”ನಿಮ್ಮ ಆಹಾರಗಳೇ ನಿಮ್ಮ ಔಷಧಿಯಾಗಲಿ,ನಿಮ್ಮ ಔಷಧಿಗಳೇ ನಿಮ್ಮ ಆಹಾರವಾಗಲಿ” ಎಂಬುದನ್ನು ಹಿಪ್ಪೋಕ್ರೆಟಿಸ್ ಹಲವು ವರ್ಷಗಳ ಹಿಂದೆನೇ ಹೇಳಿದ್ದಾನೆ.ನಿಸರ್ಗದ ಮಡಿಲು ನಮಗೆ ಅನೇಕ ನೈಸರ್ಗಿಕ ವಸ್ತುಗಳನ್ನು ಒದಗಿಸಿದೆ,ಅಂತಹವುಗಳನ್ನು ಸಾಮಾನ್ಯವಾಗಿ ನಾವು ನಮ್ಮ ಅಡುಗೆ ಕೋಣೆಯಲ್ಲಿ ಕಾಣುತ್ತೇವೆ ಹಾಗೂ ನಿತ್ಯ ಅದನ್ನು ನಮ್ಮ ಅಡುಗೆಯಲ್ಲುಪಯೋಗಿಸುತ್ತೇವೆ.ಇವುಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಅಲ್ಲದೆ,ಇವುಗಳ ಔಷಧೀಯ ಗುಣಗಳು ನಮ್ಮ ಅನೇಕ ಕಾಯಿಲೆಗಳಲ್ಲಿ ಉಪಯೋಗವಾಗುವುದು,ಹಾಗೂ ನಾವು ಪದೇ ಪದೇ ವೈದ್ಯರ ಬಳಿ ಅಲೆಯುವುದನ್ನು ತಪ್ಪಿಸುತ್ತದೆ.
ಈ ಸಂಕ್ಷಿಪ್ತ ವರದಿಯಲ್ಲಿ 10 ಅಂತಹ ವಿಶೇಷ ಗುಣವುಳ್ಳ ವಸ್ತುಗಳ ಬಗ್ಗೆ ನಿಮಗೆ ತಿಳಿಸುತ್ತೇವೆ ಅದರಿಂದ ಒಳ್ಳೆಯ ಆರೋಗ್ಯಕ್ಕೆ ಸ್ಪೂರ್ಥಿ ಹಾಗೂ ಔಷಧಿಯೂ ಆಗಬಲ್ಲುದು.ಆದರೆ ನೆನಪಿಡಿ ನೀವು ಈ ಯಾವುದೇ ವಸ್ತುಗಳನ್ನು ಸೇವಿಸುವುದಕ್ಕೆ ಮುನ್ನ ಆ ವಸ್ತುವಿನಿಂದ ನಿಮ್ಮ ದೇಹಕ್ಕೆ ಯಾವ ಅಲರ್ಜಿಯೂ ಇಲ್ಲದಿದ್ದಲ್ಲಿ ಮಾತ್ರ ಸೇವಿಸಬಹುದು ಮತ್ತು ಕೇವಲ ತಾಜಾ ವಸ್ತುಗಳನ್ನೇ ಉಪಯೋಗಿಸಿ.
1.ಅರಿಶಿನ. ನಮ್ಮ ಭಾರತೀಯ ಅಡುಗೆಮನೆಯಲ್ಲಿ ನಿತ್ಯ ಉಪಯೋಗಿಸುವ ವಸ್ತು.ಇದು ಎಲ್ಲ ವಿಧವಾದ ರೋಗಾಣು ವಿರೋಧಿ,ನಂಜು,ಉರಿ,ಊತ ನಿವಾರಕವಾಗಿದ್ದು ಇದನ್ನೊಂದು ಔಷಧದ ಖಜಾನೆ ಎಂದರೆ ತಪ್ಪಾಗಲಾರದು.ಎಲ್ಲಾ ತರದ ವಿಷವಸ್ತುವಿನ ಕಡಿತ,ಗಾಯಗಳು ಮತ್ತು ಕೀಲು ನೋವು ಗಳಲ್ಲಿ ಶೀಘ್ರ ಪರಿಣಾಮಕಾರಿ.
