ಈ ನಮ್ಮ ಕನ್ನಡದ ಆಟೋಡ್ರೈವರ್ "ಪ್ರಾಮಾಣಿಕ" ಶ್ರೀಮಂತ..! ಕನ್ನಡದ ಈ ಆಟೋಡ್ರೈವರ್ ಗೊಂದು ದೊಡ್ಡ ಸಲಾಂ..!

Date:

ಹಣ, ಹಣ ಹಣ ಅಂತ ಬಾಯಿ ಬಿಡೋ ಮಂದಿಯೇ ಜಾಸ್ತಿ..! ಒಳ್ಳೆಯ ರೀತಿಯಲ್ಲಿ ದುಡಿದು ಹಣ ಮಾಡಿದ್ರೆ ತಪ್ಪೇನೂ ಇಲ್ಲ..! ಕಷ್ಟಪಟ್ಟು ದುಡಿದವರಿಗೆ ಹಣ ಸಿಗಲೇ ಬೇಕು..! ಹಣ ಇಲ್ದೆ ಈ ಜಮಾನವಿಲ್ಲ..! ಆದ್ರೆ ಕೆಲವರಿದ್ದಾರೆ.. ಮೈ ಬಗ್ಗಿಸಿ ದುಡಿಯಲಿಕ್ಕೆ ಆಗಲ್ಲ..! ಬೇರೆಯವರ ದುಡ್ಡಿಗೆ ಬಾಯಿ ಬಾಯಿ ಬಿಡ್ತಾರೆ..! ಯಾರದ್ದಾದರೂ ದುಡ್ಡು ಸಿಕ್ರೆ ಯಾರಿಗೂ ಗೊತ್ತೇ ಆಗದಂತೆ ನಿಧಾನಕ್ಕೆ ದುಡ್ಡನ್ನು ಲಪಾಟಾಯಿಸಿ ಬಿಡ್ತಾರೆ..!
ಸ್ನೇಹಿತರೇ.., ಈ ದುಡ್ಡಿಗಿಂತ ಪ್ರಾಮಾಣಿಕತೆ ಇದೆಯಲ್ಲಾ ಅದು ದೊಡ್ಡ ಸಂಪತ್ತು..! ಹಣವನ್ನು ಯಾರ ಬೇಕಾದ್ರೂ ಗಳಿಸಬಹದು..! ಅದು ಒಳ್ಳೆಯ ಮಾರ್ಗದಲ್ಲಾಗಲೀ.. ಅಥವಾ ಕಳ್ಳದಾರಿಯಲಾಗಲೀ..! ಒಟ್ಟಿನಲ್ಲಿ ಹಣಗಳಿಸಬಹುದು..! ಆದ್ರೆ “ಪ್ರಾಮಾಣಿಕತೆ” ಅನ್ನೋದು ರಕ್ತದಲ್ಲೇ ಬರುವಂತಹದ್ದು..! ದುಡ್ಡು, ಆಸ್ತಿಯನ್ನು ಮಾಡಿ ಶ್ರೀಮಂತರಾಗುವುದೇ ಬೇರೆ..! ಹೃದಯ ಶ್ರೀಮಂತಿಕೆಯೇ ಬೇರೆ..! ಹೃದಯ ಶ್ರೀಮಂತಿಕೆ ಮತ್ತು ಪ್ರಾಮಾಣಿಕತೆಗಿಂತ ದೊಡ್ಡದಾದ ಆಸ್ತಿ ಬೇರೊಂದಿಲ್ಲ..! ಈ ವಿಚಾರದಲ್ಲಿ ಶ್ರೀಮಂತರಾಗಿರುವವರೂ ತುಂಬಾ ಕಡಿಮೆ “ಹೃದಯವಂತಿಕೆಯಲ್ಲಿ ಶ್ರೀಮಂತರು” ಎಂಬ ಪಟ್ಟಿಯನ್ನು ಯಾರಾದರೂ ಬಿಡುಗಡೆಗೊಳಿಸಿದರೆ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವವರೆಲ್ಲಾ ಬಡವರೇ ಆಗಿರ್ತಾರೆ..! ಹಣ ಇಲ್ಲದೇ ಅವರು ಬಡವರೆಂದು ಕರೆಸಿಕೊಳ್ಳಬಹದು..! ಆದ್ರೆ ಗುಣದಲ್ಲಿ ಅವರೆಂದೂ ಶ್ರೀಮಂತರು..! ಇವತ್ತು ಅಂಥಹ ಪ್ರಾಮಾಣಿಕ ವ್ಯಕ್ತಿಯೊಬ್ಬರನ್ನು ಪರಿಚಯಿಸ್ತಾ ಇದ್ದೀವಿ..!
