ರಾತ್ರಿ ಮಲಗುವ ಮುನ್ನ ಈ ರೀತಿ ಬಿಸಿ ಕುಡಿಯಿದ್ರೆ ನಿಮ್ಮ ಆರೋಗ್ಯ ವೃದ್ದಿಯಾಗುತ್ತೆ..
ಬಿಸಿ ನೀರು ಸೇವಿಸುವುದು ಎಂದಿಗೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೆ.. ಅನಾರೋಗ್ಯಕ್ಕೆ ತುತ್ತಾದ ರೋಗಿಗೆ ವೈದ್ಯರು ಸಲಹೆ ನೀಡುವುದು ಬಿಸಿ ನೀರನ್ನ ಕುಡಿಯಲು.. ಹೀಗಾಗೆ ಬಿಸಿ ನೀರು ನಮ್ಮ ದೇಹದ ಮೇಲೆ ಅರೋಗ್ಯಕರ ಪರಿಣಾಮವನ್ನ ಬೀರುತ್ತದೆ.. ಅದರಲ್ಲೂ ರಾತ್ರಿ ವೇಳೆ ಬಿಸಿ ನೀರು ಕುಡಿಯುವುದು ಉತ್ತಮ.. ಯಾಕೆ ಗೊತ್ತಾ..?
ಮಲಗುವ ಮುನ್ನ, ಊಟದ ನಂತರ ನಾಲ್ಕು ಲೋಟ ನೀರನ್ನ ಒಂದು ಪಾತ್ರಯಲ್ಲಿಟ್ಟು, ಅದು ಒಂದು ಲೋಟಕ್ಕೆ ಬರುವಂತೆ ಕುದಿಸಬೇಕು… ಈ ನೀರನ್ನ ನೀವು ಕಾಫಿ ಟೀ ಸೇವಿಸಿದ ಹಾಗೆ ಕುಡಿಯಬೇಕು.. ಇದಕ್ಕೆ ಮತ್ಯಾವುದೇ ಪಾದಾರ್ಥವನ್ನ ಸೇರಿಸುವ ಅಗತ್ಯವಿಲ್ಲ.. ಈ ಬಿಸಿ ನೀರೆ ನಿಮ್ಮ ದೇಹದ ಮೇಲೆ ಕಷಾಯದಂತೆ ಕಾರ್ಯ ನಿರ್ವಹಿಸುತ್ತದೆ…
ಇದು ತೂಕ ಇಳಿಸುವವರಿಗೆ ಪರಿಣಾಮಕಾರಿಯಾಗಿದ್ದು, ನೆಗಡಿ, ಕೆಮ್ಮು, ಶೀತ ನಿವಾರಣೆಗೆ ಸಹಕಾರಿ.. ಜೊತೆಗೆ ರಾತ್ರಿ ಊಟವನ್ನ ಜೀರ್ಣಗೊಳಿಸಲು ನೆರವಾಗುತ್ತದೆ.. ಮೈಕೈ ನೋವು ಸೇರಿದಂತೆ ಬೆಳಗಿನ ಜಡತ್ವವನ್ನ ನಿವಾರಿಸಲು ಸಹಾಯಕವಾಗಿದೆ.. ಈ ಬಿಸಿ ನೀರಿನಿಂದ ದೇಹದಲ್ಲಿರುವ ಬೇಡವಾದ ಕಲ್ಮಶವನ್ನ ಹೊರ ಹಾಕಲು ನೆರವಾಗುತ್ತದೆ… ಇಲ್ಲಿ ನೀವು ಯಾವುದೇ ಔಷದಿಯನ್ನ ಸೇವಿಸುತ್ತಿಲ್ಲ.. ಕೇವಲ ಬಿಸಿ ನೀರನ್ನ ಕುಡಿಯುತ್ತಿದ್ದೀರಿ, ಇದರಿಂದ ನಿಮ್ಮ ದೇಹದ ಮೇಲೆ ಇಷ್ಟೆಲ್ಲ ಲಾಭವಿದೆ..