ಹೊಸ ನೋಟುಗಳನ್ನು ನಕಲಿಯಾಗಿಸಲು ಪಾಕಿಸ್ಥಾನಕ್ಕೆ ಇನ್ಮುಂದೆ ಅಸಾಧ್ಯ-ಇಂಟೆಲಿಜೆನ್ಸ್ ವರದಿ

Date:

ಇಂದಿನಿಂದ ಚಲಾವಣೆಗೆ ಬಂದಿರೋ ಹೊಸ 2000 ಹಾಗೂ 500 ರ ನೋಟುಗಳನ್ನು ನಕಲಿ ಮಾಡಲು ಪಾಕಿಸ್ಥಾನಕ್ಕಾಗಲೀ ಅಥವಾ ಯಾವುದೇ ಕ್ರಿಮಿನಲ್ಸ್ ಗಳಿಗಾಗಲೀ ಅಸಾಧ್ಯ ಎಂಬುದಾಗಿ ಇಂಟೆಲಿಜೆನ್ಸ್ ಏಜೆನ್ಸಿಯು ತನ್ನ ವರದಿಯಲ್ಲಿ ತಿಳಿಸಿದೆ. ಕಳೆದ ಆರು ತಿಂಗಳಿನಿಂದ ಮುದ್ರಣೆಯಾಗುತ್ತಿದ್ದ ನೋಟುಗಳ ಬಗೆಗೆ ಇಂಟೆಲಿಜೆನ್ಸ್ ಬ್ಯೂರೋ,ಸುರಕ್ಷತೆಯ ಬಗೆಗೆ ಪರಿಶೀಲನೆ ನಡೆಸಿ,ಇವುಗಳ ವಿಶೇಷತೆಯ ಬಗೆಗಿನ ಮಾಹಿತಿ ಗೌಪ್ಯವಾಗಿರಿಸಿದ್ದರೂ, ಇದನ್ನು ನಕಲು ಮಾಡುವುದು ಅಸಾಧ್ಯ ಎಂಬುದಷ್ಟು ವಿಚಾರವನ್ನು ತಿಳಿಸಿದೆ.
ಸರಕಾರಕ್ಕೆ ಹಾಗೂ ರಿಸರ್ವ್ ಬ್ಯಾಂಕ್ ಗೆ ನೀಡಲಾದ ವರದಿಯಲ್ಲಿ,ಪಾಕಿಸ್ಥಾನದ ಪೇಶಾವರ್ ನಲ್ಲಿ ಈ ನಕಲಿ ನೋಟುಗಳ ಜಾಲ ಸೃಷ್ಟಿಯಾಗಿದ್ದು ಇಲ್ಲಿ ೫೦೦ ಹಾಗೂ ೧೦೦೦ ನಕಲಿ ನೋಟುಗಳು ದಾವೂದ್ ಇಬ್ರಾಹಿಂ ನ ನೇತೃತ್ವದಲ್ಲಿ ಮುದ್ರಣೆಯಾಗಿ ನಮ್ಮ ದೇಶದೊಳಕ್ಕೆ ಇವುಗಳನ್ನು ತಳ್ಳಲಾಗುತ್ತಿತ್ತು ಎಂದು ತಿಳಿಸಿದ್ದಲ್ಲದೆ.ಇವುಗಳನ್ನು ಯಾವುದೇ ದೋಷಗಳಿಲ್ಲದಂತೆ ಮುದ್ರಿಸುವಷ್ಟು ಪಾಕಿಸ್ಥಾನದ ಮುದ್ರಣಾ ಯಂತ್ರಗಳು ಸಮರ್ಥವಾಗಿತ್ತು ಎಂದು ತಿಳಿಸಲಾಗಿದೆ. ಸುಮಾರು ಅಂದಾಜಿನ ಪ್ರಕಾರ ೭೦ ಕೋಟಿ ಯಷ್ಟು ಮೊತ್ತವನ್ನು ಪ್ರತೀ ವರುಷ ನಮ್ಮ ಭಾರತೀಯ ಮಾರುಕಟ್ಟೆಯತ್ತ ಸಾಗಿಸಲಾಗುತ್ತಿತ್ತಂತೆ ಎಂಬುದಾಗಿಯೂ ಹೇಳಲಾಗಿದೆ.
PIL ನ್ನು ಸುಪ್ರೀಂ ಕೋರ್ಟ್ ನಲ್ಲಿ ದರ್ಜೆ ಮಾಡಲಾಗಿದ್ದು, ಸರಕಾರದ ಈ ತೀರ್ಮಾನದ ವಿರುದ್ದ ಸವಾಲು ಹಾಕಲಾಗಿದೆ.PIL ಎಂದರೆ (ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್)ಜನಹಿತ ಪರವಾಗಿ ಅವರ ಕಾನೂನು ಹಕ್ಕುಗಳಿಗೆ ಭಾದ್ಯತೆಯಾಗಿದೆ ಎಂದು ಅರಿವಾದಾಗ ಹೂಡುವ ದಾವೆ ಇದಾಗಿದೆ.ಇದನ್ನು ಯಾವುದೇ ವ್ಯಕಿ ಅಥವಾ ವ್ಯಕ್ತಿಗಳು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬಹುದು.ಅಡ್ವಕೇಟ್ಸ್ ಜಮ್ಶದ್ ಮಿಸ್ತ್ರಿ ಹಾಗೂ ಜಬ್ಬರ್ ಶೇಖ್ ಈ ಸರಕಾರದ ನಿರ್ಧಾರ ನ್ಯಾಯಸಮ್ಮತವಲ್ಲವೆಂದು ಮುಂಬಯಿ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಜನ ಸಾಮಾನ್ಯರು ಪಾಡು ಪಡುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.1978 ರಲ್ಲಿ ಸರಕಾರ ಇದೇ ತರಹದಲ್ಲಿ ಹೈ ಡಿನಾಮಿನೇಶನ್ ನೋಟುಗಳಿಗೆ ಕಡಿವಾಣ ಹಾಕಿತ್ತು.ಆಗ ನಡೆದ ಪರಿಣಾಮದ ಬಗ್ಗೆ ಮಿಸ್ತ್ರಿಯವರು ಈ ದಾವೆಯಲ್ಲಿ ಸೂಚಿಸಿದ್ದಾರೆ.
ಒಟ್ನಲ್ಲಿ ಸರಕಾರ ನೀಡಿದ ಈ ದಿಢೀರ್ ಶಾಕ್ನಿಂದ ಜನ ಸಾಮನ್ಯರಿಗೆ ಸ್ವಲ್ಪ ಮಟ್ಟಿನ ತೊಂದರೆಯಾದರೂ ದೇಶದ ಉದ್ದಾರಕ್ಕೆ ಮಾಡಿರೋ ಈ ಪ್ರಯತ್ನದಿಂದ ಕಪ್ಪು ಹಣ,ಕಾಳದಂಧೆ ಗಳಂತಹ ಸಮಸ್ಯೆಗಳು ನಿರ್ಮೂಲನೆಗೊಂಡು, ಭಯೋತ್ಪಾದಕಾ ಕೃತ್ಯಗಳು ಬುಡ ಸಮೇತ ನಾಶವಾಗಿ,ನಾವೆಲ್ಲರೂ ಎಂದೆಂದಿಗೂ ನೆಮ್ಮದಿಯ ಉಸಿರಾಡುವಂತಾಗಬಹುದೇ????

