ಮನೆಯಿಂದ ಹೊರಗಡೆ ಕಾಲಿಡಲ್ಲ.. ಆದ್ರೆ ಕೋಟಿ ಕೋಟಿ ದುಡೀತಾನೆ..! ಯೂಟ್ಯೂಬ್ ಪ್ರಪಂಚದಲ್ಲಿ ಇವನೇ ಸಖತ್ ಶ್ರೀಮಂತ..!

Date:

ಇವನು ಕೆಲಸಕ್ಕೆ ಅಂತ ಎಲ್ಲೂ ಹೋಗಲ್ಲ.. ಮನೆಯೊಳಗೇ ಇವನ ಪ್ರಪಂಚ.. ಆದ್ರೆ ಇವನು ಇಡೀ ಪ್ರಪಂಚಕ್ಕೆ ಗೊತ್ತು.. ಮನೆಯಿಂದ ಹೊರಗೆ ಹೋಗ್ದಿದ್ರೇನು..? ಅಕೌಂಟ್ ನಲ್ಲಿ ಮಾತ್ರ ಕೊಟಿ ಕೋಟಿ ದುಡ್ಡು ಬಂದು ಬೀಳ್ತಾ ಇರುತ್ತೆ.. ಅರೆರೆ ಅದ್ಹೆಂಗೆ ಮಾರಾಯ, ನಮ್ಗೂ ಸ್ವಲ್ಪ ಹೇಳು ಅನ್ನೋದಾದ್ರೆ ಈ ಸ್ಟೋರಿ ಓದಿ, ಗೊತ್ತಾಗುತ್ತೆ.. !
ಅವನ ಹೆಸರು ಫೆಲಿಕ್ಸ್ ಅರವಿಡ್ ಅಲಿಯಾಸ್ ಪಿವ್ ಡಿ ಪೈ..! ಓ..ಪೈ ಅಂದ್ರೆ ನಮ್ಮ ರಾಜ್ಯದವನೇ ಇರಬೇಕು ಅನ್ಕೋಬೇಡಿ.. ಇವನು ದೂರದ ಇಂಗ್ಲೆಂಡಿನವನು. ಕೆಲಸ ಅಂತೇನೂ ಇಲ್ಲ, ಆದ್ರೆ ಆಟ ಆಡ್ಕೊಂಡು, ಅದಕ್ಕೆ ಕಾಮೆಂಟ್ರಿ ಕೊಟ್ಕೊಂಡು, ಅದನ್ನ ವೆಬ್ ಕ್ಯಾಮೆರಾದಲ್ಲಿ ಶೂಟ್ ಮಾಡಿ, ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿ ಕೋಟಿ ಕೋಟಿ ದುಡೀತಾನೆ ಅಂದ್ರೆ ನೀವು ನಂಬಲೇಬೇಕು.. !
ಯೂಟ್ಯೂಬ್ ಆಡ್ ಸೆನ್ಸ್ ಅಕೌಂಟ್ ಮಾಡ್ಕೊಂಡ್ರೆ ನೀವು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ ವೀಡಿಯೋ ಎಷ್ಟು ಜನ, ಎಷ್ಟು ಹೊತ್ತು ನೋಡ್ತಾರೆ ಅನ್ನೋದ ಮೇಲೆ ನಿಮಗೆ ದುಡ್ಡು ಸಿಗುತ್ತೆ. ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ದುಡ್ಡು ಬಂದು ಬೀಳುತ್ತೆ.. ಇದನ್ನೇ ಜೀವನ ಮಾಡಿಕೊಂಡ್ರೆ ಹೇಗೆ ಅಂತ ಯೋಚನೆ ಮಾಡಿ ಫೆಲಿಕ್ಸ್ ಅರವಿಡ್ ಅನ್ನೋ ಈತ ಪಿವ್ ಡಿ ಪೈ ಅಂತ ಒಂದು ಯೂಟ್ಯೂಬ್ ಪೇಜ್ ಓಪನ್ ಮಾಡ್ದ. 2010ಕ್ಕೆ ಶುರುವಾದ ಇವನ ಯೂಟ್ಯೂಬ್ ಚಾನಲ್, ಇವತ್ತು ವಿಶ್ವದ ಶ್ರೀಮಂತ ಯೂಟ್ಯೂಬ್ ಚ್ಯಾನಲ್..!