ಸಲಹೆ:ಸ್ವಲ್ಪ ಅರಿಶಿನವನ್ನು ಬಿಸಿ ಹಾಲಿನ ಜೊತೆ ಸೇವಿಸಿದಲ್ಲಿ ಮೈ ಕೈ ನೋವಿನಿಂದ ಆರಾಮ.
2.ಶುಂಠಿ ಅಡುಗೆ ಕೋಣೆಯಲ್ಲುಪಯೋಗಿಸುವ ಇನ್ನೊಂದು ವಸ್ತುವೇ ಈ ಶುಂಠಿ.ಇದೂ ಒಂದು ನಂಜು ಉರಿ ಊತ ನಿವಾರಕವಾಗಿದ್ದು,ಅಜೀರ್ಣ,ಎದೆಉರಿ,ವಾಕರಿಕೆ,ಮುಟ್ಟಿನ ಸಂಬಂಧಿ ತೊಂದರೆಯನ್ನು ನಿವಾರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಸಲಹೆ:ಹವಾಮಾನದ ಬದಲಾವಣೆಯಿಂದ ಬರುವ ಶೀತ,ಕೆಮ್ಮು ಹಾಗೂ ಕಫಕ್ಕೆ,ಶುಂಠಿ ಹಾಗೂ ಜೇನಿನ ಮಿಶ್ರಣವನ್ನು ಸೇವಿಸುವುದರೊಂದಿಗೆ ನಿವಾರಣೆಯಾಗುತ್ತದೆ.
3.ದಾಲ್ಚೀನಿ ಇದೂ ಒಂದು ಜೀವಾಣುರೋಧಿಯಾಗಿ ಕೆಲಸ ಮಾಡುತ್ತದೆ.ವಾಯುಭಾದೆ,ಎದೆ ಉರಿ,ಶೀತ,ಅಜೀರ್ಣ ಎಲ್ಲಾದಕ್ಕೂ ಉಪಕಾರಿ.ಸತತ ದಾಲ್ಚೀನಿಯ ಉಪಯೋಗದಿಂದ ಟೈಪ್ 2 ಸಕ್ಕರೆ ಕಾಯಿಲೆಯು ನಿಯಂತ್ರಣಕ್ಕೊಳಗಾಗುವುದು ಎಂದು ಹೇಳಲಾಗುತ್ತದೆ.
ಸಲಹೆ:ದಾಲ್ಚೀನಿಯ ಚಿಟಿಕೆ ಹುಡಿಯನ್ನು ನಿತ್ಯ ಸೇವಿಸುವ ಚಹಾದೊಂದಿಗೆ ಸೇರಿಸಿ ಕುಡಿದಲ್ಲಿ ಶೀತ, ಕೆಮ್ಮುಗಳಿಂದ ಪರಿಹಾರ ಸಿಗುವುದು.
4.ನಿಂಬೆ ಹಣ್ಣು ಇದೊಂದು ಅದ್ಭುತ ಶಕ್ತಿ ಹೊಂದಿರುವ ನೈಸರ್ಗಿಕ ವಸ್ತು.ನಮ್ಮಶರೀರದ ರೋಗ ನಿಯಂತ್ರಣ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಉತ್ತಮ ಪಾತ್ರ ವಹಿಸುತ್ತದೆ.ಹಲವು ತರದ ನೋವಿಗೆ ಇದು ಪರಿಣಾಮಕಾರಿ.ತಲೆನೋವು,ಗಂಟಲು ನೋವು,ಹಲ್ಲು ನೋವು,ಅಜೀರ್ಣ,ಹೊಟ್ಟೆನೋವು,ಸಂಧಿ ವಾತಗಳಲ್ಲಿ ಒಳ್ಳೆ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ.ಶರೀರದ ತೂಕ ಕಡಿಮೆಮಾಡುವುದಕ್ಕೆ ಇದಕ್ಕಿಂತ ಬೇರೆ ಔಷಧಿಯಿಲ್ಲ.ಇದು ಮೂತ್ರನಾಳಗಳ ಸಮಗ್ರ ಕಾರ್ಯನಿರ್ವಹಣೆಗೆ ಸಹಕಾರಿಯಾಗಿರುವುದಲ್ಲದೆ,ಮೂತ್ರ ಕೋಶದಲ್ಲಿ ಕಲ್ಲು ಆಗುವುದನ್ನು ತಡೆಗಟ್ಟುತ್ತದೆ.ಇದರ ಶೀಘ್ರ ಪರಿಣಾಮಕ್ಕೆ ನಿತ್ಯ ನಿಮ್ಮ ಅಡುಗೆಯಲ್ಲಿ ಲಿಂಬೆ ಹಣ್ಣಿನ ರಸ ಸೇರಿಸಿ.
