ಬಿಹಾರದ ಗೋಪಲ್ಗಂಜ್‍ನಲ್ಲಿ ಸೇಂದಿ ದುರಂತದಿಂದ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಈಗಾಗಲೇ 18 ಜನ ಮೃತ ಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಬಿಹಾರ ಸರ್ಕಾರ 25 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು, ಗೋಪಾಲ್ಗಂಜ್ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಕೂಡ ಅಮಾನತುಗೊಂಡಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಸ ಅಬಕಾರಿ ನಿಯಮದ ಪ್ರಕಾರ ಅಪರಾಧಿಗಳಿಗೆ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದರು.
ಗೋಪಾಲ್ಗಂಜ್ ನಗರ ಠಾಣಾ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಅಕ್ರಮ ಲಿಕ್ಕರ್ ಚಟುವಟಿಕೆ ನಡೆಯುತ್ತಿದ್ದು, ಅದರಲ್ಲಿ ಎರಡು ಪ್ರತ್ಯೇಕ ಕೇಸುಗಳಿಗೆ ಸಂಬಂಧಿಸಿದಂತೆ 14 ಜನರ ವಿರುದ್ದ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಇಲ್ಲಿವರೆಗೂ ಆರು ಮಂದಿಯನ್ನು ಬಂಧಿಸಲಾಗಿದ್ದು ಪ್ರಮುಖ ಆರೋಪಿಯ ವಿರುದ್ದ ಪೊಲೀಸರು ಬಲೆ ಬೀಸಿದ್ದಾರೆ. ಸುತ್ತಮುತ್ತಲ ಪ್ರದೇಶಗಳಿಗೆ ದಾಳಿ ನಡೆಸಿದ ಪೊಲೀಸರು ಸುಮಾರು 300 ಲೀಟರ್ ದೇಸೀ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ.
POPULAR STORIES :
ಇಂದು ವಿಶ್ವ ಫೋಟೋಗ್ರಫಿ ದಿನ… ನೀವು ನೋಡಿ ಕೆಲವು ಅದ್ಭುತ ಚಿತ್ರಗಳು..!
ಆಸ್ಪತ್ರೆಯಲ್ಲಿ ಜನ ಕ್ಯೂ ನಲ್ಲಿ ನಿಂತಿದ್ದರೂ ಸರ್ಕಾರಿ ನೌಕರ ಏನ್ ಮಾಡ್ತಾ ಇದ್ದ..? ಈ ವಿಡಿಯೋ ನೋಡಿ.
ವಿಶ್ವದ ಅತೀ ಹಿರಿಯ ವ್ಯಾಘ್ರ – ಮಚ್ಲಿ ದಿ ಕ್ವೀನ್ ಆಫ್ ಟೈಗರ್ಸ್ ಇನ್ನಿಲ್ಲ..!
ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ
ಮುಂದಿನ ತಿಂಗಳಿಂದ ಡ್ಯಾಂ ನೀರು ಕೃಷಿಗಿಲ್ಲ, ಕುಡಿಯೋಕೆ ಮಾತ್ರ..!
ಇಪ್ಪತ್ತೈದು ಅಡಿ ಎತ್ತರದಿಂದ ನೀರಿಗೆ ಜಿಗಿದ ಬಾಲಕ..! ಮುಂದೇನಾಯ್ತು..? ಈ ಸ್ಟೋರಿ ಓದಿ.
ಸಿಸ್ಕೋ ಸಂಸ್ಥೆಯಿಂದ ಹದಿನಾಲ್ಕು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್.?