ಜಿ.ಎಸ್.ಟಿ- ಒಂದು ದೇಶ ಒಂದೇ ತೆರಿಗೆ

Date:

ಹಲವು ವಿವಾದಗಳು, ಹೋರಾಟಗಳ ನಡುವೆ,ಜಿ.ಎಸ್.ಟಿ ಬಿಲ್ ರಾಜ್ಯಸಭೆಯಲ್ಲಿ ಮಂಜೂರಾತಿಯೊಂದಿಗೆ,ಸಂವಿಧಾನದ 122 ನೇ ತಿದ್ದುಪಡಿಗೆ ಆಸ್ಪದ ನೀಡಿ,ತನ್ನ ಬಗೆಗಿನ ಒಂದು ಹೊಸ ಇತಿಹಾಸವನ್ನು ಸೃಷ್ಟಿಸಿದೆ.ಜಿ.ಎಸ್.ಟಿ ಯು ರಾಜ್ಯ ಸಭೆಯಲ್ಲಿ 203 ಮತ ಗಳಿಸುವುದರೊಂದಿಗೆ ಮಂಜೂರಾಗಿದೆ.ಇದನ್ನು ಲೋಕ ಸಭೆಗೆ ಹಸ್ತಾಂತರಿಸಲಾಗಿದ್ದು,ಒಂದು ಬಾರಿ ಇದು ಜ್ಯಾರಿಯಾದಲ್ಲಿ ಉಳಿದ ಹಲವು ತೆರಿಗೆಗಳನ್ನು ಕೇವಲ ಒಂದೆ ತೆರಿಗೆ ಯೊಂದಿಗೆ ಇದು ಬದಲಾಯಿಸುತ್ತದೆ.
ಜಿ.ಎಸ್.ಟಿ ಎಂದರೆ ಗೂಡ್ಸ್ ಆಂಡ್ ಸರ್ವಿಸಸ್ ಟ್ಯಾಕ್ಸ್ ಅಂದರೆ ಸರಕು ಮತ್ತು ಸೇವಾ ತೆರಿಗೆ ಎಂದರ್ಥ.ಯಾವುದೇ ದೇಶದ ಅರ್ಥ ವ್ಯವಸ್ತೆಯು ಮುಖ್ಯವಾಗಿ ವಸ್ತುಗಳ ಉತ್ಪನ್ನ ಹಾಗೂ ಹಲವು ತರಹದ ಸೇವೆಗಳ ಮೇಲೆ ಅವಲಂಬಿಸಿದೆ.ಸರಕಾರವು ಇವುಗಳ ಮೇಲೆ ತೆರಿಗೆ ಹೇರುವ ಮೂಲಕ ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಮಾಡುತ್ತದೆ.ಈಗಿರೋ ತೆರಿಗೆ ಪದ್ದತಿಯ ಪ್ರಕಾರ,ವಸ್ತುವಿನ ಉತ್ಪಾದನೆಯಿಂದ ತೊಡಗಿ ಅದು ಕೊಳ್ಳುವವನ ಕೈ ಸೇರೋ ತನಕ ಪ್ರತೀ ಹಂತದಲ್ಲೂ ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತಿತ್ತು,ಆದರೆ ಜಿ.ಎಸ್.ಟಿ ಯ ಪ್ರಕಾರ ಕೇವಲ ಮೌಲ್ಯ ವರ್ಧಿತ ತೆರಿಗೆಯನ್ನು ಮಾತ್ರವೇ ಗ್ರಾಹಕನು ಪಾವತಿಸಬೇಕಾಗುತ್ತದೆ.ಅಂದರೆ,ಎಲ್ಲಾ ತೆರಿಗೆಯನ್ನು ಸರ್ವತ್ರ ನಿರ್ಮೂಲನ ಗೊಳಿಸಿ,ಕೇಂದ್ರ ಮತ್ತು ರಾಜ್ಯಸರಕಾರ ಕೇವಲ ಎರಡು ಹಂತದಲ್ಲಿ ವಿಧಿಸುವ ತೆರಿಗೆಯೇ ಈ ಜಿ.ಎಸ್.ಟಿ.
ಇದರ ಮೂಲ ಉದ್ದೇಶವೇನೆಂದರೆ,ನಮಗೆ ತಿಳಿದಿರುವಂತೆ ನಮ್ಮ ಸಂವಿಧಾನವು ಕೇಂದ್ರ ಹಾಗೂ ರಾಜ್ಯ ಗಳೆರಡಕ್ಕೂ ತೆರಿಗೆ ವಿಧಿಸೋ ಹಕ್ಕು ನೀಡಿದೆ.ಇದೇ ಕಾರಣದಿಂದ ಹಲವು ರಾಜ್ಯಗಳಲ್ಲಿ ಹಲವು ಉತ್ಪನ್ನಗಳ ಹಾಗೂ ಸೇವೆಗಳ ಮೇಲೆ ತಮಗಿಷ್ಟ ಬಂದಂತೆ ತೆರಿಗೆ ವಿಧಿಸುತ್ತಾರೆ.