ಸೊಂಪಾದ ಕೂದಲಿನ ಬೆಳವಣಿಗೆಯ ಹಿಂದಿರೋ ಚಮತ್ಕಾರಿ ವಸ್ತು ಯಾವುದೆಂದು ನಿಮಗೆ ಗೊತ್ತೆ.?

1
192

ಸುಂದರವಾದ ಕೂದಲನ್ನು ಇಷ್ಟ ಪಡದವರುಂಟೇ? ನೀಳವೇಣಿಯ ನೀಳ ಕೇಶರಾಶಿಯ ಸೊಬಗನ್ನು ನೋಡುತ್ತಾ ಪ್ರತೀ ಹೆಣ್ಣು ಮಕ್ಕಳೂ ಅಂತಹ ಕೇಶ ರಾಶಿ ತನ್ನದಾಗಬೇಕೆಂದು ಅದೆಷ್ಟು ವಿಧದಲ್ಲಿ ಸರ್ಕಸ್ ಮಾಡುತ್ತಾರೆ ಅಲ್ಲವೇ? ಇನ್ನು ಪುರುಷರು ತಾವೂ ಏನೂ ಕಮ್ಮಿ ಇಲ್ಲವೆಂಬಂತೆ ಅನೇಕ ತರಹದ ಜೆಲ್ ಬಳಸಿ ತಮ್ಮ ಕೂದಲ ಸೌಂದರ್ಯವನ್ನು ಕಾಪಾಡಲು ಹರಸಾಹಸ ಮಾಡುತ್ತಾರೆ. ಈ ಪ್ರಯತ್ನ ಎಷ್ಟರ ಮಟ್ಟಿಗೆ ಫಲಿಸಿದೆಯೋ ದೇವನೇ ಬಲ್ಲ, ಯಾಕಂದ್ರೆ ಈ ಆಧುನಿಕ ಯುಗದಲ್ಲಿ ನಮ್ಮ ಒತ್ತಡ ಭರಿತ ಜೀವನಶೈಲಿಯಿಂದ ಅನೇಕ ತರಹದ ಅನಾರೋಗ್ಯ ನಮ್ಮನ್ನು ಕಾಡುತ್ತಿದೆ, ಇವುಗಳಲ್ಲಿ ಕೂದಲಿನ ಸಮಸ್ಯೆಯೂ ಒಂದು. ಪ್ರತೀ ಹತ್ತು ಪುರುಷರಲ್ಲಿ ಒಬ್ಬ ಬಕ್ಕ ತಲೆಯವನನ್ನು ನಾವಿಂದು ಕಾಣುತ್ತೇವೆ, ಇದಕ್ಕೆ ಮಹಿಳೆಯರೂ ಹೊರತಾಗಿಲ್ಲ. ಈ ಸಮಸ್ಯೆಯ ಪರಿಹಾರಕ್ಕಾಗಿ ಹಲವರು ವೈದ್ಯರ ಬಳಿ ಶರಣು ಹೋದದ್ದೂ ಇದೆ, ಆದ್ರೆ ಪರಿಣಾಮ ಶೂನ್ಯ, ಜೇಬು ಖಾಲಿ.
ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಬೇಕೇನೋ ಎಂಬಂತೆ ಈ ನಿಮ್ಮ ಸಮಸ್ಯೆಯ ನಿವಾರಣೆಗೆ ನೆರವಾಗುವ ಒಂದು ಚಮತ್ಕಾರಿ ವಸ್ತುವಿನ ಬಗ್ಗೆ ಹೇಳಲೇ.. ನಿಮಗೆ ಸಮಯ ಹಾಗೂ ಮನಸ್ಸಿದ್ದರೆ ಪ್ರಯತ್ನ ಪಟ್ಟು ಪರಿಣಾಮವನ್ನು ನೀವೆ ಅನುಭವಿಸುವಂತಾಗುವಿರಿ.
ವಿಟಾಮಿನ್ ಸಿ ಯ ಭಂಡಾರವೆಂದೇ ಕರೆಯಲ್ಪಡುವ ಆಮ್ಲ,ಇಂಡಿಯನ್ ಗೂಸ್ಬರಿ ಅರ್ಥಾತ್ ನೆಲ್ಲಿಕಾಯಿಯು,ಕೂದಲಿನ ಎಲ್ಲಾ ತರಹದ ಸಮಸ್ಯೆಗೆ ಒಂದು ಅದ್ಭುತ ಔಷಧಿಯಾಗಿ ಪರಿಣಮಿಸುತ್ತದೆ. ಕೂದಲಿಗೆ ಮೃದುತ್ವವನ್ನು ನೀಡುವುದಲ್ಲದೆ, ನಮ್ಮ ನೆತ್ತಿಯ ಚರ್ಮವು ಒಣಗುವುದನ್ನು ತಡೆಗಟ್ಟಿ, ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ.ಇದರಲ್ಲಿರೋ ಫ಼ಾಟಿ ಆಸಿಡ್ ಅಂಶವು ಕೂದಲಿನ ಜೀವಕೋಶವನ್ನು ಸದೃಢವಾಗಿರಿಸಿ, ಕೂದಲಿನ ಬುಡಕ್ಕೆ ಪೋಷಣೆ ನೀಡಿ ನಿಮ್ಮ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.
ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ನೋಡಿ;
1.ನೆಲ್ಲಿಕಾಯಿಯನ್ನು ಅರೆದಿಟ್ಟು ಹಿಂದಿನ ದಿನ ರಾತ್ರಿಯಿಡಿ ಹಾಗೇ ಬಿಟ್ಟು ಮರುದಿನ ನಿಮ್ಮ ತಲೆಕೂದಲಿಗೆ ಹಚ್ಚಿ ಕೆಲವು ಘಂಟೆ ಬಳಿಕ ಕೂದಲನ್ನು ತೊಳೆಯಬೇಕು.