ಇವನ ಚಾನೆಲ್ ಗೆ ಇರೋ ಅಷ್ಟು ಮೆಂಬರ್ಸ್ ಬೇರೆ ಯಾವುದೇ ಚಾನಲ್ ಗೂ ಇಲ್ಲ.. ಓದುವಾಗಲೇ ಓದಿನ ಇಂಟರೆಸ್ಟ್ ಕಳ್ಕೊಂಡು, ಕಾಲೇಜ್ ಬಿಟ್ಟು, ಯೂಟ್ಯೂಬ್ ನನ್ನ ಜೀವ ಮತ್ತು ಜೀವನ ಅಂತ ಡಿಸೈಡ್ ಮಾಡಿದವನು, ಇವತ್ತು ಜಗತ್ತಿನ ನಂಬರ್ ವನ್ ಯೂಟ್ಯೂಬ್ ಸ್ಟಾರ್..! ಇಲ್ಲೀವರೆಗೆ ಇವನ ಚ್ಯಾನಲ್ ನ 597887000000 ಜನ ನೋಡಿದ್ದಾರೆ, ನೋಡ್ತಾನೇ ಇರ್ತಾರೆ… ! ಇವನು ಒಂದು ವೀಡಿಯೋ ಪೋಸ್ಟ್ ಮಾಡಿದ ಒಂದು ಗಂಟೆಯೊಳಗೆ ಮಿಲಿಯನ್ ಗಟ್ಟಲೆ ಜನ ಇದನ್ನು ನೋಡಿರ್ತಾರೆ ಅಂದ್ರೆ ಇವನದೆಷ್ಟು ಫೇಮಸ್ ಇರಬೇಕು ಲೆಕ್ಕ ಹಾಕಿ..! ಇದೆಲ್ಲಾ ಓಕೆ ಅವನು ಎಷ್ಟು ದುಡೀತಾನೆ ಅಂತ ಹೇಳಪ್ಪಾ ಅಂದ್ರ..? ಹೇಳ್ತೀನಿ ಕೇಳಿ.. ! 2014ರಲ್ಲಿ ಇವನ ಅಕೌಂಟ್ ಗೆ ಯೂಟ್ಯೂಬ್ ಹಾಕಿದ ದುಡ್ಡು ಬರೋಬ್ಬರಿ ಆರೂವರೆ ಕೋಟಿ..! ದೇವ್ರಾಣೆ ಆರೂವರೆ ಕೋಟಿ ರೂಪಾಯಿ.. ! ಯಾವನಿಗೆ ಸಿಗುತ್ತೇರಿ ಇಷ್ಟು ಸಂಬಳ..? ಬೆಳಗ್ಗೆ ಎದ್ದು ರಾತ್ರಿ ತನಕ ಎಷ್ಟೇ ಒದ್ದಾಡುದ್ರೂ ವಾರ್ಷಿಕ ಸಂಬಳ ಹತ್ತು ಲಕ್ಷ ದಾಟಬೇಕಾದ್ರೆ ಸುಸ್ತೋ ಸುಸ್ತು.. ! ಅಂತದ್ರಲ್ಲಿ ಮನೇಲಿ ಕೂತ್ಕೊಂಡು ವೀಡಿಯೋಗೇಮ್ ಆಡ್ಕೊಂಡು, ಅದಕ್ಕೆ ಕಾಮೆಂಟ್ರಿ ಕೊಟ್ಕೊಂಡು, ಅದನ್ನು ರೆಕಾಡರ್್ ಮಾಡಿ ಯೂಟ್ಯೂಬ್ ಗೆ ಹಾಕಿದ್ದಕ್ಕೆ ಸಿಕ್ಕೋದು ಆರೂವರೆ ಕೋಟಿ ರೂಪಾಯಿ.. !
