ಗಡಿಯಲ್ಲಿ ಮುಂದುವರೆದ ಪಾಕ್ ಸೈನಿಕರ ಪುಂಡಾಟಿಕೆ: ಸಾವಿನ ಸಂಖ್ಯೆ 8ಕ್ಕೆ

0
56

ಇಂಡೋ ಪಾಕ್ ಗಡಿಯಲ್ಲಿ ಈಗ ಮತ್ತೆ ಗುಂಡಿನ ಸದ್ದು, ಭಾರತೀಯ ಯೋಧರ ಪೋಸ್ಟ್ ಗಳತ್ತ ಪಾಕ್ ಸೈನಿಕರು ಮಾರ್ಟರ್ ಶೆಲ್ ದಾಳಿಯಿಂದಾಗಿ ಅಲ್ಲಿನ ಗ್ರಾಮಸ್ಥರು ಪ್ರಾಣ ತೆರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸಾವಿನ ಸಂಖ್ಯೆ ಎಂಟಕ್ಕೇರಿದ್ದು ಅದರಲ್ಲಿ 2 ಮಕ್ಕಳು ಸೇರಿವೆ ಎಂದು ತಿಳಿದು ಬಂದಿದೆ. ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ಪರಿಣಾಮವಾಗಿ ಅಲ್ಲಿನ ಗ್ರಾಮಸ್ಥರೆ ಊರು ಬಿಡುವಂತಹ ಸ್ಥಿತಿ ಕಂಡು ಬಂದಿದೆ. ಈಗಾಗಲೇ ಭಾರತ ಹಾಗೂ ಪಾಕ್ ಗಡಿಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುರಕ್ಷತೆಯ ದೃಷ್ಠಿಯಿಂದ ಸುಮಾರು 400 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸಾಂಬಾ, ಪೂಂಚ್, ರಾಮಘಡ ಸೆಕ್ಟರ್‍ಗಳಲ್ಲಿ ಶೆಲ್ ದಾಳಿ ದಿನದಿಂದ ದಿನಕ್ಕೆ ತೀವ್ರವಾಗಿದ್ದು, ಶೆಲ್ ದಾಳಿಯಿಂದ ವೃದ್ದರೊಬ್ಬರು ಕುಸಿದು ಸಾವನ್ನಪ್ಪಿದ್ದಾರೆ. ಅಲ್ಲದೇ ದಾಳಿಯಿಂದ ಸುಮಾರು 15ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಾಕ್‍ಗೆ ಭಾರತ ಪ್ರತ್ಯುತ್ತರ..
ಒಂದೆಡೆ ಭಾರತೀಯ ಗಡಿಪ್ರದೇಶಗಳ ಮೇಲೆ ಪಾಕ್ ದಾಳಿ ಮುಂದುವರೆದಿದ್ದರೆ ಅತ್ತ ಭಾರತೀಯ ಸೈನಿಕರು ಕೂಡ ತ್ವರಿತ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಭಾರತದ ಮೇಳಿನ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೈನಿಕರೂ ಗುಂಡಿನ ಮಳೆ ಸುರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮಂಗಳವಾರ ನಡೆದ ವಿಷೇಶ ಕಾರ್ಯಾಚರಣೆಯ ವೇಳೆ ಭಾರತೀಯ ಸೈನಿಕರು ಪಾಕ್ ಸೈನ್ಯದ 14 ಅಡಗು ತಾಣಗಳನ್ನು ಧ್ವಂಸ ಮಾಡಿದ್ದಾರೆ. ಅಂತೆಯೇ ಭಾರತೀಯ ಸೈನಿಕರ ಪೋಸ್ಟ್‍ಗಳತ್ತ ಗುಂಡು ಹಾರಿಸುತ್ತಿದ್ದ ಪಾಕ್‍ನ ಇಬ್ಬರು ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ.

Like us on Facebook  The New India Times

POPULAR  STORIES :

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್

LEAVE A REPLY

Please enter your comment!
Please enter your name here