ಇದೇ ಕಾರಣದಿಂದ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋದಂತೆ ನಾವು ಕಟ್ಟೋ ಸೋ ಕಾಲ್ಡ್ ಟ್ಯಾಕ್ಸ್ ದುಬಾರಿಯಾಗುತ್ತಾ ಹೋಗುತ್ತದೆ.ಅದಲ್ಲದೆ ಒಂದು ನಿರ್ದಿಷ್ಟ ತೆರಿಗೆ ವ್ಯವಸ್ಥೆ ಇಲ್ಲದ ಕಾರಣದಿಂದ ಸ್ವದೇಶೀ ಹಾಗೂ ವಿದೇಶೀ ಭಂಡವಾಳದಾರರು,ಯಾವುದೇ ರಾಜ್ಯದಲ್ಲಿ ತಮ್ಮ ಮೊತ್ತವನ್ನು ಹೂಡಲು ಹಿಂಜರಿಯುತ್ತಾರೆ.ನಮ್ಮ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈಗ ಚಾಲ್ತಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚಿನ ತೆರಿಗೆ ವಿಧಿಸಿದ್ದಾರೆ.ಇದು ವ್ಯವಹಾರಸ್ಥರನ್ನು ಅನೇಕ ರೀತಿಯ ತೊಂದರೆಗೀಡು ಮಾಡುತ್ತದೆ,ಯಾಕಂದ್ರೆ ಅವರು ಬೇರೆ ಬೇರೆ ರಾಜ್ಯಗಳಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡುವಾಗ,ಸಾಗಿಸುವಾಗ ಹಲವು ರಾಜ್ಯಗಳ ಹಲವು ತೆರಿಗೆಗಳಿಗೆ ಭಾದಿತರಾಗಬೇಕಾಗುತ್ತದೆ.ಇದರಿಂದಾಗಿ ಉತ್ಪನ್ನಗಳು ದುಬಾರಿ ಎನಿಸುತ್ತದೆ,ಒಂದು ಬಾರಿ ಜಿ.ಎಸ್.ಟಿ ಜ್ಯಾರಿ ಯಾಯ್ತು ಅಂದ್ರೆ ಮುಗೀತು ನೋಡಿ,ಈ ಎಲ್ಲಾ ಪರೋಕ್ಷ ತೆರಿಗೆಗಳು ಜಾಗ ಖಾಲಿ ಮಾಡುತ್ತವೆ.ಕೇವಲ ಜಿ.ಎಸ್.ಟಿ ಯೊಂದೇ ಉಳಿಯುತ್ತದೆ.ಇನ್ನು ಬಡಪಾಯಿ ನಮ್ಮಂತಹವರು ಖರೀದಿ ಮಾಡಲು ಹಿಂಜರಿಯಬೇಕಾಗಿಲ್ಲ.ಎಲ್ಲಾ ವಸ್ತುಗಳೂ ಅಗ್ಗವಾಗಿ ದೊರಕುವ ಕಾಲ ಹತ್ತಿರ ಬಂದಂತೆ ಅಂದುಕೊಳ್ಳಿ.ಯಾಕಂದ್ರೆ ಈಗ ಖರೀದಿಸೋ ಕೆಲವೊಂದು ವಸ್ತುಗಳಿಗೆ ನಾವು 30% ತೆರಿಗೆ ಪಾವತಿಸುತ್ತೇವೆ.ಆದ್ರೆ ಜಿ.ಎಸ್.ಟಿ ಯ ಪ್ರಕಾರ ಕೇವಲ 18% ಮಾತ್ರ ಪಾವತಿಸಬೇಕಾಗುತ್ತದಷ್ಟೇ.ಆದ್ರೆ ಇದರಲ್ಲಿ ಮುಖ್ಯವಾಗಿ ವಿವಾದಕ್ಕೆ ಕಾರಣವಾದ ಅಬಕಾರಿ,ಪೆಟ್ರೋಲಿಯಂ ಹಾಗೂ ತಂಬಾಕು ಉತ್ಪನ್ನಗಳನ್ನು ಜಿ.ಎಸ್.ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ.ಇವುಗಳಿಗೆ ತೆರಿಗೆ ವಿಧಿಸೋ ಅಧಿಕಾರವನ್ನು ಸಧ್ಯಕ್ಕೆ ರಾಜ್ಯದ ಬಳಿಯೇ ಇರಿಸಲಾಗಿದೆ