ಸಲಹೆ: ದಿನ ಬೆಳಗ್ಗೆ ನಾವು ಹಾಸಿಗೆಯಿಂದ ಎದ್ದ ತಕ್ಷಣ ನಮ್ಮ ಅಂಗಾಂಶಗಳು ನಿಸ್ತೇಜವಾಗಿದ್ದು,ನಮ್ಮ ದೇಹದಲ್ಲಿರುವ ವಿಷ ಪದಾರ್ಥವನ್ನು ಹೊರ ಹಾಕಲು ಕಾಯುತ್ತಿರುತ್ತದೆ. ನಿತ್ಯ ಬೆಳಗ್ಗೆ ಬಿಸಿ ನೀರಲ್ಲಿ ಲಿಂಬೆ ಹಣ್ಣ ರಸ ಸೇರಿಸಿ ಸೇವಿಸುವುದರಿಂದ ಎಲ್ಲಾದಕ್ಕೂ ಪರಿಹಾರ ಮತ್ತು ನಿಮ್ಮ ಶಕ್ತಿಗೆ ಟಾನಿಕ್ ಇದ್ದಂತೆ.
5.ಬೆಳ್ಳುಳ್ಳಿ .ಇದೊಂದು ಅತ್ಯಂತ ಉತ್ತೇಜಕ ಪರೋಪಕಾರಿ ವಸ್ತು.ಎಲ್ಲಾ ವಿಧದ ರೋಗ ನಿರೋಧಕ ಶಕ್ತಿ ಹೊಂದಿದೆ.ಹಲ್ಲು ನೋವು ಶೀತ,ಕೆಮ್ಮು,ಕಫ,ಗಂಟಲು ನೋವು,ಸೈನಸ್ ತೊಂದರೆ,ಕಿವಿ ನೋವು,ಅಜೀರ್ಣ,ಹೊಟ್ಟೆ ನೋವು ಎಲ್ಲಾದಕ್ಕೂ ಪರಿಣಾಮಕಾರಿ.ಬೆಳ್ಳುಳ್ಳಿಯನ್ನು ಜಜ್ಜಿದಾಗ ಅಥವಾ ಜಗಿದಾಗ ಅಲ್ಲುಂಟಾಗುವ ಮಿಶ್ರಣಕ್ಕೆ ಅಲ್ಲಿಸಿನ್ ಎಂದು ಹೆಸರು.ಇದು ಪೆನ್ಸಿಲಿನ್ ಔಷಧಿಗೆ ಸಮಾನ ಎನ್ನಲಾಗುತ್ತದೆ.ಹೃದಯದ ಆರೋಗ್ಯಕ್ಕೆ ಪರಿಣಾಮಕಾರಿ.ಶರೀರದ ಕೆಟ್ಟ ಕೊಬ್ಬು(bad cholestrol)ನ್ನು ನಿವಾರಿಸಿ ದೇಹದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ.