2.ನೆಲ್ಲಿಕಾಯಿಗಳನ್ನು ಸ್ವಚ್ಚಮಾಡಿ ಕೊಬ್ಬರಿ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕಪ್ಪಗಾಗುವವರೆಗೆ ಕುದಿಸಬೇಕು. ಈ ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ಪ್ರತೀ ಕೂದಲಿನ ಬುಡಕ್ಕೆ ಹಾಗೂ ಕೂದಲಿಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಬಿಳಿ ಕೂದಲು ಕ್ರಮೇಣ ಕಪ್ಪಗಾಗುತ್ತದೆ
3.ನೆಲ್ಲಿಕಾಯಿಯನ್ನು ಸ್ವಲ್ಪ ಸೀಗೆ ಪುಡಿ ಹಾಗೂ ಅಂಟುವಾಳ ಕಾಯಿಯೊಂದಿಗೆ ಕುದಿಸಿ ಹಿಂದಿನ ದಿನ ತೆಗೆದಿಟ್ಟು ಇದನ್ನು ಮರುದಿನ ನಿಮ್ಮತಲೆಕೂದಲನ್ನು ತೊಳೆಯಲು ಉಪ್ಯೋಗಿಸಬಹುದು.ಕೂದಲುದುರುವಿಕೆ ಇದರಿಂದ ಕಡಿಮೆಯಾಗುತ್ತದೆ
4.ನೆಲ್ಲಿಕಾಯಿಯನ್ನು ಪುಡಿಮಾಡಿ ಅದರ ರಸ ತೆಗೆದಿಟ್ಟು,ಎರಡು ಚಮಚ ರಸಕ್ಕೆ ಸಮಪ್ರಮಾಣದ ಲಿಂಬೆಹಣ್ಣಿನ ರಸವನ್ನು ಸೇರಿಸಿ ಕೂದಲಿನ ಬುಡಕ್ಕೆ ಹಚ್ಚಿ ಒಣಗಲು ಬಿಡಿ,ಬಳಿಕ ಬಿಸಿನೀರಿನಲ್ಲಿ ತಲೆ ತೊಳೆದಲ್ಲಿ ಕೂದಲ ಸಮಸ್ಯೆಗೆ ಉತ್ತಮ ಪರಿಹಾರ.ಕೂದಲು ಹೊಳೆಯುವುದಲ್ಲದೆ,ಕೂದಲು ಕಪ್ಪು ಬಣ್ಣ ಪಡೆದುಕೊಳ್ಳುತ್ತದೆ.
5.ನೆಲ್ಲಿಕಾಯಿಯನ್ನು ನೀರಿನಲ್ಲಿ ಕೆಲವು ಘಂಟೆಗಳ ಕಾಲ ನೆನೆಸಿಟ್ಟು ಅದರ ರಸವನ್ನು ಕಷಾಯ ಮಾಡಿ ಕುಡಿದರೆ,ಕೇವಲ ಆರೋಗ್ಯ ಪೂರ್ಣ ಕೂದಲು ಹೊಂದುವುದಷ್ಟೇ ಅಲ್ಲ ನಮ್ಮ ಸಂಪೂರ್ಣ ದೇಹದ ಆರೋಗ್ಯವನ್ನು ಇಮ್ಮಡಿಸಿ,ಕಣ್ಣು,ಮಿದುಳು,ಜೀರ್ಣಾಂಗ,ಹೃದಯ,ಚರ್ಮ ಹೀಗೆ ದೇಹದ ಸರ್ವಾಂಗಗಳಿಗೂ ಔಷಧಿಯಾಗಿ ಪರಿಣಮಿಸಬಲ್ಲ ಒಂದು ಅಮೃತ ಸಮಾನವಾದ ವಸ್ತು.
ಫ್ರೆಂಡ್ಸ್! ಇಂತಹ ವಸ್ತುವಿನಿಂದ ಇನ್ನೆಷ್ಟು ದಿನ ನೀವು ದೂರವಿರುತ್ತೀರಾ????

  • ಸ್ವರ್ಣಲತ ಭಟ್

Like us on Facebook  The New India Times

POPULAR  STORIES :

500, 1000ರೂ. ನೋಟುಗಳು ಬ್ಯಾನ್ ಆದ್ವೇ..? ನೋ ಟೆನ್ಷನ್..

ಬಂಕ್‍ಗಳಲ್ಲಿ 500, 1000ರೂ. ನೋಟು ಪಡೆಯದಿದ್ದರೆ ಕಠಿಣ ಕ್ರಮ: ಸಚಿವ ಧರ್ಮೇಂದ್ರ ಪ್ರಧಾನ್.

ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್‍ಗೆ ಐತಿಹಾಸಿಕ ಜಯ.

ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ

ತಮ್ಮ ಗುರುವಿಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು: ರವಿವರ್ಮ

ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!

12 ವರ್ಷದ ಅಪ್ರಾಪ್ತ ಬಾಲಕನಿಂದ 18 ವರ್ಷದ ಯುವತಿ ತಾಯಿಯಾದ್ಲು..!

1 COMMENT

LEAVE A REPLY

Please enter your comment!
Please enter your name here