ಅತ್ತ ಸುಮ್ಮನೇ ಕೂರುವಂತೆಯೂ ಇಲ್ಲ. ಇತ್ತ ಕಡೆ ಕೆಲಸ ಮಾಡಲು ಒಂದು ಕಾಲೇ ಇಲ್ಲ. ಸುಮ್ಮನಿದ್ದರೆ ಇಡೀ ಮನೆಗೆ ಮನೆಯೇ ಉಪವಾಸ ಕೂರಬೇಕಾಗುತ್ತದೆ. ಆದ್ದರಿಂದ ಆ ರೈತ ಮಾಡಿದ ಐಡಿಯಾವನ್ನು ಕಂಡರೆ ಎಂಥಹ ಕಠೋರ ಮನಸ್ಸಿನ ಮನುಷ್ಯನನ್ನೂ ಬದಲಿಸಿಬಿಡುತ್ತದೆ. ಏಕೆಂದರೆ ಆ ರೈತ ತನ್ನ ಅರ್ಧ ಕಾಲಿಗೆ ಕಟ್ಟಿಗೆ ಕಟ್ಟಿಕೊಂಡು ನಡೆಯುತ್ತಿದ್ದ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ. ಕಾಲಿಲ್ಲದ ಆತನಿಗೆ ತನ್ನದೇ ಜಮೀನಿನನ್ನು ಸಂಪೂರ್ಣವಾಗಿ ನಿರ್ವಹಿಸುವ ಸಾಮರ್ಥ್ಯವಿಲ್ಲ. ಆದ್ದರಿಂದ ಬೇರೆಯವರ ಜಮೀನಿನಲ್ಲಿ ಕೂಲಿಗಾಗಿ ಕೆಲಸ ಮಾಡುತ್ತಿದ್ದ. ಅದರಿಂದ ಬರುವ ಹಣವೇ ಆತನ ಕುಟುಂಬಕ್ಕೆ ಆಧಾರ. ಇಷ್ಟಕ್ಕೂ ಇಂಥಹ ಓರ್ವ ರೈತನ ಜೀವನ ಇಂದು ಒಂದು ಫೋಟೋದಿಂದ ಬದಲಾಗಿದೆ. ಸಾಮಾಜಿಕ ಜಾಲತಾಣಗಳು ಮಾಡಿದ ಉಪಕಾರದಿಂದ ಆ ಬಡ ರೈತನಿಗೆ ಸಹಾಯವಾಗಿದೆ.
ಯೆಸ್.. ಉತ್ತರ ಪ್ರದೇಶದ ಬುಂಧೇಲಖಂಡದಿಂದ 60 ಕಿಲೋ ಮೀಟರ್ ದೂರದ ಬಬೇರೂ ಎಂಬುದೇ ಈ ರೈತನಿರುವ ಊರು. ಆಸಿಫ್ ಎಂಬ ವ್ಯಕ್ತಿಯೋರ್ವ ಈತ ಕೆಲಸ ಮಾಡುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ. ಈಗ ಆ ಫೋಟೋ ಒಬ್ಬರಿಂದ ಒಬ್ಬರಿಗೆ ತಲುಪಿ ಕೊನೆಗೆ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ರನ್ನು ಮುಟ್ಟಿದೆ. ಫೋಟೋವನ್ನು ಗಮನಿಸಿದ ಅಖಿಲೇಶ್ ಯಾದವ್ ರವರು ತಕ್ಷಣವೇ ಆ ರೈತನ ನೆರವಿಗೆ ಧಾವಿಸಿದ್ದಾರೆ. ಆತನಿಗೆ ಕೃತಕ ಕಾಲನ್ನು ಒದಗಿಸಿದ್ದಾರೆ. ಇದರಿಂದ ಆ ಬಡ ರೈತನ ಜೀವನ ಈಗ ಬದಲಾಗಿದೆ.
ಇದನ್ನು ಗಮನಿಸಿದರೆ ನಮ್ಮ ರೈತರು ಎಂತಹ ನಿಕೃಷ್ಟ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಅರಿವಾಗುತ್ತದೆ. ಇನ್ನೊಂದೆಡೆ ಆ ಬಡ ರೈತನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಅಖಿಲೇಶ್ ಯಾದವ್ ರ ಗಮನ ಸೆಳೆದ ಆಸೀಫ್ ರಂತಹವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಅಲ್ಲವೇ..?
ರಾಜಶೇಖರ ಜೆ
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com