ಸಲಹೆ: ಬೆಳ್ಳುಳ್ಳಿಯನ್ನು ಹೆಚ್ಚು ಬೇಯಿಸಿದಲ್ಲಿ ಅದರಲ್ಲಿರುವ ಅಲ್ಲಿಸಿನ್ ಅಂಶವು ನಷ್ಟವಾಗುತ್ತದೆ.ನಿಮಗೆ ಕಿವಿ ನೋವು ಇದ್ದಲ್ಲಿ 2 -3 ಬಿಂದು ಉಗುರು ಬಿಸಿ ಬೆಳ್ಳುಳ್ಳಿಯ ಎಣ್ಣೆಯನ್ನು ಕಿವಿಗೆ ಹಾಕುವುದರಿಂದ ಕಿವಿ ನೋವಿನಿಂದ ಪರಿಹಾರ.
6.ಜೇನು ಹೇರಳವಾಗಿ ಕಾರ್ಬೋಹೈಡ್ರೇಟ್ ಇರುವ ವಸ್ತು.ಇದು ಸ್ನಾಯು ದೌರ್ಬಲ್ಯವನ್ನು ನಿವಾರಿಸುವುದಲ್ಲದೆ ನಮ್ಮ ಶರೀರದ ಶಕ್ತಿಯನ್ನು ಹೆಚ್ಚಿಸುತ್ತದೆ.ಹೊಟ್ಟೆ ಹುಣ್ಣು,ಶೀತ,ಗಂಟಲು ಕಿರಿಕಿರಿ,ನಿದ್ರಾ ಹೀನತೆ,ಹಾಗೂ ಬಸುರಿಯರ ಬೆಳಗ್ಗಿನ ವಾಂತಿಯನ್ನು ಪರಿಹರಿಸುವಲ್ಲಿ ಪರಿಣಾಮಕಾರಿ.ಕಡಿತ,ಗಾಯ,ಬಿಸಿ ನೀರ ಗುಳ್ಳೆ ಇವುಗಳ ನಿವಾರಣೆಯಲ್ಲೂ ಸಹಕಾರಿ
ಸಲಹೆ: ಒಂದು ಚಮಚ ಜೇನನ್ನು ಬಿಸಿ ನೀರಿನೊಂದಿಗೆ ಸೇವಿಸಿದಲ್ಲಿ ದೇಹದೊಳಗಿರುವ ವಿಷ ಪದಾರ್ಥವನ್ನು ಹೊರ ಹಾಕಿ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಉಲ್ಲಾಸದಿಂದ ತೊಡಗಲು ಇದು ಅತ್ಯಂತ ಸಹಕಾರಿ.
7.ಲವಂಗ ವಾಯುಭಾದೆ ನಿವಾರಕವಾಗಿದ್ದು ಹಲವು ತೊಂದರೆಗಳಾದ ವಾಂತಿ,ವಾಕರಿಕೆ,ಅಜೀರ್ಣ,ಹೊಟ್ಟೆ ಉಬ್ಬರಗಳನ್ನು ನಿವಾರಿಸುತ್ತದೆ.ಇದೊಂದು ನೋವು ನಿವಾರಕವಾಗಿರುವುದರಿಂದ ಲವಂಗದ ಎಣ್ಣೆಯನ್ನು ಸಣ್ಣ ಹತ್ತಿಯೊಂದಿಗೆ ನೋವಿರುವ ಹಲ್ಲಿನ ಬಳಿ ಒತ್ತಿದಲ್ಲಿ ಹಲ್ಲು ನೋವಿನಿಂದ ತಾತ್ಕಾಲಿಕ ಶಮನ ಪಡೆಯಬಹುದು.ಒಸಡಿನ ಅಲ್ಸರ್ ಹಾಗೂ ಒಸಡು ನೋವಿನಲ್ಲಿ ಪರಿಣಾಮಕಾರಿ.ಉಸಿರಾಟ ಸಂಬಂಧಿ ತೊಂದರೆಗಳಾದ ದಮ್ಮು ,ಕೆಮ್ಮು ಹಾಗೂ ಬ್ರಾಂಕೈಟಿಸ್ ಮೊದಲಾದವುಗಳಲ್ಲಿ ಒಳ್ಳೆ ಪರಿಣಾಮಕಾರಿ
ಸಲಹೆ: ಉತ್ತಮ ಫಲಿತಾಂಶಕ್ಕಾಗಿ ನಿಮ್ಮ ಕರ ವಸ್ತ್ರದಲ್ಲಿ ಒಂದೆರಡು ಬಿಂದು ಲವಂಗದ ಎಣ್ಣೆಯನ್ನ ಹಾಕಿ ಅದರ ಸುವಾಸನೆ ತಗೊಳ್ಳೋದ್ರಿಂದ ವಾಕರಿಕೆಯಿಂದ ಹೊರಬರಬಹುದು.ಒಂದೆರಡು ತುಂಡು ಲವಂಗವನ್ನು ಜಗಿದಲ್ಲಿಯೂ ವಾಕರಿಕೆ ನಿಯಂತ್ರಣ.
