯರ್ ಇದ್ಯಾ..? ಡೋಂಟ್ ವರಿ ಭಯದ ಮುಂದೆ ಜಯವಿದೆ..! ಈ ಸ್ಟೋರಿ ಓದಿ..!

ಬರಲಿದೆ `ಬಲೂನ್ ಇಂಟರ್ನೆಟ್..’! ಹೊಸ ಯೋಜನೆಯಲ್ಲಿ ಭಾರತ ಸರ್ಕಾರದ ಜೊತೆ ಕೈ ಜೋಡಿಸಿದ ಗೂಗಲ್..!

ದೇಶದ ಮೊದಲ `ಅಂಧರ ಸ್ನೇಹಿ’ ರೈಲ್ವೇ ನಿಲ್ದಾಣ..! ಮೈಸೂರು ರೈಲ್ವೇ ನಿಲ್ದಾಣದಲ್ಲೀಗ ಬ್ರೈಲ್ ಲಿಪಿಯಲ್ಲಿ ರೈಲ್ವೇ ವೇಳಾಪಟ್ಟಿ..!

ನಮ್ ಟೈಮು ಸರಿಇಲ್ಲ ಅಂತಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ…?! ಕನ್ನಡದ ಹುಡುಗರು ಮಾಡಿದ ಈ ಕಿರುಚಿತ್ರ ನೋಡಿ ಗೊತ್ತಾಗುತ್ತೆ..!

ಸ್ಮೋಕಿಂಗ್ ಈಸ್ ಇಂಜ್ಯೂರಿಯಸ್ ಟು ಹೆಲ್ತ್, ಹಾರ್ಟ್ ಅಂಡ್ ಫ್ಯಾಮಿಲಿ..! ಧೂಮಪಾನ ತ್ಯಜಿಸಿದ 20 ನಿಮಿಷದಿಂದಲೇ ಹಂತಹಂತವಾಗಿ ಮೊದಲಿನಂತೆಯೇ ಆಗ್ತೀರಿ..!

ಚೋಟಾ ಟೀಚರ್ ಬಂದ್ರು ದಾರಿ ಬಿಡಿ..! 11ರ ಪೋರ 125 ಗ್ರಾಮಕ್ಕೆ ಅಕ್ಷರದಾನ ಮಾಡುತ್ತಿದ್ದಾನೆ..!

 

`ವಾಸ್ತುಪ್ರಕಾರ’ ಮನೆಮುಂದೆ ಮರಗಳು ಇರಬಾರದಂತೆ..! ವಾಸ್ತುಪ್ರಕಾರ ಮರಗಳನ್ನು ಸಾಯಿಸುತ್ತಿರೊ ಇವರೆಂಥಾ ಅವಿವೇಕಿಗಳು..!

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

17ರ ಪೋರ ಈಗ `ನಾಸ’ ಉದ್ಯೋಗಿ..! ಕ್ಯಾವೆಲಿನ್ ಗೆ ಇನ್ನೂ 17ವರ್ಷ ಈಗಲೇ ವಿಮಾನ ಹಾರಿಸಬಲ್ಲ..!

 

LEAVE A REPLY

Please enter your comment!
Please enter your name here