ಈ ಪ್ರಾಮಾಣಿಕ ನಮ್ಮ ಕನ್ನಡದವರು..! ಹೆಸರು “ಅಮಿರಾಜ ನಾಜಿರಹಮ್ಮದ್ ಹುಣಸ್ಕಟ್ಟಿ”..! ಬಡ ಕುಟುಂಬಲ್ಲಿಯೇ ಬೆಳೆಯುತ್ತಾ ಬಂದಿರುವ ಇವರು ಬೆಳಗಾವಿಯಲ್ಲಿ ಆಟೋ ಇಟ್ಕೊಂಡು ಜೀವನ ತಳ್ತಾ ಇದ್ದಾರೆ..! ಬಡತನದಿಂದ ಬಂದವರಾದರೂ ಇವರ ಪ್ರಾಮಾಣಿಕತೆ ಇವರನ್ನು ಶ್ರೀಮಂತರಲ್ಲೇ ಶ್ರೀಮಂತರನ್ನಾಗಿಸಿದೆ..! ಹೆಂಡತಿ ಮತ್ತು ಐದು ಮಕ್ಕಳನ್ನು ಸಲಹುವ ಹೊಣೆ ಇದ್ದರೂ ಬೇರೆ ಅವರ ದುಡ್ಡಿಗೆ ಕೈ ಚಾಚಲ್ಲ..! ಇತ್ತೀಚೆಗೆ ಇವರ ಆಟೋದಲ್ಲಿ ಪ್ರಯಾಣಿಕರು “ಒಂದು ಲಕ್ಷ”ರೂಪಾಯಿಗಳನ್ನು ಬೀಳಿಸಿಕೊಂಡು ಹೋಗಿದ್ದರು..! ಆ ಹಣವನ್ನು ಸುಮ್ಮನೇ ಎತ್ತಿಟ್ಟು ಕೊಂಡಿದ್ದರೆ, ಅಮೀರ್ ರನ್ನು ಯಾರೂ ಕೇಳ್ತಾನೂ ಇರ್ಲಿಲ್ಲ..! ಯಾರಿಗೂ ಗೊತ್ತಾಗಾನೂ ಇರ್ಲಿಲ್ಲ..! ಆದ್ರೆ ಅಮೀರ್ ಆ ದುಡ್ಡನ್ನು ತಾನು ಬಳಸಿಕೊಳ್ಳುವುದಿಲ್ಲ..! ಆ ಹಣ ಸಿಕ್ಕ ತಕ್ಷಣವೇ “ಕಡೇ ಬಜಾರ್ ” ಪೊಲೀಸ್ ಠಾಣೆಗೆ ಹೋಗಿ ಕೊಟ್ಟಿದ್ದಾರೆ..! ಪೊಲೀಸ್ ಕಮಿಷನರ್ ಗೆ ಹಣವನ್ನು ನೀಡಿ.. ಇದನ್ನು ನನ್ನ ಆಟೋದಲ್ಲಿ ಯಾರೋ ಪ್ರಯಾಣಿಕರು ಬೀಳಿಸಿಕೊಂಡು ಹೋಗಿದ್ದಾರೆ..! ಅವರಿಗೆ ತಲುಪಿಸಿ ಅಂತ ಕೇಳಿಕೊಂಡಿದ್ದಾರೆ..! ಆ ಮೂಲಕ ಪ್ರಾಮಾಣಿಕತೆ ಮೆರೆದ ಇವರನ್ನು ಪೊಲೀಸ್ ಇಲಾಖೆ ಪ್ರಮಾಣಪತ್ರವನ್ನು ನೀಡಿ ಸನ್ಮಾನಿಸಿದೆ..!
ಅಮಿರ್ ಎಂಬ ಹೆಸರಿನ ಅರ್ಥದಂತೆಯೇ ಈ ಆಟೋ ಡ್ರೈವರ್ ಹೃದಯವಂತರು.., ಹಿ ಈಸ್ ರಿಚ್ ಇನ್ ಹಾರ್ಟ್..! ಈ ಕನ್ನಡದ ಪ್ರಾಮಾಣಿಕ ಆಟೋಡ್ರೈವರ್ ಎಲ್ಲರಿಗೂ ಮಾದರಿ..! ಬಡತನ ಎನ್ನುವುದು ಆರ್ಥಿಕವಾಗಿರಬಹುದು..ಆದರೆ ಪ್ರಾಮಾಣಿಕತೆಯಲ್ಲಿ ಬಡವರೆಂದೂ ಶ್ರೀಮಂತರೇ ಎಂಬುದನ್ನು ಅಮಿರ್ ಸಾರಿದ್ದಾರೆ. ಇವರಿಗೆ ಹೆಂಡತಿ ಮಕ್ಕಳ ಹೊಟ್ಟೆ ತುಂಬಿಸುವುದೂ ಕಷ್ಟ.. ಹೀಗಿದ್ದರೂ ಸಿಕ್ಕ ದುಡ್ಡನ್ನು ಕಳೆದುಕೊಂಡವರಿಗೆ ಒಪ್ಪಿಸಲೆಂದು ಪೊಲೀಸರಿಗೆ ಕೊಟ್ಟಿದ್ದಾರಲ್ಲಾ.. ಇವರು ನಿಜಕ್ಕೂ ಗ್ರೇಟ್..! ಈ ನಮ್ಮ ಕನ್ನಡದ ಆಟೋಡ್ರೈವರ್ ಗೊಂದು ದೊಡ್ಡ ಸಲಾಂ..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!

ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!

ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...