ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಅವರ ಪಾರ್ಥೀವ ಶರೀರದ ಅಂತಿಮ ದರ್ಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಡೆದರು. ಅವರ ನಿವಾಸಕ್ಕೆ ತೆರಳಿದಂತ ಸಿಎಂ ಬಸವರಾಜ ಬೊಮ್ಮಾಯಿಯವರು, ಗುರುಲಿಂಗಸ್ವಾಮಿ ಹೊಳಿಮಠ ಪಾರ್ಥೀವ ಶರೀರಕ್ಕೆ ಮಾಲಾರ್ಪಣೆ ಮಾಡಿ, ಅಂತಿಮ ನಮನ ಸಲ್ಲಿಸಿದರು. ಅಲ್ಲದೇ ಅವರ ಪತ್ನಿ, ಮಕ್ಕಳಿಗೆ ಸಿಎಂ ಬೊಮ್ಮಾಯಿ ಸಾಂತ್ವಾನ ಹೇಳಿದರು. ಈ ಬಳಿಕ ಮಾತನಾಡಿದ ಅವರು, ಗುರುಲಿಂಗಸ್ವಾಮಿ ಒಬ್ಬ ಯುವ ಸ್ನೇಹಿತ. ಅವರ ಅಕಾಲಿಕ ನಿಧನ ದಿಭ್ರಮೆಯನ್ನು ಮೂಡಿಸಿದೆ. ಅವನನ್ನು ಸುಮಾರು 20 ವರ್ಷಗಳಿಂದ ಬಲ್ಲೆ. ರಾಮದುರ್ಗದ ಹಳ್ಳಿಯೊಂದರಲ್ಲಿರುವಂತ ಇವರ ಕುಟುಂಬಸ್ಥರು ಗೌರವಾನ್ವಿತರು ಎಂದರು. ಪತ್ರಿಕಾ ವೃತ್ತಿಯನ್ನು ಆರಂಭಿಸಿದಂತ ಇವರು, ಮೊದಲಿನಿಂದಲು ಪರಿಚಿತರು. ಸಮಾಜಕ್ಕೆ ಒಳಿತಾಗುವಂತ ಕೆಲಸ ಮಾಡಿದಂತ ಪತ್ರಕರ್ತರಾಗಿದ್ದರು. ಅವರು ಒಬ್ಬರೇ ಬೆಳೆಯಲಿಲ್ಲ, ಅವರೊಟ್ಟಿಗೆ ಅನೇಕರನ್ನು ಬೆಳಿಸಿದರು. ಪ್ರತಿನಿತ್ಯ ಎರಡು ಮೂರು ಜನರಿಗೆ ಸಹಾಯ ಮಾಡುತ್ತಿದ್ದರು. ನಿನ್ನೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ನನ್ನ ಜೊತೆಗೆ ಇದ್ದರು. ಬೆಳಿಗ್ಗೆ ಎದ್ದು ನೋಡಿದ್ರೇ.. ಹೀಗೆ ಅವರ ಅಕಾಲಿಕ ನಿಧನ ಕೇಳಿ ಶಾಕ್ ಆಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ದುಖ ಬರಿಸೋ ಶಕ್ತಿಯನ್ನು ಕೊಡಲಿ ಎಂದು ಹೇಳಿದ್ದಾರೆ.
ಗುರುಲಿಂಗಸ್ವಾಮಿ ಹೊಳಿಮಠ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಿಎಂ
Date:






