ಇನ್ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲಸ ಸಿಗಬೇಕು ಅಂದ್ರೆ ಸೇನೆಗೆ ಸೇರಲೇ ಬೇಕು…!
ಸರ್ಕಾರಿ ಕೆಲಸಕ್ಕೆ ಇನ್ಮುಂದೆ 5 ವರ್ಷ ಮಿಲಟರಿ ಕಡ್ಡಾಯ..! ಸೇನೆಯಲ್ಲಿ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಈ ಹೊಸ ನಿಯಮ ಜಾರಿಗೆ ಚಿಂತನೆ ನಡೆದಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಕ್ಕೆ 5ವರ್ಷ ಮಿಲಟರಿ ಸೇವೆ ಕಡ್ಡಾಯ ಎಂಬ ನಿಯಮ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಂಸತ್ ಸ್ಥಾಯಿ ಸಮಿತಿಯಿಂದ ಶಿಫಾರಸ್ಸು ಮಾಡಲಾಗಿದ್ದು , ಈ ನಿಯಮ ಎಷ್ಟರಮಟ್ಟಿಗೆ ಜಾರಿ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.