ಸಂಗೀತ ಸಾಮ್ರಾಟ ಹಂಸಲೇಖ ಅವರು ಸ್ಯಾಂಡಲ್‍ವುಡ್‍ನಲ್ಲಿ ಮಿಂಚಿನಂತೆ ಓಡ್ತಾ ಇರೊ ಇಬ್ಬರು ಸ್ಟಾರ್ ನಟ ಸಾಧನೆ ಬಗ್ಗೆ ಸಖತ್ ಜೋಷ್ ಆಗಿ ಮಾತ್ನಾಡಿದ್ದಾರೆ. ದುಬೈನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಕಿಂಗ್ ಸ್ಟಾರ್ ಯಶ್‍ನ ಕುರಿತು ಮೆಲುಕು ಹಾಕಿದ್ದಾರೆ. ಉಪೇಂದ್ರ ನಿರ್ದೇಶನದ ಓಂ ಚಿತ್ರದ ಶೂಟಿಂಗ್ ವೇಳೆ ನಡೆದ ಕೆಲವು ಸ್ವಾರಸ್ಯಕರ ಘಟನೆಯನ್ನು ಹಂಸಲೇಖ ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ. ಓಂ ಚಿತ್ರದಲ್ಲಿರೊ ‘ಬ್ರಹ್ಮಾನಂದ ಓಂಕಾರ’ ಹಾಡನ್ನು ರಚಿಸಿದ್ದೆ ಹಂಸಲೇಖ ಅವರು. ಆದ್ರೆ ಈ ಹಾಡು ಬರೆಯೋಕು ಮೊದ್ಲು ಉಪ್ಪಿಗೆ ಟೈಟಲ್ ಸಾಂಗ್ ಇಷ್ಟ ಇರ್ಲಿಲ್ವಂತೆ. ಓಂ ಚಿತ್ರ ನಿರ್ಮಾಣದ ವೇಳೆ ಡಾ.ರಾಜ್ ಕುಮಾರ್ ಅವರ ಎದರಿಗೆ ಉಪ್ಪಿ ವೈಲ್ಡ್ ರೇಡಿಯಸ್ ಆಗಿ ಮಾತ್ನಾಡ್ತಾ ಇರ್ವಾಗ ಸ್ವತಃ ರಾಜ್ ಕುಮಾರ್ ಅವರೆ ಗಾಬರಿಯಾಗಿ ಹೋಗಿದ್ರು. ಉಪ್ಪಿಗೆ ಸಿನಿಮಾ ನಿರ್ಮಾಣದ ಸಂದರ್ಭದಲ್ಲಿದ್ದ ಕಾಯಕ ನಿಷ್ಠೆಗೆ ಹಂಸಲೇಖ ಸಲಾಂ ಹೇಳಿದ್ದಾರೆ. ಅಷ್ಟೆ ಅಲ್ಲ ಓಂ ಚಿತ್ರಕ್ಕೆ ಸಂಬಂಧಪಟ್ಟಂತೆ ಅದಕ್ಕೊಂದು ಟೈಟಲ್ ಸಾಂಗ್ ನಿರ್ಮಾಣ ಮಾಡ್ಬೇಕು ಎಂದು ಹಂಸಲೇಖ ಹೇಳಿದಾಗ ಆ ಹಾಡನ್ನು ಒಪ್ಪದಿದ್ದಾಗ ರಾಜ್‍ಕುಮಾರ್ ಹೇಳಿದ ಒಂದೇ ಮಾತಿಗೆ ಸೈಲಂಟಾಗಿ ಹೋದ್ರು ನಮ್ಮ ಉಪ್ಪಿ ಸರ್. ಅಭಿಮಾನಿಗಳಿಗೆ ಉಪ್ಪಿ ಅಂದ್ರೆ ಎಷ್ಟು ಪ್ರೀತಿಯೊ ಅಷ್ಟೆ ಪ್ರೀತಿಯನ್ನು ಉಪೇಂದ್ರ ಅಭಿಮಾನಿಗಳ ಮೇಲೆ ಇಟ್ಟಿದ್ದಾರೆ ಅನ್ನೊದಕ್ಕೆ ದಿ ಬೆಸ್ಟ್ ಎಕ್ಸಾಂಪಲ್ ಕೊಟ್ಟಿದ್ದಾರೆ ಹಂಸಲೇಖ. ಹಂಸಲೇಖ ಅವರ ಸಂಬಂಧಿಯ ಮಗನಿಗೆ ಆಕ್ಸಿಡೆಂಟ್ ನಡೆದಿತ್ತು. ಈ ಅಪಘಾತ ಎಷ್ಟರ ಮಟ್ಟಿಗೆ ಆಗಿತ್ತು ಅಂದ್ರೆ ಆತನ ಸ್ಕಲ್ ಹೊರಗಡೆ ಬಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದನಂತೆ. ಆತನ ಸ್ಥಿತಿ ಹೇಗಿದೆ ಅಂತ ಡಾಕ್ಟರ್‍ಗೆ ಫೋನ್ ಮಾಡಿದ ಹಂಸಲೇಖ ಅವರಿಗೆ ಬಾಲಕ ಬದುಕೋದೆ ಡೌಟು ಎಂದಿದ್ದಾರೆ. ಇದೇ ವೇಳೆ ಬಾಲಕ ಯಾರದ್ದೊ ಹೆಸರನ್ನ ಪದೆ ಪದೆ ಮೆಲುಕು ಹಾಕ್ತಾ ಇದಾನೆ ಅಂತ ಸಮೀಪಕ್ಕೆ ಹೋದಾಗ ಬಾಲಕ ಉಪೇಂದ್ರ ಹೆಸರು ಹೇಳ್ತಾ ಇದ್ನಂತೆ ನೋಡಿ..! ಸಾವಿನ ಮಧ್ಯೆಯೂ ತನ್ನ ನೆಚ್ಚಿನ ನಟನ ಹೆಸರನ್ನು ಗೊಣಕುತ್ತಿದ್ದಾನಲ್ಲಾ ಅಂತ ಹಂಸಲೇಖ ಅವರು ಉಪ್ಪಿಗೆ ನಡೆದ ವಿಷಯವೆಲ್ಲಾ ಹೇಳಿದ್ದಾರೆ. ತನ್ನ ಬ್ಯುಸಿ ಲೈಫಿನಲ್ಲೂ ಹಂಸಲೇಖ ಅವರ ಮಾತಿಗೆ ಮರು ಮಾತ್ನಾಡದೆ ಸೀದಾ ಆಸ್ಪತ್ರೆಗೆ ಧಾವಿಸಿ ಸುಮಾರು ಒಂದು ಗಂಟೆಗಳ ಕಾಲ ಬಾಲಕನ ಪಕ್ಕದಲ್ಲೆ ಕುಳಿತು ನೋಡಿಕೊಳ್ತಾ ಇದ್ರು ಉಪ್ಪಿ..! ಅಚ್ಚರಿಯ ಸಂಗತಿ ಅಂದ್ರೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆ ಬಾಲಕ ಈಗ ಜೀವಂತವಾಗಿದ್ದಾನೆ ಅಂತ ಸಂತಸ ವ್ಯಕ್ತ ಪಡಿಸಿದ್ದಾರೆ. ಇದು ಉಪೇಂದ್ರ ಅವರಲ್ಲಿರುವ ದೊಡ್ಡಗುಣ. ಇನ್ನು ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ ಹಂಸಲೇಖ ಅವರು ಸ್ಯಾಂಡಲ್‍ವುಡ್‍ನ ಯಂಗ್ ಬ್ಲಡ್ ಹೀರೋ, ಸೂಪರ್ ಹಿಟ್ ಸಿನಿಮಾಗಳ ಮೂಲಕ ಅತೀ ಎತ್ತರಕ್ಕೆ ಬೆಳೆದಿದ್ದಾನೆ. ಆತನಿಗೂ ಕೂಡ ನಾನು ಕೆಲವು ಕಿವಿ ಮಾತುಗಳನ್ನು ಹೇಳಿದ್ದೇನೆ. ಆತನ ಸಿನಿಮಾಗೂ ಕೂಡ ಹಾಡು ಮಾಡಿಕೊಟ್ಟಿದ್ದೇನೆ. ಆತನ ಯಶಸ್ಸಿನ ಪಯಣ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದ್ದಾರೆ. ನನ್ನ ಯಶಸ್ಸಿನ ಹಿಂದಿನ ಪರಿಶ್ರಮ ನನ್ನದೊಂದೆ ಮಾತ್ರವಲ್ಲ, ನನಗೆ ಅವಕಾಶ ನೀಡಿದ ಎಲ್ಲಾ ಡೈರೆಕ್ಟರ್ಸ್‍ಗಳದ್ದು, ಎಲ್ಲಾ ಪ್ರೊಡ್ಯೂಸರ್ಸ್, ಆಕ್ಟರ್ಸ್‍ಗಳೆಲ್ಲರೂ ಕಾರಣ. ಅದರಲ್ಲೂ ನನ್ನ ಫಸ್ಟ್ ಅಂಡ್ ಬೆಸ್ಟ್ ಪ್ರೊಡ್ಯೂಸರ್ ಅಂಡ್ ಡೈರೆಕ್ಟರ್ ರವಿಚಂದ್ರನ್ ಅವರದ್ದು. ಡಾ. ರಾಜ್‍ಕುಮಾರ್ ಹೊರತು ಪಡಿಸಿ ನನ್ನ ನೆಚ್ಚಿನ ಹೀರೋ ರವಿಚಂದ್ರನ್ ಅವರೆ ಕಾರಣ. ನನ್ನ ಈ ಮಟ್ಟಿನ ಬೆಳವಣಿಗೆ ಮೂಲ ಕಾರಣಕರ್ತರೆ ರವಿಚಂದ್ರನ್. ನನ್ನ ಮೂಲಕ ಅದೆಷ್ಟೊ ಹಾಡುಗಳು ಮೂಡಿ ಬಂದಿದೆ ಅಂದ್ರೆ ಅದಕ್ಕೆ ಅವರು ನೀಡಿದ ಸಹಕಾರ ಎಂದು ಹೇಳಿದ್ರು ಹಂಸಲೇಖ.
https://youtu.be/r9RZvM5KAbU?t=1m20s
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story
ಜನವರಿಯಿಂದ ಜಿಯೋ ಫ್ರೀ ಇಂಟರ್‍ನೆಟ್ ಕ್ಯಾನ್ಸಲ್..?!!
ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ
ಉತ್ತರ ಕೊರಿಯಾದಲ್ಲಿ ಕ್ರಿಸ್ಮಸ್ ಆಚರಿಸುವಂತಿಲ್ಲ..! ಅದರ ಬದಲು ಏನು ಮಾಡ್ಬೇಕು ಗೊತ್ತಾ..?
ಶಮಿ ಪತ್ನಿಯ ಡ್ರೆಸ್ ಬಗ್ಗೆ ಟೀಕೆ, ಟೀಕಾಕಾರರಿಗೆ ನಾಚಿಕೆಯಾಗಬೇಕು : ಮಹಮ್ಮದ್ ಕೈಫ್
ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!