ಅರೆರೆ.. ನಾನೂ ಕೆಲಸ ಬಿಟ್ಟು ಅದನ್ನೇ ಮಾಡ್ತೀನಿ ಅನ್ಕೊಂಡ್ರೆ ಆಗಲ್ಲ.. ಅದಕ್ಕೆ ನಿಮ್ಮ ಶ್ರಮದ ಜೊತೆ ಸ್ವಲ್ಪ ಲಕ್ ಇರಬೇಕು.. ನೀವು ಹಾಕಿದ ವೀಡಿಯೋ ಅಪ್ ಆಯ್ತು ಅಂತ ಇಟ್ಕೊಳಿ, ಜನ ನಿಮ್ಮ ಚಾನಲ್ ಗೆ ಮೆಂಬರ್ ಆದ್ರು ಅಂತ ಇಟ್ಕೊಳಿ, ನಿಮ್ಮ ಲಕ್ ತಿರುಗಿದ ಹಾಗೆ.. ಆದ್ರೆ ಪಿವ್ ಡಿ ಪೈ ಮಾಡಿದ ಹಾಗೆಲ್ಲಾ ಕೋಟಿ ಕೋಟಿ ಬಾಚೋಕೆ ಸಿಕ್ಕಾಪಟ್ಟೆ ಅದೃಷ್ಟ ಬೇಕು ಬಿಡಿ.. !
ಇವನ ವಿಡಿಯೋಗಳಿಗೆ ದೊಡ್ಡ ದೊಡ್ಡ ಕಂಪನಿಗಳ ಬ್ರ್ಯಾಂಡಿಂಗ್ ಸಹ ಸಿಗುತ್ತೆ.. ಇವನ ಹೆಸರಲ್ಲಿ ದೊಡ್ಡ ದೊಡ್ಡ ಕಂಪನಿಗಳು ಬಿಸಿನೆಸ್ ಮಾಡ್ತಿವೆ.. ಅವನಿಗೂ ಯೂಟ್ಯೂಬ್ ಅಕ್ಷಯಪಾತ್ರೆ ತರ ದುಡ್ಡು ತುಂಬಿಸ್ತಾನೆ ಇದೆ..! ಇದನ್ನು ಓದಿದ ಮೇಲೆ ನಿಮಗೂ ಯೂಟ್ಯೂಬ್ ನಲ್ಲಿ ದುಡ್ಡುಮಾಡೋ ಆಸೆ ಹುಟ್ಟಿದ್ರೆ ತಪ್ಪೇನಿಲ್ಲ.. ಅದಕ್ಕೆ ಕೆಲವು ಬೇಸಿಕ್ ನಾಲೆಡ್ಜ್ ಬೇಕು.. ! ಅದರ ಬಗ್ಗೆ ಟ್ರೈನಿಂಗ್ ಬೇಕು ಅನ್ಸಿದ್ರೆ ಅದಕ್ಕೇ ಅಂತಲೇ ಒಂದು ಟೀಂ ಇದೆ.. ರಿಜಿಸ್ಟರ್ ಮಾಡ್ಕೊಳಿ, ಯೂಟ್ಯೂಬ್ ನಲ್ಲಿ ಹಣ ಗಳಿಸೋದು ಹೇಗೆ ಅನ್ನೋ ಸೆಮಿನಾರ್ ಅಟೆಂಡ್ ಮಾಡಿ..! ರಿಜಿಸ್ಟರ್ ಆಗೋಕೆ …. 97316 23333 ಗೆ ಕರೆ ಮಾಡಿ… ಅದೃಷ್ಟ ಚೆನ್ನಾಗಿದ್ದು ನೀವು ಕ್ಲಿಕ್ ಆದ್ರೆ, ನಾಳೆ ನಿಮ್ಮ ಆರ್ಟಿಕಲ್ ಸಹ ಹೀಗೇ ಬರಬಹುದು..! ಏನಂತೀರಿ..?
-ಕೀರ್ತಿ ಶಂಕರಘಟ್ಟ

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...