IND vs AUS ಮೊದಲ ಮ್ಯಾಚ್ ಬೆಂಗಳೂರಿನಿಂದ ವಿಶಾಖಪಟ್ಟಣಂಗೆ ಶಿಫ್ಟ್..!!!
ಈಗಾಗ್ಲೇ ಆಸ್ಟ್ರೇಲಿಯಾದಲ್ಲಿ ದೊಡ್ಡ ಗೆಲುವನ್ನ ಸಾಧಿಸಿ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಇದೇ ತಿಂಗಳ 24 ರಿಂದ ನಮ್ಮ ನೆಲದಲ್ಲಿ ಆಸ್ಟ್ರೇಲಿಯಾ ಜೊತೆಗೆ ಪಂದ್ಯವನ್ನಾಡಲಿದೆ.. ಇದಕ್ಕಾಗಿ ಬೇಕಾದ ಎಲ್ಲ ಸಿದ್ದತೆಗಳು ಸಹ ನಡೆದಿದೆ.. ಇದರ ಅಂಗವಾಗಿ ಮೊದಲ ಟಿ-20 ಮ್ಯಾಚ್ ಅಂದ್ರೆ ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.. 24ಕ್ಕೆ ಈ ಪಂದ್ಯ ಕೂಡ ನಿಗದಿಯಾಗಿತ್ತು.. ಆದರೆ ಈ ಮ್ಯಾಚ್ ವಿಶಾಖಪಟ್ಟಣಂಗೆ ಶಿಫ್ಟ್ ಆಗಿದೆ..
ಹೌದು ಫೆ.20 ರಿಂದ 24ರ ವರೆಗೆ ಏರ್ ಶೋ ನಡೆಯುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸಲು ಅಸಾಧ್ಯ ಎಂದು ಬೆಂಗಳೂರು ಪೊಲೀಸರು ಕೆಎಸ್ ಸಿಎಗೆ ತಿಳಿಸಿದ್ದಾರೆ.. ಅಲ್ಲದೆ ಈ ಏರ್ ಶೋ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ಕೂಡ ಆಗಮಿಸುತ್ತಿರುವುದರಿಂದ ಭದ್ರತೆ ಒದಗಿಸುವುದು ಕಷ್ಟಸಾಧ್ಯವಾಗಿದೆ… ಹೀಗಾಗೆ 24 ರ ಮ್ಯಾಚ್ ಅನ್ನ ವಿಶಾಖಪಟ್ಟಣಂ ಗೆ ಶಿಫ್ಟ್ ಮಾಡಿದೆ..
ಇನ್ನು 27 ರಂದು ವಿಶಾಖಪಟ್ಟಣಂನಲ್ಲಿ ನಡೆಯಬೇಕಿದ್ದ ಮ್ಯಾಚ್ ಅನ್ನ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದ್ದು, ಸಂಜೆ 7 ಗಂಟೆಗೆ ಮ್ಯಾಚ್ ಆರಂಭವಾಗಲಿದೆ.. ಮಾರ್ಚ್ 13 ವರೆಗೆ ಆಸ್ಟ್ರೇಲಿಯಾ ಹಾಗು ಇಂಡಿಯಾ 2 ಟಿ-20 ಹಾಗು 5 ಏಕದಿನ ಪಂದ್ಯಗಳನ್ನ ಆಡಲಿದೆ..