ವಿಶ್ವಕಪ್ ಗೆದ್ದ ತಂಡದ ಸದಸ್ಯ ಕಚೋರಿ ಮಾರುತ್ತಿದ್ದಾನೆ..! ಮುಂಬರುವ ಏಷ್ಯಾ ಕಪ್ ಗೂ ಆತನೇ ನಾಯಕ..!

Date:

ಆತ ಒಂದು ಕಾಲದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ. ತನ್ನ ಅದ್ಭುತ ಆಟದ ಮೂಲಕ ತಂಡಕ್ಕೆ ಹತ್ತಾರು ಗೆಲುವು ತಂದುಕೊಟ್ಟಿದ್ದ. ಅದರಲ್ಲೂ ಒಂದು ವಿಶ್ವಕಪ್ ಗೆದ್ದ ತಂಡದ ಸದಸ್ಯನೂ ಆಗಿದ್ದ. ಆದರೆ ಇಂದು ಜೀವನೋಪಾಯಕ್ಕಾಗಿ ಬೀದಿ ಬದಿಯಲ್ಲಿ ಚಿಕ್ಕ ಅಂಗಡಿಯನ್ನಿಟ್ಟುಕೊಂಡು ಕಚೋರಿ ಮಾರಾಟ ಮಾಡುತ್ತಿದ್ದಾರೆ. ಅಚ್ಚರಿಯಾದರೂ ಇದು ಸತ್ಯ.
ಹೌದು, ಕಿವುಡ ಮತ್ತು ಮೂಗರ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಗುಜರಾತ್ ನ 30 ವರ್ಷದ ಇಮ್ರಾನ್ ಶೇಕ್ ಇಂದು ತಮ್ಮ ಪತ್ನಿಯೊಂದಿಗೆ ಸೇರಿ ವಡೋದರಾದ ಬೀದಿ ಬದಿಯಲ್ಲಿ ಕಚೋರಿ ಮಾರುತ್ತಿದ್ದಾರೆ. 2005ರಲ್ಲಿ ನಡೆದ ಕಿವುಡ ಮತ್ತು ಮೂಗರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಟ್ರೋಫಿಯನ್ನು ಗೆಲ್ಲುವಲ್ಲಿ ಇಮ್ರಾನ್ ಖಾನ್ ನಿರ್ಣಾಯಕ ಪಾತ್ರ ವಹಿಸಿದ್ದರು.
ವಿಶ್ವಕಪ್ ಪಂದ್ಯಾವಳಿಯಲ್ಲಿ ನೇಪಾಳದ ವಿರುದ್ಧ 70, ನ್ಯೂಜಿಲೆಂಡ್ ವಿರುದ್ಧ 60 ಮತ್ತು ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 62 ರನ್ ಗಳಿಸುವ ಮೂಲಕ ಭಾರತ ಫೈನಲ್ ಗೇರಲು ನೆರವಾಗಿದ್ದರು. ಇನ್ನೂ ಇಂಗ್ಲೆಂಡ್ ವಿರುದ್ಧದ ಫೈನಲ್ ನಲ್ಲಿ ಮಿಂಚು ಹರಿಸಿದ್ದ ಇಮ್ರಾನ್ ಖಾನ್ ಮೊದಲು ಬ್ಯಾಟಿಂಗ್ ನಲ್ಲಿ 40 ರನ್ ಸಿಡಿಸಿದ್ದರು. ನಂತರ ಬೌಲಿಂಗ್ ನಲ್ಲಿ ಮೋಡಿ ಮಾಡಿದ್ದ ಅವರು 3 ವಿಕೆಟ್ ಕಿತ್ತು ಭಾರತ ತಂಡ ವಿಶ್ವಕಪ್ ಎತ್ತಿಹಿಡಿಯಲು ನೆರವಾಗಿದ್ದರು.
ಅಚ್ಚರಿ ಹೇಗಿದೆ ಎಂದರೆ ಅಮೀರ್ ಖಾನ್ ರವರು ಮುಂದಿನ ವರ್ಷದ ಏಪ್ರಿಲ್ ನಲ್ಲಿನಡೆಯಲಿರುವ ಏಷ್ಯಾ ಕಪ್ ಟಿ-20 ಸರಣಿಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಇಷ್ಟೆಲ್ಲಾ ಪ್ರತಿಭೆ ಇದ್ದರೂ ಆರ್ಥಿಕ ಪರಿಸ್ಥಿತಿಯಿಂದಾಗಿ ಹಾಗೂ ಕುಟುಂಬವನ್ನು ಸಲುಹಲೇಬೇಕಾದ ಅನಿವಾರ್ಯತೆಯಿಂದಾಗಿ ಅವರು ಇಂದು ತಮ್ಮ ಜೊತೆ ಸೇರಿ ಕಚೋರಿ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ.
ಒಂದೆಡೆ ಐಪಿಎಲ್ ನಂತಹ ಮಹಾನ್ ಕ್ರೀಡಾ ಕೂಟದ ಸಹಾಯದಿಂದ ಕೋಟಿ ಕೋಟಿ ಹಣ ಮಾಡುವ ಬಿಸಿಸಿಐ ಇಂತಹ ಬಡ ಕ್ರಿಕೆಟಿಗರ ಬೆನ್ನೆಲುಬಾಗಿ ನಿಂತರೆ ಭಾರತ ತಂಡ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವುದರಲ್ಲಿ ಅನುಮಾನವೇ ಇಲ್ಲ.

43_1448702015

  • ರಾಜಶೇಖರ ಜೆ

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...