Like us on Facebook  The New India Times

POPULAR  STORIES :

ಟ್ರಂಪ್‍ಗಿಂತ 25 ವರ್ಷ ಚಿಕ್ಕವಳಂತೆ ಮೆಲಾನಿಯಾ..!

2.5 ಲಕ್ಷಕ್ಕೂ ಅಧಿಕ ಡೆಪಾಸಿಟ್‍ಗಳಿಗೆ ಟ್ಯಾಕ್ಸ್ ಭೀತಿ..!

500, 1000ರೂ. ನೋಟುಗಳು ಬ್ಯಾನ್ ಆದ್ವೇ..? ನೋ ಟೆನ್ಷನ್..

ಬಂಕ್‍ಗಳಲ್ಲಿ 500, 1000ರೂ. ನೋಟು ಪಡೆಯದಿದ್ದರೆ ಕಠಿಣ ಕ್ರಮ: ಸಚಿವ ಧರ್ಮೇಂದ್ರ ಪ್ರಧಾನ್.

ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್‍ಗೆ ಐತಿಹಾಸಿಕ ಜಯ.

ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ

ತಮ್ಮ ಗುರುವಿಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು: ರವಿವರ್ಮ

Share post:

Subscribe

spot_imgspot_img

Popular

More like this
Related

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...