ಸರ್ಕಾರಿ ಕೆಲಸ ಕೊಡಿಸೋದಾಗಿ ಹೇಳಿ ರಾಯಚೂರಿನ ಮಂಗಳವಾರಪೇಟೆ ಅಂಗನವಾಡಿ ಶಿಕ್ಷಕಿಯೊಬ್ಬಳು ಸುಮಾರು 40ಮಂದಿ ಮಹಿಳೆಯರನ್ನು ವಂಚಿಸಿರುವ ಆರೋಪ ಕೇಳಿಬಂದಿದೆ. ಅಂಗನವಾಡಿಯಲ್ಲಿ ಕೆಲಸ ಕೊಡಿಸ್ತಿನಿ ಅಂತ ಹೇಳಿ ನಕಲಿ ಆದೇಶ ಪ್ರತಿ ನೀಡಿ ಮಹಿಳೆಯರಿಗೆ ಪಂಗನಾಮ ಹಾಕಿದ್ದಾಳೆ.
ರಾಯಚೂರಿನ ಮಂಗಳವಾರಪೇಟೆ ನಿವಾಸಿ ಈರಮ್ಮ ಕೆಲ್ಸ ಕೊಡಿಸೋದಾಗಿ ಹೇಳಿ ಮೋಸ ಮಾಡಿದ ಅಂಗನವಾಡಿ ಶಿಕ್ಷಕಿ.
ಸರ್ಕಾರಿ ಉದ್ಯೋಗದ ಆದೇಶ ಪತ್ರವನ್ನೂ ಕೂಡ ನಕಲಿ ಮಾಡಿ ಯಾಮಾರಿಸಿದ್ದಾಳೆ.
ಈಗ ಹಣ ಕೇಳಿದ್ರೆ ಈರಮ್ಮ, ಸಿರವಾರ ಪೊಲೀಸ್ ಠಾಣೆಯ ಎಎಸ್‍ಐ ಬಿ.ಡಿ ಖಾದ್ರಿ ನನಗೆ ಮೋಸ ಮಾಡಿದ್ದಾನೆ. ಆತನಿಂದ ನನಗೆ ನ್ಯಾಯ ಕೊಡಿಸಿ ಅಂತ ಹೇಳ್ತಿದ್ದಾಳೆ.