ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಯಾರೇ ನೀನು ಚೆಲುವೆ, ಕಲಾವಿದ ಸಿನಿಮಾಗಳ ಮೂಲಕ ಪಡ್ಡೆ ಹುಡುಗರ ನಿದ್ರೆ ಗೆಡಿಸಿದ್ದ ನಟಿ ಹೀರಾ ನಿಮಗೆ ಗೊತ್ತಲ್ವೇ…? ಇವರೀಗ ಏನ್ ಮಾಡ್ತಿದ್ದಾರೆ ಗೊತ್ತಾ…?
ಅದಕ್ಕು ಮೊದು ಒಂದು ವಿಷಯ ಹೇಳ್ತೀವಿ. ಇದು ನಿಮಗೆ ಗೊತ್ತಿದೆಯೋ ಗೊತ್ತಿಲ್ವೋ..? ಹೀರಾ ಅವರಾಗ ಟಾಪ್ ನಟಿ. ತಮಿಳು ನಟ ಅಜಿತ್ ಆಗ ಸೈಡ್ ಆ್ಯಕ್ಟರ್ ಅಷ್ಟೇ…!
ಅಜಿತ್ ಹಾಗೂ ಹೀರಾ ಪರಿಚಯವಾಗುತ್ತೆ. ಹೀರಾ ಅವರೇ ಅಜಿತ್ ಗೆ ಸಾಕಷ್ಟು ಅವಕಾಶಗಳನ್ನು ಕೊಡಿಸ್ತಾರೆ. ಅಜಿತ್ ಇವತ್ತು ಸ್ಟಾರ್ ನಟನಾಗಿ ಮಿಂಚುತ್ತಿರುವಲ್ಲಿ ಹೀರಾ ಪಾತ್ರ ಬಹುಮುಖ್ಯ.
ಅಜಿತ್ ಹಾಗೂ ಹೀರಾ ನಡುವೆ ಬರು ಬರುತ್ತಾ ಪ್ರೀತಿ ಹುಟ್ಟುತ್ತದೆ.ಆದರೆ ಕೆಲವು ವರ್ಷಗಳ ಬಳಿಕ ಇದ್ದಕ್ಕಿದ್ದಂತೆ ಅಜಿತ್ ಹೀರಾ ಅವರಿಂದ ದೂರವಾಗ್ತಾರೆ.
ಅಜಿತ್ ಹೀರಾ ಬಗ್ಗೆ ಸುಖಾ ಸುಮ್ಮನೆ ಆರೋಪಗಳನ್ನು ಮಾಡ್ತಾರೆ. ಅವರ ಮನಸ್ಸಿಗೆ ಘಾಸಿ ಮಾಡ್ತಾರೆ. ಅಷ್ಟಾದರೂ ಹೀರಾ ಮಾತ್ರ ಅಜಿತ್ ಅವರನ್ನು ಮನಸ್ಸಲ್ಲಿಟ್ಟುಕೊಂಡು ಸುಮ್ಮನಾಗ್ತಾರೆ.
ಬಳಿಕ ಪೋಷಕರ ಒತ್ತಾಯಕ್ಕೆ ಮಣಿದು ಮದುವೆಯಾದ ಹೀರಾ, ನಾಲ್ಕು ವರ್ಷದ ಬಳಿಕ ಗಂಡನಿಂದ ವಿಚ್ಚೇಧನ ಪಡಿತಾರೆ.
ಅದಿರಲಿ,ಈಗ ಹೀರ ಜನಮೆಚ್ಚುವ ಕೆಲಸ ಮಾಡ್ತಿದ್ದಾರೆ. ಸೈಕಾಲಜಿ ಪದವೀಧರೆ ಆಗಿರುವ ಹೀರಾ ಬಡವರ,ಕಷ್ಟದಲ್ಲಿರೋರ ಸಹಾಯಕ್ಕೆ ನಿಂತಿದ್ದಾರೆ.ಮಾನಸಿಕ ಆರೋಗ್ಯ ತಜ್ಞೆಯಾಗಿ ಯಾವುದೇ ರೀತಿಯ ಹಣ ಪಡೆಯದೆ ಕೆಲಸ ಮಾಡ್ತಿದ್ದಾರೆ ಹೀರಾ. ನೊಂದ ಹೆಣ್ಣುಮಕ್ಕಳಿಗೆ ಹಣ ಪಡೆಯದೆ ಕೌನ್ಸಿಲಿಂಗ್ ನಡೆಸುತ್ತಿದ್ದಾರೆ.