ಅಮ್ಮನೂರಿನ ಜನರ ಕಣ್ಣೀರು ಒರೆಸಿದ ನಟರಿವರು..! ನಿಜ ಜೀವನದಲ್ಲೂ ಹೀರೋ ಆದ ಸಿದ್ಧಾರ್ಥ, ಬಾಲಾಜಿ..!

Date:

ತಮಿಳುನಾಡು ಹಿಂದೆಂದೂ ಕಾಣದ ಪ್ರವಾಹಕ್ಕೆ ಸಿಲುಕಿಕೊಂಡಿದೆ. ಅದು ಬಡವರು, ಶ್ರೀಮಂತರು ಎನ್ನುವ ಬೇಧ ಮಾಡದೇ ಎಲ್ಲರ ಆಸ್ತಿ ಪಾಸ್ತಿಯನ್ನು ಕೊಚ್ಚಿಕೊಂಡು ಹೊಯ್ದಿದೆ. ಆದ್ದರಿಂದ ತಮಿಳುನಾಡಿನ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆ ರಂಗ್ ದೇ ಬಸಂತಿ ಖ್ಯಾತಿಯ ಸಿದ್ಧಾರ್ಥ್ ಮತ್ತು ಆರ್ ಜೆ ಬಾಲಾಜಿಯವರು ತಮ್ಮ ನಾಡಿನ ಜನತೆಯ ನೋವಿಗೆ ಸ್ಪಂಧಿಸಿದ್ದಾರೆ. ತಾವು ಸಂಕಷ್ಟದಲ್ಲಿದ್ದರೂ ಕೂಡಾ ಬೇರೆಯವರ ಕಷ್ಟಕ್ಕಾದ ಈ ನಟರಿಬ್ಬರನ್ನು ರಿಯಲ್ ಲೈಫ್ ನ ರಿಯಲ್ ಸ್ಟಾರ್ ಗಳು ಎಂದು ಅಲ್ಲಿನ ಜನ ಕರೆಯುತ್ತಿದ್ದಾರೆ.
ಪ್ರವಾಹದಿಂದ ತಮಿಳುನಾಡಿನಲ್ಲಿ ಅಪಾರ ಹಾನಿಯಾಗಿದ್ದೇ ತಡ ಸಿದ್ಧಾರ್ಥ್ ರವರು ಟ್ವಿಟರ್ ಮೂಲಕ ಆಹಾರ ಸರಬರಾಜಿಗೆ ಸಹಾಯ ಮಾಡಿ ಎಂದು ಕೇಳಿಕೊಂಡರು. ಟ್ವಿಟರ್ ಇದ್ದಕ್ಕಿದ್ದಂತೆ ವೈರಲ್ ಆಗಿದ್ದು, ನೂರಕ್ಕೂ ಹೆಚ್ಚು ಜನರು ಸಿದ್ಧಾರ್ಥ್ ರ ಜೊತೆ ಕೈಜೋಡಿಸಿದ್ದಾರೆ. ಬಳಿಕ ಸ್ವತಃ ಸಿದ್ಧಾರ್ಥ್ ರವರೇ ಮುಂದೆ ನಿಂತು ಆಹಾರ ಪೊಟ್ಟಣ ಸೇರಿದಂತೆ ಹತ್ತಾರು ರೀತಿಯ ಅಗತ್ಯ ವಸ್ತುಗಳನ್ನು ಹಂಚಿದ್ದಾರೆ. ಇವರಿಗೆ ತಮಿಳಿನ ಪ್ರಸಿದ್ಧ ರೇಡಿಯೋ ಜಾಕಿ ಬಾಲಾಜಿಯವರೂ ಕೂಡಾ ಕೈ ಜೋಡಿಸಿದ್ದಾರೆ. ಅಲ್ಲದೇ ತಮಿಳು ಸೂಪರ್ ಸ್ಟಾರ್ ಗಳಾದ ವಿಷ್ಣು ವಿಶಾಲ್, ಉದಯನಿಧಿ ಸ್ಟ್ಯಾಲಿನ್, ಕಾರ್ತಿಕ್, ಇಳಯರಾಜಾ, ಖುಷ್ಬು ಮತ್ತ ವಿಶಾಲ್ ಕೃಷ್ಣ ರೆಡ್ಡಿಯವರೂ ಕೂಡಾ ಸಂಕಷ್ಟದಲ್ಲಿ ಸಿಲುಕಿದವರ ಕಷ್ಟಕ್ಕೆ ಪರಿಹರಿಸಲು ಸಹಾಯ ಮಾಡಿದ್ದಾರೆ.
ತಮಿಳುನಾಡಿನ ಪ್ರಸಿದ್ಧ ರಾಜಕಾರಣಿ ಸ್ಟ್ಯಾಲಿನ್ ರವರ ಪುತ್ರ ಉದಯನಿಧಿ ಸ್ಟ್ಯಾಲಿನ್ ರವರು ಭಾರತ ಕ್ರಿಕೆಟ್ ತಂಡದ ಆಟಗಾರ ಆರ್ ಅಶ್ವಿನ್ ರ ಕುಟುಂಬವನ್ನು ರಕ್ಷಿಸಿದ್ದಾರೆ.
ತಮಿಳುನಾಡಿನಲ್ಲಾದ ಪ್ರವಾಹಕ್ಕೆ ತಕ್ಷಣವೇ ಸ್ಪಂದಿಸಿದ ಈ ನಟರು ನಿಜ ಜೀವನದಲ್ಲೂ ಸೂಪರ್ ಸ್ಟಾರ್ ಗಳೇ. ತಾವು ಸಂಕಷ್ಟದಲ್ಲಿದ್ದರೂ ಕೂಡಾ ಬೇರೆಯವರ ಕಷ್ಟಕ್ಕಾದ ಈ ನಟರಿಗೆ ಪ್ರತಿಯೊಬ್ಬರೂ ಕೂಡಾ ಧನ್ಯವಾದ ಅರ್ಪಿಸಲೇಬೇಕು.

1

2

3

4

5

6

7

8

9

10

11 (1)

11

12 (1)

12

Screenshot_1

The New Indian Times salutes them and everyone who is working tirelessly to help the victims of this calamity.

  • ರಾಜಶೇಖರ ಜೆ

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...