No menu items!
11.1 C
Munich
Wednesday, April 29, 2026

23ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೋಟಿಗಟ್ಟಲೆ ಸಂಬಳ ಕೊಡುತ್ತಿರೋ `ಫ್ಲಿಪ್ ಕಾರ್ಟ್ '..!

Must read

ಆನ್ ಲೈನ್ ಮಾರಾಟ ತಾಣ ಫ್ಲಿಪ್ ಕಾರ್ಟ್ ತನ್ನ ಉದ್ಯೋಗಿಗಳಿಗೆ ಕೋಟಿಗಟ್ಟಲೆ ಸಂಬಳವನ್ನು ನೀಡುತ್ತಿದೆ..! 23ಕ್ಕೂ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳ ವಾರ್ಷಿಕ ಸಂಬಳ 1 ಕೋಟಿಗೂ ಹೆಚ್ಚಿನ ಸಂಬಳವನ್ನು ಕಳೆದ ವರ್ಷ ಪಡೆದಿದ್ದಾರೆ..!
ಫ್ಲಿಪ್ ಕಾರ್ಟ್ ತನ್ನ ಯದ್ಯೋಗಿಗಳಿಗಾಗಿ ಮಾಡ್ತಾ ಇರೋ ವೆಚ್ಚ ಮೂರು ಪಟ್ಟು ಹೆಚ್ಚಿದ್ದು, ಬರೊಬ್ಬರಿ 476 ಕೋಟಿ ರೂಪಾಯಿಗಳನ್ನು ಉದ್ಯೋಗಿಗಳಿಗಾಗಿ ವ್ಯಯಿಸುತ್ತಿದೆ ಎಂದು ಹೇಳಲಾಗುತ್ತಿದೆ..!
ಮುಖ್ಯ ಅಧಿಕಾರಿಗಳಲ್ಲಿ ಒಬ್ಬರಾಗಿರೋ ಮೇಕಿನ್ ಮಹೇಶ್ವರಿಯವರು 2014-15ನೇ ಸಾಲಿನಲ್ಲಿ ಬರೊಬ್ಬರಿ 18.73 ಕೋಟಿ ರೂಪಾಯಿ ವಾರ್ಷಿಕ ಸಂಬಳವನ್ನು ಪಡೆದಿದ್ದಾರೆ..! ಇವರೀಗ ಸಲಹಗಾರರಾಗಿ ಕಾರ್ಯನಿರ್ವಹಿಸ್ತಾ ಇದ್ದಾರೆ. ಈ ಸಂಬಳ ಹಿಂದೂಸ್ಥಾನಿ ಯುನಿಲಿವರ್ ಮುಖ್ಯಸ್ಥರಾದ ಸಂಜೀವ್ ಮೆಹ್ತಾ ಮತ್ತು ಐಟಿಸಿ ಮುಖ್ಯಸ್ಥರಾದ ವೈಸಿ ದೇವೇಶ್ವರ್ ಅವರಿಗಿಂತಲೂ ಹೆಚ್ಚಿದೆ..!
ಹೀಗೆ ಫ್ಲಿಪ್ ಕಾರ್ಟ್ ತನ್ನ ಉದ್ಯೋಗಿಗಳಿಗೆ ಕೋಟಿ ಕೋಟಿ ಸಂಬಳ ನೀಡುವ ಮೂಲಕ ಗೂಗಲ್, ಅಡೋಬೆ ಮೊದಲಾದ ಪ್ರತಿಷ್ಠಿತ ಕಂಪನಿಗಳು ಪ್ರತಿಭಾಂತರನ್ನು ತನ್ನತ್ತ ಸೆಳೆಯುತ್ತಿರುವಂತೆ ಫ್ಲಿಪ್ ಕಾರ್ಟ್ ಕೂಡ ಮಾಡುತ್ತಿದೆ..! ಕೋಟಿ ಕೋಟಿ ಸಂಬಳವನ್ನು ನೀಡೋ ಮೂಲಕ ತನಗೆ ಬೇಕಾದ ಅರ್ಹ ಪ್ರತಿಭಾವಂತ, ಸೃಜನಶೀಲಾ ಉದ್ಯೋಗೊಗಳನ್ನು ಆಕರ್ಷಿಸ್ತಾ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ..!

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article