ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿ ನಿರುದ್ಯೋಗ ಸಮಸ್ಯೆ ಕಾಡ್ತಾ ಇದ್ರೆ ಜ್ಯೋತಿರ್ಮಠದ ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ ದೇಶದ ಜನತೆ 10-10 ಮಕ್ಕಳನ್ನು ಪಡೆಬೇಕು ಎಂದು ಹೇಳುವ ಮೂಲಕ ಭಾರಿ ಸುದ್ದಿ ಮಾಡಿದ್ದಾರೆ. ಆರ್‍ಎಸ್‍ಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಮೂರು ದಿನಗಳ ಧರ್ಮ ಸಂಸ್ಕೃತಿ ಮಹಾ ಕುಂಭದ ಹಿಂದೂ ಬಚಾವೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ ಹಿಂದುಗಳ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ 10-10 ಮಕ್ಕಳನ್ನು ಪಡೆಯಬೇಕು ಎಂದು ಹೇಳಿದ್ದಾರೆ. ದೇಶದಲ್ಲಿ 2 ಮಕ್ಕಳ ನಿಯಮ ಬದಲಿಸಿ ಹತ್ತು ಮಕ್ಕಳನ್ನು ಪಡೆಯಬೇಕು. ಅಷ್ಟು ಮಕ್ಕಳನ್ನು ಪಡೆದು ಅದರ ಲಾಲನೆ ಪಾಲನೆ ಹೇಗೆ ಮಾಡೋದು ಅಂತ ಚಿಂತೆ ಮಾಡ್ಬೇಡಿ. ಆ ದೇವರು ಅದರ ರಕ್ಷಣೆ ಮಾಡ್ತಾರೆ ಎಂದು ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿಗಳು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೋಟು ಬ್ಯಾನ್ ಮಾಡಿದಂತೆಯೆ ಗೋ ಹತ್ಯೆ ವಿಚಾರದಲ್ಲೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಶಮಿ ಪತ್ನಿಯ ಡ್ರೆಸ್ ಬಗ್ಗೆ ಟೀಕೆ, ಟೀಕಾಕಾರರಿಗೆ ನಾಚಿಕೆಯಾಗಬೇಕು : ಮಹಮ್ಮದ್ ಕೈಫ್
ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!
ಆಧಾರ್ ಪೇಮೆಂಟ್ ಆ್ಯಪ್ ಬಳಸೋದಾದ್ರೂ ಹೇಗೆ..?
ಎಚ್ಚರ..! ಚೆಕ್ ಬೌನ್ಸ್ ಆದ್ರೆ ಅದು ಜಾಮೀನು ರಹಿತ ಅಪರಾಧ..!
ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ
25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?