ಈ ದೇವಾಲಯಕ್ಮೆ ಗಂಡ-ಹೆಂಡ್ತಿ ಜೊತೆಯಾಗಿ ಹೋಗಲೇ ಬಾರದು….!

0
248

ಗಂಡ-ಹೆಂಡ್ತಿ ಒಟ್ಟಿಗೆ ದೇವಸ್ಥಾನಕ್ಕೆ ಹೋಗಿ ದೇವರ ಆಶೀರ್ವಾದ ಪಡೆಯುವುದು ಸಾಮಾನ್ಯ. ಆದರೆ, ಇಲ್ಲೊಂದು ದೇವಸ್ಥಾನವಿದೆ,‌ ಈ ದೇವಸ್ಥಾನಕ್ಕೆ ಸತಿ-ಪತಿ ಜೊತೆಯಾಗಿ ಹೋಗಲೇ ಬಾರದು. ಅಪ್ಪಿತಪ್ಪಿ ಹೋದಲ್ಲಿ ಇಬ್ಬರ ನಡುವೆ ಮನಸ್ತಾಪವಾಗಿ , ದೊಡ್ಡಮಟ್ಟಿನ ಜಗಳ ನಡೆದು ಇಬ್ಬರೂ ದೂರಾಗುತ್ತಾರಂತೆ…!

ಇದು ಹಿಮಾಚಲ ಪ್ರದೇಶ, ಶಿಮ್ಲಾದಿಂದ 20ಕಿಮೀ ದೂರಲ್ಲಿರುವ ದುರ್ಗಾದೇವಿ ಮಂದಿರ. ಈ ದೇವಿಯನ್ನು ಶ್ರಯಕೊಟೆ ಎನ್ನುತ್ತಾರೆ. ಇಲ್ಲಿ ಗಂಡ ಮತ್ತು ಹೆಂಡತಿ ಒಟ್ಟಿಗೆ ಮಾತೆಯ ದರ್ಶನ ಪಡೆಯುವಂತಿಲ್ಲ. ಒಟ್ಟಿಗೆ ದರ್ಶನ ಪಡೆದಲ್ಲಿ ಇಬ್ಬರು ದೂರಾವಾಗುತ್ತಾರೆ ಎಂಬ ನಂಬಿಕೆ‌ ಭಕ್ತರದ್ದು.

ಗಣಗಳಿಗೆ ಅಧಿಪತಿಯನ್ನು ನೇಮಿಸಬೇಕೆಂದು ತೀರ್ಮಾನಿಸಿದ‌ ಶಿವ ಮತ್ತು ಪಾರ್ವತಿಗೆ ತಮ್ಮ‌ಇಬ್ಬರು ಮಕ್ಕಳಾದ ಗಣೇಶ ಮತ್ತು ಸುಬ್ರಹ್ಮಣ್ಯ ಇಬ್ಬರಲ್ಲಿ ಯಾರನ್ನು ನೇಮಿಸೋದು ಎಂಬ ಪ್ರಶ್ನೆ ಬರುತ್ತೆ.
ಇಬ್ಬರಲ್ಲಿ ಯಾರು ಸಮರ್ಥರೆಂದು ತಿಳಿಯಲು ಇಬ್ಬರಿಗೂ ಒಂದು ಪರೀಕ್ಷೆ ನೀಡಲು ಮುಂದಾಗ್ತಾರೆ.
ಅದರಂತೆ ಗಣೇಶ ಮತ್ತು ಸುಬ್ರಹ್ಮಣ್ಯನನ್ನು ಕರೆದು ಯಾರು ಮೂರು ಲೋಕವನ್ನು ಮೂರು ಬಾರಿ ಸುತ್ತಿ ಬರುತ್ತೀರೋ ಅವರೇ ಗಣಗಳಿಗೆ ಒಡೆಯ ಎನ್ನುತ್ತಾರೆ ಶಿವ ಮತ್ತು ಪಾರ್ವತಿ. ಸುಬ್ರಹ್ಮಣ್ಯ ತನ್ನ ಸಾರಥಿಯನ್ನು ಕರೆದು ಮೂರು ಲೋಕವನ್ನು ಸುತ್ತಲು ಹೋಗ್ತಾನೆ. ಆದರೆ ಗಣೇಶ ತನ್ನ ತಂದೆ ತಾಯಿಯನ್ನು ಸುತ್ತಿ ತಂದೆ ತಾಯಿಯೇ ನನಗೆ ಮೂರು ಲೋಕ ಎನ್ನುತ್ತಾನೆ.


ಸಂತೋಷಗೊಂಡ ಶಿವ-ಪಾರ್ವತಿ ಗಣೇಶನನ್ನು ಗಣಗಳ ಒಡೆಯನನ್ನಾಗಿ ಮಾಡ್ತಾರೆ.
ಇದರಿಂದ ಸುಬ್ರಹ್ಮಣ್ಯ ಕೋಪಗೊಳ್ಳುತ್ತಾನೆ. ಬಳಿಕ ಗಣೇಶನಿಗೆ ಮದುವೆ ನಿಶ್ಚಯ ಆಗುತ್ತದೆ. ಆಗ ಸುಬ್ರಹ್ಮಣ್ಯಗೆ ಮತ್ತಷ್ಟು ಕೋಪ ಬರುತ್ತದೆ.
ಸುಬ್ರಹ್ಮಣ್ಯ ಯಾಕೀಗೆ ಮಾಡ್ತಿದ್ದಾನೆಂದು ಯೋಚಿಸಿದ ತಾಯಿ ಪಾರ್ವತಿ ತಾನು‌ ನೆಲೆಸಿರುವ ಜಾಗವೇ ಸರಿ ಇಲ್ಲ ಎಂದು ಭಾವಿಸುತ್ತಾಳೆ. ಆ ಜಾಗವೇ ಶ್ರಯಕೊಟೆ. ಇಲ್ಲಿಗೆ ದಂಪತಿ ಜೊತೆಯಾಗಿ ಬಂದರೆ ಬೇರೆಯಾಗುತ್ತಾರೆ ಎಂದು ಪಾರ್ವತಿ ಶಾಪಕೊಟ್ಟಿದ್ದಾಳೆ ಎಂಬ ಮಾತಿದೆ.

LEAVE A REPLY

Please enter your comment!
Please enter your name here