No menu items!
22.2 C
Munich
Tuesday, September 1, 2026

ನಾನು ಯಾರಿಗೂ ಕಿಡ್ನ್ಯಾಪ್ ಮಾಡಿ ಎಂದು ಹೇಳಿಲ್ಲ: ಹೆಚ್’ಡಿ ರೇವಣ್ಣ

Must read

ಬೆಂಗಳೂರು: ಹೆಚ್’ಡಿ ರೇವಣ್ಣರನ್ನು ಕಿಡ್ನ್ಯಾಪ್ ಪ್ರಕರಣದಲ್ಲಿ ನಿನ್ನೆ SIT ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ನಿರೀಕ್ಷಣಾ ಜಾಮೀನಿ ಅರ್ಜಿ ವಜಾ ಬೆನ್ನಲ್ಲೇ ಬಂಧಿಸಲಾಗಿದೆ. ಇಂದು ಸಂಜೆಯೊಳಗೆ ನ್ಯಾಯಾಧೀಶರ ಮುಂದೆ ರೇವಣ್ಣರನ್ನು SIT ಹಾಜರುಪಡಿಸಲಿದೆ. ಮಧ್ಯೆ ರಾತ್ರಿ ಎಸ್ಐಟಿ ಅಧಿಕಾರಿಗಳು ಹೆಚ್ಡಿ ರೇವಣ್ಣ ಬಳಿ ಮಾಹಿತಿ ಪಡೆದುಕೊಂಡಿದ್ದು, ಆದರೆ ಎಸ್ಐಟಿ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿಲ್ಲ ಎನ್ನಲಾಗುತ್ತಿದೆ.
ಎಸ್ಐಟಿ ಅಧಿಕಾರಿಗಳು ಹೆಚ್ಡಿ ರೇವಣ್ಣರನ್ನು ವಿಚಾರಣೆ ಮಾಡಿದ್ದು,ಕಿಡ್ನ್ಯಾಪ್’ಗೂ ನನಗೂ ಸಂಬಂಧವಿಲ್ಲ. ತಾನು ಯಾರಿಗೂ ಕಿಡ್ನ್ಯಾಪ್ ಮಾಡಿ ಎಂದು ಹೇಳಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇನ್ನು ರಾತ್ರಿ ಮಲಗಲು ಸಿಐಡಿ ಸೆಲ್ನಲ್ಲಿ ಇರಿಸದೇ ಎಸ್ಐಟಿ ತನ್ನ ಕಛೇರಿಯಲ್ಲಿ ವ್ಯವಸ್ಥೆ ಮಾಡಿದ್ದು, ಹೀಗಾಗಿ ರಾತ್ರಿ ರೇವಣ್ಣರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿಲ್ಲ. ಇಂದು ಕೆಲ ಪ್ರಶ್ನೆಗಳನ್ನು ಮಾಡಲಿರುವ ಎಸ್ಐಟಿ ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ತೀರ್ಮಾನಿಸಿದ್ದಾರೆ.

- Advertisement -spot_img

More articles

- Advertisement -spot_img

Latest article