Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…!

Date:

Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…!

ಜೇನುತುಪ್ಪ ಔಷಧಿ ಗುಣದೊಂದಿಗೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಅಂಶವನ್ನು ಹೊಂದಿದೆ. ತಜ್ಞರು ಹೇಳುವಂತೆ ಪ್ರತಿನಿತ್ಯ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ. ದೀರ್ಘಕಾಲ ಸಕ್ಕರೆ ಬದಲಾಗಿ ಜೇನುತುಪ್ಪ ಸೇವಿಸುವುದು ಕೂಡ ಉತ್ತಮ ಮಾರ್ಗವಾಗಿದೆ.
ಇನ್ನು ಜೇನುತುಪ್ಪದಲ್ಲಿ ನೈಸರ್ಗಿಕವಾದ ಸಕ್ಕರೆಯ ಅಂಶವಿರುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಜೊತೆಗೆ ವಿಟಮಿನ್ ಬಿ ಹಾಗೂ ಮಿನರಲ್ಸ್ ಗಳು, ಕ್ಯಾಲ್ಸಿಯಂ ಹಾಗೂ ಹೇರಳವಾಗಿವುದರಿಂದ ನಮ್ಮ ದೇಹದ ಮೇಲೆ ಈ ಜೇನುತುಪ್ಪವು ಧನಾತ್ಮಕವಾದ ಪರಿಣಾಮವನ್ನು ಬೀರುತ್ತದೆ.
ಉಪಯೋಗಗಳು

• ಜೇನುತುಪ್ಪ ನೂರಾರು ಉಪಯೋಗಗಳನ್ನು ಒಳಗೊಂಡಿದೆ.
• ಕೂದಲಿನ ಬೆಳವಣಿಗೆಗೆ ಪೂರಕವಾಗಿದೆ ಹಾಗೂ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
• ಜೊತೆಗೆ ನಮ್ಮ ಚರ್ಮವನ್ನು ಸಂರಕ್ಷಿಸುವುದರ ಜೊತೆಗೆ ಚರ್ಮಕ್ಕೆ ಕಾಂತಿಯನ್ನು ಒದಗಿಸುತ್ತದೆ.
• ಇನ್ನೂ ಕೆಲವರು ಬಾಯಿಹುಣ್ಣಿನಿಂದ ನರಳುತ್ತಿರುತ್ತಾರೆ. ಅಂತವರಿಗೆ ಈ ಜೇನುತುಪ್ಪವು ರಾಮಬಾಣವಾಗಿ ಸಹಕರಿಸುತ್ತದೆ.
• ಜೇನುತುಪ್ಪದ ಒಂದು ಮುಖ್ಯ ಉಪಯೋಗ ಏನೆಂದರೆ ಈ ಜೇನಿಗೆ ಗಾಯವನ್ನು ಗುಣಪಡಿಸುವ ಸಾಮರ್ಥ್ಯವಿದೆ.ಹಾಗಾಗಿ ಬಾಯಿಹುಣ್ಣು ಆದ ಸಂದರ್ಭದಲ್ಲಿ ನಾಲ್ಕು ಚಮಚದಷ್ಟು ಜೇನು ತುಪ್ಪವನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ. ಅಥವಾ ನೆಲ್ಲಿಕಾಯಿ ಪುಡಿಯನ್ನು ಈ ಜೇನುತುಪ್ಪ ದೊಂದಿಗೆ ಸೇರಿಸಿ ಲೇಪದಂತೆ ಹಚ್ಚಿಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ.
• ಜೊತೆಗೆ ಬೊಜ್ಜು ಕರಗಿಸಲು ಕೂಡ ಸಹಾಯವಾಗುತ್ತದೆ.ತಣ್ಣನೆಯ ನೀರಿಗೆ ಒಂದೆರಡು ಚಮಚ ಜೇನು ಹನಿ ಬೆರೆಸಿ ಪ್ರತಿನಿತ್ಯ ಸೇವಿಸಿದರೆ ನಿಮ್ಮ ಬೊಜ್ಜು ಸುಲಭವಾಗಿ ಕರಗಿ ಹೋಗುತ್ತದೆ.
• ಅಲ್ಲದೇ ಶುಂಠಿಯನ್ನು ಜೇನುತುಪ್ಪದೊಂದಿಗೆ ಜಜ್ಜಿ ಸೇವಿಸಿದರೆ ಪದೇ ಪದೇ ಉಂಟಾಗುವ ಕಫ, ಕೆಮ್ಮು, ಹಾಗೂ ಉರಿ ಶೀತದಿಂದ ಪಾರಾಗಬಹುದು. ಯಾಕೆಂದರೆ ಜೇನುತುಪ್ಪ ದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಅಮೃತದಂತೆ ದೇಹಕ್ಕೆ ಸಹಕರಿಸುತ್ತದೆ.
• ಇನ್ನು ಕೆಲವರಿಗೆ ಪದೇ ಪದೇ ಬಾಯಾರಿಕೆ ಆಗುವುದರಿಂದ ಸದಾ ಕಿರಿಕಿರಿ ಅನುಭವಿಸುತ್ತಾರೆ.ಈ ರೀತಿಯ ಸಮಸ್ಯೆ ಇರುವವರು ಜೇನುತುಪ್ಪವನ್ನು ಸೇವಿಸಿದರೆ ಉತ್ತಮ.
• ಕೆಲವೊಮ್ಮೆ ಆಹಾರದಿಂದ ಉಂಟಾಗುವ ಅಡ್ಡ ಪರಿಣಾಮಗಳಿಂದ ತಪ್ಪಿಸಲು ಈ ಜೇನು ಸಹಕಾರಿಯಾಗುತ್ತದೆ. ಅಲ್ಲದೇ ಚರ್ಮಕ್ಕೂ ಕೂಡ ಇದು ಬಹಳ ಒಳ್ಳೆಯದು.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...