8.ಏಲಕ್ಕಿ ಇದನ್ನು ಸಾಂಭಾರ ಪದಾರ್ಥಗಳ ರಾಣಿ ಎನ್ನುತ್ತಾರೆ.ಉಸಿರಿನ ತಾಜಾತನಕ್ಕೆ ಉತ್ತಮ ಸಾಧನ.ಹಸಿವೆಯನ್ನು ಹೆಚ್ಚಿಸಿ,ಗಂಟಲು ನೋವನ್ನು ನಿವಾರಿಸುತ್ತದೆ.ಅಜೀರ್ಣ,ವಾಯು ಭಾಧೆ,ವಾಕರಿಕೆ ನಿಯಂತ್ರಕ.
ಸಲಹೆ: ಬಿಸಿ ನೀರಿಗೆ ದಾಲ್ಚೀನಿ ಹಾಗೂ ಏಲಕ್ಕಿ ಹಾಕಿ ಆ ಮಿಶ್ರಣದಿಂದ ಬಾಯಿ ಗಾರ್ಗಲ್ ಮಾಡಿದಲ್ಲಿ ಗಂಟಲು ನೋವು ಮಾಯ.
9.ನೀರುಳ್ಳಿ.ಇವುಗಳು ನಮ್ಮನ್ನು ಅಳುವಂತೆ ಮಾಡಿದರೂ ಅದು ಸಂತೋಷದ ಕಣ್ಣೀರು ಆಗಿ ಬದಲಾಗುವುದು ಇವುಗಳಲ್ಲಿರುವ ಖನಿಜಾಂಶಗಳಿಂದ.ಕ್ರೋಮಿಯಂ,ಬಯೋಟಿನ್,ವಿಟಮಿನ್ ಸಿ,ಬಿ1,ಬಿ6,ಕೆ,ಫ಼ೋಲಿಕ್ ಆಸಿಡ್ ಹಾಗೂ ನಾರಿನಂಶವು ಹೇರಳವಾಗಿ ತುಂಬಿರೊ ವಸ್ತು. ಶೀತ ಕಫಗಳಲ್ಲಿ ಶೀಘ್ರ ಪರಿಣಾಮಕಾರಿ.ನೀರುಳ್ಳಿಯಲ್ಲಿರುವ ಕ್ರೋಮಿಯಂ ನಿಂದ ಟೈಪ್ 2 ಸಿಹಿ ಮೂತ್ರರೋಗವು ನಿಯಂತ್ರಣಕ್ಕೊಳಗಾಗುತ್ತದೆ.
ಸಲಹೆ ಜೇನು ನೊಣ ಕಚ್ಚಿದಲ್ಲಿ ಈರುಳ್ಳಿಯನ್ನು 2 ಭಾಗ ಮಾಡಿ ಕಚ್ಚಿದ ಭಾಗಕ್ಕೆ ಜೋರಾಗಿ ಉಜ್ಜಿದಲ್ಲಿ ಶೀಘ್ರ ಪರಿಣಾಮ.ನೀರುಳ್ಳಿಯಲ್ಲಿ ಕ್ವೆರ್ಸೆಟಿನ್ ಇದ್ದು (ಕ್ರಿಸ್ಟಲಿನ್ ಅಂಶ)ಇದೊಂದು ನೈಸರ್ಗಿಕವಾಗಿ ದೊರಕುವ ಔಷಧಿಯಾಗಿದ್ದು ಜೇನು ನೊಣದ ನಂಜಿಗೆ ಮಾರಕ.
