ಮೊದಲು ಈ ಮೇಲಿನ ಚಿತ್ರನೋಡಿ….! ನೋಡಿದ್ರ…? ಯಾರೋ ಹಪ್ಪಳ (ಪಾಪಡ್) ಮಾರುತ್ತಿದ್ದಾನೆ…! ಅದರಲ್ಲೇನಿದೆ ವಿಶೇಷತೆ ಅಂತ ನೀವು ಕೇಳ್ತಿದ್ದೀರಿ…!
ಅಯ್ಯೋ….ಇನ್ನೊಂದ್ಸಲ ಕಣ್ಬಿಟ್ಟು ನೋಡ್ರಿ….? ಅರೇ….ಈ ಚಿತ್ರದಲ್ಲಿರೋ ವ್ಯಕ್ತಿ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ರೀತಿ ಕಾಣ್ತಿದ್ದಾನಲ್ಲ…! ಅಂತ ಆಶ್ಚರ್ಯ ಪಡ್ತಿದ್ದೀರ…? ಹೃತಿಕ್ ತರ ಅಲ್ಲ ಹೃತಿಕ್ ರೋಷನ್ನೇ…..!
ಹೃತಿಕ್ ಗೇಕೆ ಈ ಗತಿ ಬಂತು ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರ…? ಹೃತಿಕ್ ಈ ಅವತಾರ ಎತ್ತಿರೋದು ತಮ್ಮ ಮುಂದಿನ ಚಿತ್ರ ‘ಸೂಪರ್ 30’ ಗೆ…! ಈ ಚಿತ್ರಕ್ಕಾಗಿ ಹೃತಿಕ್ ಸಾಮಾನ್ಯಕ್ಕೆ ಗುರುತು ಸಿಗದ ಮಟ್ಟಿಗೆ ತೂಕ ಇಳಿಸಿಕೊಂಡಿದ್ದಾರೆ…!