No menu items!
13.9 C
Munich
Wednesday, April 29, 2026

ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!

Must read

ಸೋಮಾರಿ ಯುವಕರು ನಾಚಿಕೆ ಪಡ್ಬೇಕು..! ಅಲ್ಲಿ ಇಲ್ಲಿ ಅಲೆಯುತ್ತಾ.. ಕಂಡ್ ಕಂಡ್ ಹುಡುಗಿಯರನ್ನಾ ಚುಡಾಯಿಸ್ತಾ .. ಬಾಯಿಗೆ ಒಂದಿಷ್ಟು ಗಲೀಜು ಹಾಕಿಕೊಂಡು, ಬೆಳಿಗ್ಗೆ ಬೆಳಿಗ್ಗೇನೆ ಪರಮಾತ್ಮನನ್ನು ಹೊಟ್ಟೆಗೆ ಇಳಿಸಿಕೊಳ್ಳೋ ಪುಣ್ಯಾತ್ಮರಿಗಂತೂ ಈ ಅಜ್ಜಿ ಬಗ್ಗೆ ಯಾರಾದ್ರೂ ಹೇಳಿ ಸ್ವಾಮಿ..! ಈ ಅಜ್ಜಿ ಕತೆ ಕೇಳಿದ್ರೆ ಎಂಥಾ ಶುದ್ಧ ಸೋಮಾರಿಯೂ ಕೆಲಸ ಮಾಡ್ತಾನೆ..! ಈ ಅಜ್ಜಿ ಲೈಫ್ ಸ್ಟೋರಿ ಕೇಳಿನೂ ಸೋಮಾರಿಗಳಾಗಿದ್ರೆ.. ತಮ್ ದುಡುಮೆಯನ್ನು ತಾವು ಮಾಡಿಕೊಳ್ದೇ ಇದ್ರೆ ಅಂಥವರು ಬದುವುದೇ ದಂಡ…! ಯಾಕಪ್ಪಾ ಹೀಗೆ ಹೇಳ್ತಾ ಇದ್ದೀನಿ ಸಿಕ್ಕಾಪಟ್ಟೆ ಯೋಚ್ನೆ ಮಾಡಕ್ಕೆ ಹೋಗ್ಬೇಡಿ, ಈ “ಯಂಗ್ ಅಂಡ್ ಎನರ್ಜಿಟಿಕ್ ಅಜ್ಜಿ”ಯ ಸ್ಟೋರಿ ಓದಿದ್ರೆ ಅದು ನಿಮಗೇ ಗೊತ್ತಾಗುತ್ತೆ..!
ಅಂದಹಾಗೆ ಈ ರಿಯಲ್ ಸ್ಟೋರಿಯ ಕಥಾನಾಯಕಿ “ಕಮಲಾಬೆನ್”..! ಇವರು, ಮದುವೆಯಾಗಿ ತಿಂಗಳು ಕಳೆಯುವುದರೊಳಗೇ ಗಂಡ ತೀರಿಕೊಳ್ತಾರೆ..! ಮತ್ತೆ ತವರು ಮನೆಯನ್ನೇ ಆಶ್ರಯಿಸಬೇಕಾಗುತ್ತೆ..! ಆದ್ರೆ ಇವರಿಗೆ ಬೇರೆಯವರಿಗೆ ಹೊರೆಯಾಗಿ ಬದುಕಲು ಇಷ್ಟವಿರಲ್ಲ..! ತಾನೇ ತನ್ನಹೊಟ್ಟೆ ಹೊರೆಬೇಕೆಂದು ನಿರ್ಧರಿಸ್ತಾರೆ..! ಬ್ರಾಸ್ಲೇಟ್(ಕಡಗ) ಮಾರೋಕೆ ಶುರುಮಾಡ್ತಾರೆ..! ಮುಂಬೈಯಿನ ಲೋಕಲ್ ರೈಲಿನಲ್ಲಿ ಇವತ್ತಿಗೂ ಬ್ರಾಸ್ಲೇಟ್ ಮಾರ್ತಾ ಇದ್ದಾರೆ..! ಸುಮಾರು 60 ವರ್ಷದಿಂದಲೂ ಇದೇರೀತಿ ಸ್ವಾವಲಂಭಿಯಾಗಿ ದುಡಿಮೆ ಕಂಡು ಕೊಂಡಿರುವ ಇವರಿಗೆ ಈಗ 78 ವರ್ಷ..! ಈ ಇಳಿ ವಯಸ್ಸಿನಲ್ಲಿಯೂ ದುಡೀತಾ ಇದ್ದಾರೆ..! ಹಲ್ಲುಗಳೆಲ್ಲಾ ಉದುರಿ, ಕೈಯಲ್ಲಿ ಊರುಗೋಲು ಬಂದಿದ್ದರೂ ಚಿಕ್ಕ ವ್ಯಾಪಾರ ಮಾತ್ರ ಬಿಡ್ತಾ ಇಲ್ಲ..! ತನ್ನ ಖರ್ಚನ್ನು ತಾನೇ ನಿಭಾಯಿಸಿಕೊಳ್ತಾ ಇದ್ದಾರೆ..!
