ಹಾಸ್ಯ ಸಾಮ್ರಾಟ ಶರಣ್ ತನ್ನ ಚಿತ್ರಗಳ ಮೂಲಕ ಕೋಟಿ ಕೋಟಿ ಕನ್ನಡ ಮನಸುಗಳನ್ನ ನಗುವಿನ ಟಾನಿಕ್ ನೀಡಿ ರಂಜಿಸಿದ್ಧಾರೆ.. ಸದ್ಯಕ್ಕೆ ಜನರನ್ನ ರಂಜಿಸೋದೆ ನನ್ನ ಕಾಯಕ ಅಂತಾ ತಿಳಿದಿರೋ ಈ ನಟ ಈಗ ಮತ್ತೆ ನಟರಾಜ್ ಸರ್ವೀಸ್ ಸಿನಿಮಾದ ಮೂಲಕ ಸುಕ್ಕಾ ಕಾಮಿಡಿಯ ಕಿಕ್ ನೀಡೋಕೆ ಬರ್ತಿದ್ದಾರೆ.. ಹೀಗಾಗೆ ಸಿನಿಮಾದ ಪ್ರಮೋಷನ್‍ನಲ್ಲೂ ಬ್ಯೂಸಿಯಾಗಿರೋ ನಿರ್ದೇಶಕರಾದ ಪವನ್ ಒಡೆಯರ್ ಹಾಗೆ ಶರಣ್ ಅವ್ರು ಈ ಸಿನಿಮಾ ಪ್ರಚಾರ ಕಾರ್ಯವನ್ನ ಸಹ ಅಷ್ಟೇ ಡಿಫರೆಂಟ್ ಆಗಿ ಮಾಡೋಕೆ ಮುಂದಾಗಿದ್ದಾರೆ… ಹೀಗಾಗೆ ನಟರಾಜ್ ಸರ್ವಿಸ್‍ಗಾಗಿ ಬೀದಿಗೆ ಬಂದಿದ್ಧಾರೆ ಶರಣ್.. ಅರ್ಥತ್ ಭಿಕ್ಷುಕನ ವೇಷದಲ್ಲಿ ರಸ್ತೆಯಲ್ಲಿ ಕೂತು ಸಿನಿಮಾದ ಹಾಡಿನ ಪ್ರಮೋಷನ್‍ಗೆ ಚಾಲನೆ ನೀಡಿದ್ದಾರೆ.. ಇನ್ನೂ ಶರಣ್ ಅವರನ್ನ ಗುರುತಿಸಲಾಗದ ಜನ ತಮ್ಮ ಬಳಿ ಇದ್ದ ಚಿಲ್ಲರೆಯನ್ನ ಶರಣ್ ಹಾಡಿಗೆ ಮನಸೋತು ನೀಡಿದ್ದಾರೆ.. ಈ ಮೂಲಕ 128 ರೂಪಾಯಿಗಳನ್ನ ಸಂಪಾದನೆ ಮಾಡಿದ್ಧಾರೆ.. ಅದ್ರ ವಿಡಿಯೋ ತುಣುಕು ಇಲ್ಲಿದೆ ನೋಡಿ.. ಸದ್ಯಕ್ಕೆ ಇದು ಟ್ರೇಲರ್ ಅಂತಾರಲ್ಲ ಹಾಗೆ, ಇನ್ನೂ ಪಿಕ್ಚರ್ ಹಾಗೆ ಬಾಕಿ ಉಳಿದಿದೆ..
Video :
https://youtu.be/HCRtET3JNR0
- ಅಶೋಕ್ ರಾಜ್
POPULAR STORIES :
ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!
181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!
ಒಂದೇ ಬಾಲಿಗೆ 286 ರನ್ ಬಾರಿಸಿದ ಕಥೆ..!
ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?