10.ಜೀರಿಗೆ ಅತ್ಯಧಿಕ ಖನಿಜಾಂಶಗಳನ್ನೊಳಗೊಂಡಿರೋ ಈ ಜೀರಿಗೆ ಕಾಳು ಒಂದು ಉತ್ತಮ ಔಷಧಿಯೇ ಸರಿ. ಕ್ಯಾಲ್ಷಿಯಂ,ಪೊಟ್ಯಾಶಿಯಂ,ಮ್ಯಾಂಗನೀಸ್,ಸೆಲೆನಿಯಂ,ಸತು,ಕಬ್ಬಿಣ,ತಾಮ್ರ ಇವೇ ಮೊದಲಾದ ಖನಿಜಾಂಶಗಳು ಇವುಗಳಲ್ಲಿ ಹೇರಳವಾಗಿದೆ.
ಅಜೀರ್ಣ,ಬೇಧಿ,ವಾಯುದೋಷ,ಹೊಟ್ಟೆ ನೋವು,ಶೀತ,ಸಾಮಾನ್ಯ ಜ್ವರ,ಗಂಟಲು ನೋವು,ನಿದ್ರಾಹೀನತೆ ಇವಗಳಲ್ಲಿ ಉಪಯೋಗಿ.
ಸಲಹೆ: 2 ಕಪ್ ನೀರಿಗೆ 1 ಚಮಚ ಜೀರಿಗೆ ಹಾಕಿ ಕುದಿಸಬೇಕು.ಮಿಶ್ರಣವು ಸಂಪೂರ್ಣವಾಗಿ ಅರ್ಧದಷ್ಟು ಆವಿಯಾಗೋ ತನಕ ಕುದಿಸಿ,ಈಮಿಶ್ರಣವನ್ನು ದಿನ ಸೇವಿಸಿದಲ್ಲಿ ವಾಯು ತೊಂದರೆಯಿಂದ ಮುಕ್ತಿ ಹೊಂದಬಹುದು.
ನೋಡಿದಿರಲ್ಲಾ! ಈ ದಿನನಿತ್ಯದ ನಮ್ಮ ಅಡುಗೆಯಲ್ಲುಪಯೋಗಿಸುವ ವಸ್ತುಗಳಲ್ಲಿ ಅದೆಂಥಾ ಶಕ್ತಿ ಅಡಗಿದೆ???
ಸ್ನೇಹಿತರೆ! ನೈಸರ್ಗಿಕವಸ್ತುಗಳು ಕೈಗೆಟುಕೋಷ್ಟು ದೂರದಲ್ಲಿರೋವಾಗ ಎಲ್ಲೋ ಇರೋ ಡಾಕ್ಟರ್ ಬಳಿ ಅಲೆಯೋದ್ರಿಂದ ವೃಥಾ ಕಾಲಹರಣ;ಆರೋಗ್ಯದಲ್ಲಿ ಮತ್ತೆ ಏರು ಪೇರು;ನಿಮ್ಮ ಜೇಬಿಗೂ ಕತ್ತರಿ;
- ಸ್ವರ್ಣಲತ ಭಟ್
POPULAR STORIES :
ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ
ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!
ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ..!!
68 ನೇ ವಯಸ್ಸಿನ ತಾತ 10ನೇ ತರಗತಿಯ ವಿದ್ಯಾರ್ಥಿ..!!
ಮಹಿಳೆ ಮೇಲೆ ಅತ್ಯಾಚಾರ..! ಭಾರತೀಯ ಆಟಗಾರ ಅರೆಸ್ಟ್ ಯಾರು ಆ ರೇಪಿಸ್ಟ್ ಕ್ರಿಕೆಟರ್…?
ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!
`ರೋಬೋಫೀಲಿಯಾ’ ಇದು `ಫ್ಯೂಚರ್ ಆಫ್ ಸೆಕ್ಸ್’
ನಿಮ್ಮ ರೂಂಮೇಟ್ ನ ಗೊರಕೆ ತಪ್ಪಿಸಬೇಕೇ?? ಇಲ್ಲಿದೆ ಉಪಾಯ…