ಇವರ ಜೊತೆಗೆ ಇರಲು, ಕಾಳಜಿ, ಪ್ರೀತಿಯಿಂದ ಇವರನ್ನು ಈ ಇಳಿ ವಯಸ್ಸಲ್ಲಿ ನೋಡಿಕೊಳ್ಳಲು ಗಂಡನಿಲ್ಲ, ಮಕ್ಕಳಿಲ್ಲ..! ಬೇರೆಯವರಿಗೆ ಹೊರೆಯಾಗುವುದು ಇವರಿಗಿಷ್ಟವಿಲ್ಲ..!
ಅಜ್ಜಿ ನಿಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲವಾ..? ನೀವು ಅನಾಥರ ಅಂಥ ಕೇಳಿದ್ರೆ “ನನಗೆ ಒಬ್ಬ ಸೋದರನಿದ್ದಾನಷ್ಟೇ.., ಆದ್ರೆ ಇವತ್ತು ಯಾರಪ್ಪಾ ಬೇರೆಯವರ ಬಗ್ಗೆ ಕೇರ್ ತಗೋಳ್ತಾರೆ”…!? ಅಂತ ನಮ್ಮನ್ನೇ ಪ್ರಶ್ನೆ ಮಾಡ್ತಾರೆ..! ಆ ಅಜ್ಜಿ ಮಾತು, ಆಧುನಿಕ ಪ್ರಪಂಚದಲ್ಲಿ, ಯಾಂತ್ರಿಕ ಜೀವನದಲ್ಲಿ ಯಾರು ಯಾರಿಗೂ ಇಲ್ಲ, ಅನ್ನೋ ಸಂದೇಶವಿದೆ..!
ಅಜ್ಜಿಯನ್ನು ನೋಡಿ ಎಲ್ಲರೂನ ಅಯ್ಯೋ ಅಂತಾರಂತೆ..! ಅಯ್ಯೋ ಅನ್ನೋರ್ಯಾರು ಹತ್ತು ರೂಪಾಯಿ ಕೊಟ್ಟು ಬ್ರಾಸ್ಲೇಟ್ ತಗೋಳಲ್ಲ..! ದಯವಿಟ್ಟು ಈ ಅಜ್ಜಿ ಈ ವಯಸ್ಸಲ್ಲೂ ನಾವೇ ನಾಚುವಂತೆ ಸ್ವಾವಲಂಭಿಯಾಗಿ ಬದುಕ್ತಾ ಇದ್ದಾರೆ..! ಊಟ ಕೊಡಿ, ದುಡ್ಡು ಕೊಡಿ ಅಂಥ ಭಿಕ್ಷೆ ಬೇಡ್ತಾ ಇಲ್ಲ.. ಹತ್ತು ರೂಪಾಯಿ ಎಲ್ಲೋ ಕಳೀತೀರಿ.. ಮುಂಬೈಗೆ ಹೋದ್ರೆ.. ಅಥವಾ ಈಗ ನೀವು ಅಲ್ಲಿಯೇ ಇದ್ದರೆ , ದಯಮಾಡಿ ಅದೇ ಹತ್ತು ರೂಪಾಯಿಗೆ ಅಜ್ಜಿ ಮಾರೋ ಬ್ರಾಸ್ಲೇಟ್ ತಗೋಳಿ..!
ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!

ಭಾರತದ ಈ ಸಾಹಸಿ ಬೈಕಿನಲ್ಲೇ ಒಂದುವರೆ ವರ್ಷದಲ್ಲಿ 5 ಖಂಡ, 14 ದೇಶಗಳನ್ನು ಸುತ್ತಿದ..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

ಭಾರತದ ಇತಿಹಾಸ ಹಾಗೂ ಅಪೂರ್ವ ಸಾಧನೆಯನ್ನು ತೋರಿಸೋ ಅದ್ಭುತ ಸ್ಯಾಂಡ್ ಆರ್ಟ್.!

ಪಳಪಳನೆ ಹೊಳೆಯುವ ಕೂದಲಿಗಾಗಿ ಕೋಕ ಕೋಲಾ ಬಳಸಿ..!

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article