1954 ರಲ್ಲಿ ವಿಶ್ವದಲ್ಲೇ ಮೊಟ್ಟ ಮೊದಲು ಫ್ರಾನ್ಸ್ ನಲ್ಲಿ ಇದು ಜಾರಿಗೆ ಬಂದಿತ್ತು,ಆದರೆ ನಮ್ಮ ಭಾರತದಲ್ಲಿ ಇದು ಕಾರ್ಯರೂಪಕ್ಕೆ ಬರಲು ಇಷ್ಟು ವರುಷಗಳ ಶ್ರಮ ಬೇಕಾಯ್ತು ನೋಡಿ.ಹಲವು ಪಕ್ಷಗಳು ಇದನ್ನು ಅಂಗೀಕರಿಸದ ಕಾರಣವೇ ಇದರ ಮಂಜೂರಾತಿಗೆ ವಿಳಂಬವಾಯಿತು.ಪಕ್ಷದ 2/3 ಇದನ್ನು ಬೆಂಬಲಿಸಿ ಇದನ್ನು ರಾಜ್ಯಸಭೆಯಲ್ಲಿ ಮಂಜೂರುಗೊಳಿಸಲಾಗಿದೆಯಾದರೂ AIADMK ಮಾತ್ರ ಇದಕ್ಕೆ ತನ್ನ ಸಮ್ಮತಿ ಸೂಚಿಸದೆ ಹೊರಗೆ ನಡೆದಿದೆ.ಹೋದ್ರೆ ಹೋಗ್ಲಿ ಹೂ ಕೇರ್ ಅನ್ನೋ ಹಾಗೆ,ಜಿ.ಎಸ್.ಟಿ ಮಂಜೂರಾತಿಗೆ 203 ಮತ ಲಭಿಸಿದ್ದು,ಸಧ್ಯದಲ್ಲೇ ಅದೂ ಏಪ್ರಿಲ್ 2017 ರೊಳಗೆ ಜ್ಯಾರಿಗೆ ಬರುವುದು ‍ಗ್ಯಾರಂಟಿ ಎನ್ನಲಾಗುತ್ತಿದೆ.
ಜಿ.ಎಸ್.ಟಿ ಯ ಮೂಲ ತತ್ವ “ಒಂದು ದೇಶಕ್ಕೆ ಒಂದೇ ತೆರಿಗೆ”.ಅರ್ಥಾತ್ ನಮ್ಮ ದೇಶದ ಅರ್ಥ ವ್ಯವಸ್ಥೆಯನ್ನು ಬಲಿಷ್ಟಗೊಳಿಸಿ,ನಮ್ಮ ದೇಶವನ್ನು ಒಂದು ಅದ್ಭುತ ಹಾಗೂ ಏಕ ಸಾರ್ವಭೌಮತ್ವದ ಮಾರುಕಟ್ಟೆಯನ್ನಾಗಿ ಬದಲಾಯಿಸುವುದಾಗಿದೆ.

  • ಸ್ವರ್ಣಲತ ಭಟ್

POPULAR  STORIES :

ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!

ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು

ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!

ಹುಷಾರ್ ಇನ್ಮುಂದೆ ಸರಕಾರವನ್ನು ಟೀಕಿಸುವಂತಿಲ್ಲ..!

ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?

ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!

ನೇತಾಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ

ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!

ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ..!!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...